ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ, ಕೇವಲ ಅಣ್ಣ-ತಂಗಿ ಪಕ್ಷವಾಗಿ ಮಾರ್ಪಟ್ಟಿದೆ: ಜೆ.ಪಿ ನಡ್ಡಾ

ಅಹಮದಬಾದ್, ಏಪ್ರಿಲ್ 29 : ಕಾಂಗ್ರೆಸ್‌ ಪಕ್ಷ ಅಣ್ಣ-ತಂಗಿ ಪಕ್ಷ ಇದ್ದಂತೆ, ದೇಶದಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳು ಕುಟುಂಬ ಪಕ್ಷಗಳಾಗಿ ಮಾರ್ಪಟ್ಟಿವೆ, ನಮ್ಮ ದೇಶದಲ್ಲಿ ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷ ಉಳಿದಿಲ್ಲ, ಬಿಜೆಪಿ ಮಾತ್ರ ಉಳಿದಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಗುಜರಾತ್‌ನ ಅಹಮದಬಾದ್‌ ನಗರದಲ್ಲಿ ಜಿಡಿಎಂಸಿ ಸಮಾವೇಶದಲ್ಲಿ ಭಾಗಿಯಾಗಿದ್ದ ಜೆ.ಪಿ ನಡ್ಡಾ ಬಿಜೆಪಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕಾಂಗ್ರೆಸ್‌ ಇನ್ನು ಮುಂದೆ ರಾಷ್ಟ್ರೀಯ ಪಕ್ಷವಲ್ಲ, ಅವರು ಈಗ ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದ್ದಾರೆ. ಅದು ಕೂಡ ಇನ್ನು ಸ್ವಲ್ಪ ದಿನಗಳಲ್ಲಿ ಬದಲಾಗುತ್ತದೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷವು ಭಾರತೀಯವಲ್ಲ, ಅದು ರಾಷ್ಟ್ರೀಯವೂ ಅಲ್ಲ. ಅದು ಕೇವಲ ಅಣ್ಣ-ತಂಗಿ ಪಕ್ಷವಾಗಿದೆ. ಇಂದು ಕಾಂಗ್ರೆಸ್‌ ಎಲ್ಲಿದೆ," ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ ಮುಂದುವರೆದು "ಪ್ರಾದೇಶಿಕ ಪಕ್ಷಗಳು ಇತ್ತೀಚೆಗೆ ಕುಟುಂಬ ಪಕ್ಷಗಳಾಗಿ ಬದಲಾಗುತ್ತಿವೆ. ಇದಕ್ಕೆ ಸಾಕಷ್ಟು ಉದಾಹರಣೆ ಕೊಟ್ಟ ನಡ್ಡಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಪೀಪಲ್ ಡೆಮಾಕ್ರಟಿಕ್ ಪಕ್ಷ, ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷಗಳನ್ನ ಕಾಣಬಹುದಾಗಿದೆ," ಎಂದು ಹೇಳಿದ್ದಾರೆ.

congress is just a brother and sister party says Bjp chief nadda

ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ತಮಿಳುನಾಡಿನ ಡಿಎಂಕೆ ಕೂಡ ಒಂದು ಕುಟುಂಬ ಪಕ್ಷ, ಇತ್ತ ಮಹಾರಾಷ್ಟ್ರದಲ್ಲೂ ಕೂಡ ಶಿವಸೇನೆ ಮತ್ತು ಎನ್‌ಸಿಪಿ ಈ ಪ್ರಾದೇಶಿಕ ಪಕ್ಷಗಳಲ್ಲ, ಬದಲಾಗಿ ಕುಟುಂಬ ಪಕ್ಷಗಳಾಗಿ ಮಾರ್ಪಟ್ಟಿದೆ. ಕೇವಲ ಬಿಜೆಪಿ ಪಕ್ಷ ಮಾತ್ರ ಯಾವುದೇ ಕುಟುಂಬದ ಆಧಾರಿತ ಪಕ್ಷವಾಗದೇ ರಾಷ್ಟ್ರೀಯ ಪಕ್ಷವಾಗಿ ಉಳಿದುಕೊಂಡಿದೆ ಎಂದು ಗರ್ವದಿಂದ ಹೇಳಿಕೊಂಡಿದ್ದಾರೆ.

congress is just a brother and sister party says Bjp chief nadda

ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಈಗಿನಿಂದಲೇ ರಾಜಕೀಯ ಪಕ್ಷಗಳು ಪ್ರಚಾರದ ಅಖಾಡಕ್ಕೆ ಇಳಿದಿದೆ. ಅದರಲ್ಲೂ ಬಿಜೆಪಿ ಪಕ್ಷ ಮುಂಚೂಣಿಯಲ್ಲಿದ್ದು, ಪ್ರಚಾರದ ಭರಾಟೆ ಶುರು ಮಾಡಿದೆ. ಸದ್ಯ ಈ ಹಿನ್ನಲೆ ಜೆ.ಪಿ ನಡ್ಡಾ ಕೂಡ ಅಹಮದಬಾದ್‌ಗೆ ಒಂದು ದಿನಗಳ ಕಾಲ ಭೇಟಿ ನೀಡಿದ್ದು, ಪ್ರಚಾರವನ್ನು ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+