ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್​​ನಲ್ಲಿ 24 ಮಂತ್ರಿಗಳ ಹೊಸ ಕ್ಯಾಬಿನೆಟ್ ರಚನೆ: ಪಟ್ಟಿ ಹೀಗಿದೆ

|
Google Oneindia Kannada News

ಅಹಮದಾಬಾದ್, ಸೆಪ್ಟೆಂಬರ್ 16: ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪ್ರಮಾಣ ವಚನ ಸ್ವೀಕಾರ ಮಾಡಿದ ಮೂರು ದಿನಗಳ ನಂತರ ಇಂದು (ಗುರುವಾರ) ನೂತನ ಸಚಿವ ಸಂಪುಟ​ ಕೂಡ ರಚನೆಯಾಗಿದೆ. 24 ಸಚಿವರು ಇಂದು ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಗೆ ಒಂದೇ ವರ್ಷ ಬಾಕಿ ಇರುವಾಗ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿಯನ್ನು ಬದಲು ಮಾಡಿ, ಹೊಸದಾಗಿ ಭೂಪೇಂದ್ರ ಪಟೇಲ್‌ರನ್ನು ಸಿಎಂ ಮಾಡಿದ್ದಲ್ಲದೆ, ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದವರೂ ಕೂಡ ಹೊಸಬರೇ ಆಗಿದ್ದಾರೆ. ಗುಜರಾತ್​ ರಾಜ್ಯಪಾಲ ಆಚಾರ್ಯ ದೇವವ್ರತ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್​ ರೂಪಾನಿ, ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​, ಬಿಜೆಪಿ ಗುಜರಾತ್​ ಅಧ್ಯಕ್ಷ ಸಿ.ಆರ್. ಪಾಟೀಲ್​, ಬಿಜೆಪಿ ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವ್​ ಮತ್ತು ಕೇಂದ್ರದ ವೀಕ್ಷಕರಾದ ಬಿ.ಎಲ್​. ಸಂತೋಷ್​ ಹಾಜರಿದ್ದರು.

The Formation Of A New Cabinet Of 24 Ministers In Gujarat: Here The Full List

ಇಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಲ್ಲಿ 10 ಮಂದಿ ಸಂಪುಟ ದರ್ಜೆಯ ಸ್ಥಾನ ಮಾನ ಪಡೆದಿದ್ದಾರೆ. ಉಳಿದ 14 ಜನರಿಗೆ ರಾಜ್ಯದರ್ಜೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಈ 14 ಜನರಲ್ಲಿ ಐವರಿಗೆ ಸ್ವತಂತ್ರ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ.

ಸಂಪುಟ ದರ್ಜೆಯ ಸಚಿವ ಪಟ್ಟಿ ಹೀಗಿದೆ
ರಾಜೇಂದ್ರ ತ್ರಿವೇದಿ, ಜಿತು ವಾಘನಿ, ಋಷಿಕೇಶ ಪಟೇಲ್​, ರಾಘವ್​​ಜಿ ಪಟೇಲ್​, ಪೂರ್ಣೇಶ್​ ಮೋದಿ, ಕಾನುಭಾಯಿ ದೇಸಾಯಿ, ಕಿರೀಟ್​ ಸಿನ್ಹಾ ರಾಣಾ, ನರೇಶ್​ ಪಟೇಲ್​, ಪ್ರದೀಪ್​ ಸಿನ್ಹಾ​ ಪಾರ್ಮಾರ್​ ಮತ್ತು ಅರ್ಜುನ್​ ಸಿಂಗ್​ ಚೌಹಾಣ್​.

ರಾಜ್ಯ ದರ್ಜೆಯ ಸಚಿವ ಪಟ್ಟಿ ಹೀಗಿದೆ
ಹರ್ಷ ಸಾಂಘ್ವಿ, ಜಗದೀಶ್​ ಪಾಂಚಾಲ್​, ಬ್ರಿಜೇಶ್​ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್​, ಮುಕೇಶ್​ ಪಟೇಲ್​, ನಿಮಿಶಾ ಸುತಾರ್​, ಅರವಿಂದ್ ರೈಯಾನಿ, ಕುಬೇರ್ ದಿಂಡೋರ್, ಕೀರ್ತಿಸಿನ್ಹಾ ವಘೇಲಾ, ರಾಜೇಂದ್ರಸಿನ್ಹಾ ಪರ್ಮಾರ್, ರಾಘವ ಜಿ ಮಕ್ವಾನಾ, ವಿನೋದ್ ಮೊರಾದಿಯಾ ಮತ್ತು ದೇವಭಾಯಿ ಮಲಮ್. ಇವರಲ್ಲಿ ಹರ್ಷ ಸಾಂಘ್ವಿ, ಜಗದೀಶ್​ ಪಾಂಚಾಲ್​, ಬ್ರಿಜೇಶ್​ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್​ ಅವರಿಗೆ ಸ್ವತಂತ್ರ ಕಾರ್ಯ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.

The Formation Of A New Cabinet Of 24 Ministers In Gujarat: Here The Full List

ಇಂದು ಸಂಪುಟ ಮೊದಲ ಸಭೆ
ಗುರುವಾರ ಮಧ್ಯಾಹ್ನದ ವೇಳೆಗೆ ಹೊಸ ಸಚಿವರೆಲ್ಲ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದಾದ ಬಳಿಕ ಕ್ಯಾಬಿನೆಟ್​ನ ಮೊದಲ ಸಭೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ನೇತೃತ್ವದಲ್ಲಿ ಸರ್ಣಿಮ್​ ಸಂಕುಲ್​​ನಲ್ಲಿ ನಡೆದಿದೆ. ಇನ್ನು ವಿಶೇಷ ಸಂಗತಿಯೆಂದರೆ ರಾಜ್ಯಪಾಲ ಆಚಾರ್ಯ ದೇವವೃತರಿಗೂ ಕೂಡ ಸಚಿವ ಸ್ಥಾನ ಸಿಕ್ಕಿದ್ದರಿಂದ, ಗುಜರಾತ್​ಗೆ ಹೊಸ ರಾಜ್ಯಪಾಲರ ನೇಮಕವೂ ಆಗಬೇಕಿದೆ.

ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಕೆಲ ದಿನಗಳ ಹಿಂದೆ ದಿಢೀರ್ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ರಾಜೀನಾಮೆ ಬಳಿಕ ಪ್ರತಿಕ್ರಿಯೆ ನೀಡಿದ್ದ ಅವರು, ಈವರೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುವೆ. ಮುಂದೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುವುದಾಗಿ ಹೇಳಿದ್ದರು.

2016ರ ಆಗಸ್ಟ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣ ವಚನ ಸ್ವೀಕರಿಸಿದ್ದರು. ಐದು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು, ಇದೀಗ ಅವರು ಸಿಎಂ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

English summary
The 24 new ministers were sworn in today at the Raja Bhavan in Gandhinagar, the capital of Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X