ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮ ದೇಗುಲಕ್ಕೆ ತೆರಳಿದ್ದ ದಲಿತ ಕುಟುಂಬದ ಮೇಲೆ ಹಲ್ಲೆ

|
Google Oneindia Kannada News

ಅಹ್‌ಮದಾಬಾದ್, ಅಕ್ಟೋಬರ್ 30: ಗುಜರಾತ್‌ನಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ತೆರಳಿದ್ದ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಕುರಿತು 20 ಮಂದಿ ವಿರುದ್ಧ ದೂರು ದಾಖಲಾಗಿದೆ.

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ಗಾಂಧಿಧಾಮ ಎಂಬ ಪಟ್ಟಣದ ಬಳಿ ಇರುವ ಹಳ್ಳಿಯ ದೇಗುಲಕ್ಕೆ ದಲಿತ ಕುಟುಂಬದ ಆರು ಮಂದಿ ಭೇಟಿ ನೀಡಿದ್ದರು.

ಆದರೆ ಅವರು ದಲಿತರು ಎಂಬ ಕಾರಣಕ್ಕೆ ಸುಮಾರು 20 ಮಂದಿ ಅವರ ಮೇಲೆ ದಾಳಿ ನಡೆಸಿದ್ದಾರೆ. 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್​ ಅಧಿಕಾರಿ ಕಿಶೋರಸಿಂಹ ಝಲಾ ಹೇಳಿದ್ದಾರೆ.

Gujarat: 20 Booked After 6 Dalit Family Members Attacked For Visiting Temple

ಅಲ್ಲಿಗೆ ಜಾನುವಾರುಗಳನ್ನು ಬಿಟ್ಟಿದ್ದಾರೆ ಎಂದೂ ಕೂಡ ಸಂತ್ರಸ್ತ ಕುಟುಂಬ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗೋವಿಂದ್​ ವಾಘೇಲಾ ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಆ 20 ಮಂದಿಯನ್ನು ಹಿಡಿಯಲು ನಾವು ಎಂಟು ತಂಡಗಳನ್ನು ರಚಿಸಿದ್ದೇವೆ ಎಂದು ಝಲಾ ಮಾಹಿತಿ ನೀಡಿದ್ದಾರೆ. ಗೋವಿಂದ್​ ವಾಘೇಲಾ ಮತ್ತು ಅವರ ಕುಟುಂಬದವರು ನೆರ್​ ಎಂಬ ಗ್ರಾಮದ ಶ್ರೀರಾಮನ ದೇವ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಪ್ರಾಣ ಪ್ರತಿಷ್ಠಾ ಆಚರಣೆ ನಡೆಸಿದ್ದರು.

ಅಕ್ಟೋಬರ್​ 20ರಂದು ಇವರೆಲ್ಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದಾದ ನಂತರ ಅಕ್ಟೋಬರ್​ 26ರಂದು ವಾಘೇಲಾ ಅವರ ಅಂಗಡಿಯಲ್ಲಿ ಇದ್ದಾಗ, ಸುಮಾರು 20 ಜನರು ಅವರ ಹೊಲಕ್ಕೆ ಹೋಗಿ ಬೆಳೆ ನಾಶ ಮಾಡಿದ್ದಾರೆ.

ಹಲ್ಲೆಗೊಳಗಾದ ಗೋವಿಂದ್​ ವಾಘೇಲಾ ಮತ್ತು ಅವರ ತಂದೆ ಜಗಭಾಯ್​ ಎಂಬುವರಿಂದ ಪ್ರತ್ಯೇಕ ದೂರು ದಾಖಲಾಗಿದೆ. ಇವರಿಬ್ಬರೂ ಒಂದೇ ತರಹದಲ್ಲಿ ದೂರು ನೀಡಿದ್ದಾರೆ. ಸುಮಾರು 20 ಜನರು ಬಂದು ನಮ್ಮ ಮೇಲೆ ದಾಳಿ ನಡೆಸಿದರು ಎಂದು ಹೇಳಿದ್ದಾರೆ.

Recommended Video

ಇವತ್ತು ನಡೆಯಬೇಕಿದ್ದ ಅಪ್ಪು ಅಂತ್ಯಕ್ರಿಯೆಯನ್ನು ಮುಂದೂಡಿದ್ದು ಯಾಕೆ? | Oneindia Kannada

English summary
Six members of a Dalit family were allegedly attacked by around 20 men for visiting a temple in their village near Gandhidham town in Gujarat's Kutch district, police said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X