ವಿಡಿಯೋ: ಗುಜರಾತ್ ಪ್ರವಾಹ, ಬೀದಿಯಲ್ಲಿ ಈಜಾಡಿದ ಮೊಸಳೆ!
ಅಹ್ಮದಾಬಾದ್, ಆಗಸ್ಟ್ 01: ಭಾರಿ ಮಳೆಯಿಂದಾಗಿ ಗುಜರಾತ್‌ನ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಇಂದು ಮಳೆ ಸ್ವಲ್ಪ ಬಿಡುವು ನೀಡಿದೆ. ಆದರೆ ಹೊಸ ಅಪಾಯವೊಂದು ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಎದುರಾಗಿದೆ.
ಪ್ರವಾಹ ಪೀಡಿತ ವಡೋದರ ನಗರದ ನಜನಿಬಿಡ ಬೀದಿಯಲ್ಲಿ ಮೊಸಳೆಯೊಂದು ಈಜಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ.
#GujaratRains #Vadodara #NDRFHQ
— Mritunjay Shukla (@prof_mshukla) August 1, 2019
the crocodiles
around darshnam central park vadodara pic.twitter.com/GPfUerEP7c
ವಿಶ್ವಾಮಿತ್ರಿ ನದಿಯ ಪ್ರವಾಹ ಏರಿ ವಡೋದರಾ ನಗರದ ತುಂಬೆಲ್ಲಾ ನೀರು-ನೀರಾಗಿದ್ದು, ನದಿಯಲ್ಲಿದ್ದ ಜಲಚರಗಳು ನಗರವನ್ನು ಸೇರಿವೆ. ಇದರಲ್ಲಿ ಮೊಸಳೆಗಳಂತಹಾ ಅಪಾಹಕಾರಿ ಜೀವಿಗಳೂ ಇವೆ.

ಮೊಸಳೆಯೊಂದು ಬೀದಿಯಲ್ಲಿ ನಿಂತಿದ್ದ ನೀರಿನಲ್ಲಿ ಈಜಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಡೋದರಾದ ವರಾಸಿಯಾ ಏರಿಯಾದಲ್ಲಿ ಮೊಸಳೆ ಈಜಾಡುತ್ತಿದ್ದುದ್ದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.
ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ವಡೋದರಾದ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ರೈಲು ಸಂಚಾರ ಸ್ಥಗಿತಗೊಂಡಿದೆ. ಗುಜರಾತಿನಲ್ಲಿರುವ ವಡೋದರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. 12 ಗಂಟೆಗಳಲ್ಲಿ 400 ಮಿ.ಮೀನಷ್ಟು ಮಳೆಯಾಗಿದೆ.












Click it and Unblock the Notifications