ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಜಾರಿಗೆ ತಂದ ಗುಜರಾತ್

ಅಹ್ಮದಾಬಾದ್, ಜನವರಿ 14: ಗುಜರಾತ್ ನಲ್ಲಿ ಅಧಿಕಾರಾರೂಢ ಬಿಜೆಪಿಯು ಸೋಮವಾರದಂದು ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ (EWS) ಶಿಕ್ಷಣ ಹಾಗೂ ಉದ್ಯೋಗದಲ್ಲಿ 10% ಮೀಸಲಾತಿ ಜಾರಿಗೆ ತಂದಿದೆ. ಈ ಮೂಲಕ ಹೊಸದಾಗಿ ಜಾರಿಗೆ ತಂದ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಗುಜರಾತ್ ಆಗಿದೆ.

ಕಳೆದ ವಾರವಷ್ಟೇ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10ರಷ್ಟು ಮೀಸಲಾತಿ ಒದಗಿಸುವ ಸಂವಿಧಾನ ತಿದ್ದುಪಡಿಗೆ ಸಂಸತ್ ನಲ್ಲಿ ಒಪ್ಪಿಗೆ ಸಿಕ್ಕಿತ್ತು. ಕಳೆದ ಶನಿವಾರದಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರಿಂದ ಅಂಕಿತ ಸಹ ಬಿದ್ದಿತ್ತು. ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಭಾನುವಾರದಂದು ಮಾತನಾಡಿ, ಜನವರಿ 14ರಿಂದ ಈ ಮೀಸಲಾತಿ ಜಾರಿಗೆ ತರುವುದಾಗಿ ಹೇಳಿದ್ದರು.

ಸದ್ಯಕ್ಕೆ ನಡೆಯುತ್ತಿರುವ ಎಲ್ಲ ನೇಮಕಾತಿಗಳಲ್ಲೂ ಈ ಮೀಸಲಾತಿ ಅನ್ವಯ ಆಗುತ್ತದೆ. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ (ಜನರಲ್ ಮೆರಿಟ್) ಉನ್ನತ ಶಿಕ್ಷಣ ಹಾಗೂ ಸರಕಾರಿ ಉದ್ಯೋಗಗಳಲ್ಲಿ ಉತ್ತರಾಯಣದಿಂದ (ಜನವರಿ 14ರಿಂದ) ಶೇಕಡಾ 10ರಷ್ಟು ಮೀಸಲಾತಿ ದೊರೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Gujarat is the first state to implement 10 percent quota for EWS

ಇನ್ನೂ ಪ್ರಕ್ರಿಯೆಗಳು ಆರಂಭವಾಗದ, ಜನವರಿ 14ಕ್ಕೂ ಮುಂಚೆ ಜಾಹೀರಾತು ನೀಡಿದ ಉದ್ಯೋಗ ಹಾಗೂ ಪ್ರವೇಶಗಳಿಗೂ ಹೊಸ ಮೀಸಲಾತಿ ಅನ್ವಯ ಆಗುತ್ತದೆ. ನೇಮಕಾತಿ ಅಥವಾ ಪ್ರವೇಶ ಪ್ರಕ್ರಿಯೆ-ಪರೀಕ್ಷೆ ಅಥವಾ ಸಂದರ್ಶನ ಜನವರಿ 14ಕ್ಕೆ ಆರಂಭವಾಗಿದ್ದರೆ ಹತ್ತು ಪರ್ಸೆಂಟ್ ಮೀಸಲಾತಿ ಅನ್ವಯ ಆಗುವುದಿಲ್ಲ.

ಸರಕಾರದ ಈ ತೀರ್ಮಾನವನ್ನು ವಿರೋಧ ಪಕ್ಷ ಕಾಂಗ್ರೆಸ್ ವಿರೋಧಿಸಿದೆ. ಈ ಘೋಷಣೆಯಿಂದ ಮುಂಬರುವ ವಿವಿಧ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಗೊಂದಲ ಉಂಟಾಗುತ್ತದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+