ಅಯೋಧ್ಯೆ, ಪ್ರಯಾಗ ಆಯ್ತು, ಈಗ ಕರ್ಣಾವತಿಯಾಗಲಿದೆ ಅಹಮದಾಬಾದ್!
ಅಹಮದಾಬಾದ್, ನವೆಂಬರ್ 07: ಗುಜರಾತಿನ ಅತೀ ದೊಡ್ಡ ನಗರವಾದ ಅಹಮದಾಬಾದ್ ಅನ್ನು ಕರ್ಣಾವತಿ ಎಂದು ಬದಲಿಸಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ.
ಯಾವುದೇ ಕಾನೂನಾತ್ಮಕ ಅಡ್ಡಿ ಇಲ್ಲವೆಂದರೆ ಅಹಮದಾಬಾದ್ ಹೆಸರನ್ನು ಕರ್ಣಾವತಿಯಾಗಿ ಬದಲಿಸಲಾಗುವುದು ಎಂದು ಬಿಜೆಪಿ ಮುಖಂಡ, ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ.
"ವಿಶ್ವಪಾರಂಪರಿಕ ತಾಣದ ಹೆಗ್ಗಳಿಕೆ ಪಡೆ ಭಾರತದ ಏಕೈಕ ನಗರವಾಗಿರುವ ಅಹಮದಾಬಾದಿನ ಹೆಸರನ್ನು ಕರ್ಣಾವತಿಯನ್ನಾಗಿ ಬದಲಿಸಬೇಕು ಎಂಬುದು ಗುಜರಾತಿನ ಹಲವು ಜನರ ಅಭಿಪ್ರಾಯವೂ ಹೌದು. ಹನ್ನೊಂದನೇ ಶತಮಾನದ ಸಮಯದಲ್ಲಿ ಅಹಮದಾಬಾದ್ ಅನ್ನು ಅಶವಲ್ ಎಂದು ಕರೆಯಲಾಗುತ್ತಿತ್ತು. ನಂತರ ಅನ್ಹಿಲ್ವಾರ(ಆಧುನಿಕ ಪಾಟ್ನಾ) ಎಂಬ ರಾಜ್ಯದ ಚಾಲುಕ್ಯ ದೊರೆ ಕರ್ಣ ಎಂಬುವವನು ಅಶವಲ್ ಮೇಲೆ ಆಕ್ರಮಣ ಮಾಡಿ ಇಲ್ಲಿನ ರಾಜನನ್ನು ಸೋಲಿಸಿದ. ನಂತರ ಸಬರಮತಿ ನದಿಯ ದಂಡೆಯ ಮೇಲೆ ಕರ್ಣಾವತಿ ಎಂಬ ಹೆಸರಿನಲ್ಲಿ ರಾಜ್ಯ ನಿರ್ಮಿಸಿದ" ಎಂದು ನಿತಿನ್ ಪಟೇಲ್ ಹೇಳಿದರು.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಮತ್ತು ಫೈಜಾಬಾದ್ ಅನ್ನು ಅಯೋಧ್ಯಾ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬದಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications