• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಹಮದಾಬಾದ್ ಮೆಟ್ರೋ ಉದ್ಘಾಟನಾ ಕೊಡುಗೆ, ಪ್ರಯಾಣಿಕರಿಗೆ ಉಚಿತ ಪ್ರಯಾಣ ಭಾಗ್ಯ

|

ಅಹಮದಾಬಾದ್, ಮಾರ್ಚ್ 06: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ 6.5 ಕಿ.ಮೀ ದೂರ ಮೊದಲ ಹಂತದ ಅಹಮದಾಬಾದ್ ಮೆಟ್ರೋ ರೈಲು ಸೇವೆ ಕಾರ್ಯಾರಂಭ ಮಾಡಿದೆ. ಪ್ರಯಾಣಿಕರಿಗೆ ಉದ್ಘಾಟನಾ ಕೊಡುಗೆಯಾಗಿ ಪ್ರಯಾಣಿಕರಿಗೆ 10 ದಿನಗಳ ಉಚಿತ ಪ್ರಯಾಣ ಭಾಗ್ಯವನ್ನು ಘೋಷಿಸಲಾಗಿದೆ.

ವಸ್ತ್ರಾಲ್ ನಿಂದ ಅಪರೆಲ್ ಪಾರ್ಕ್ ತನಕದ ಮೆಟ್ರೋ ರೈಲು ಬೆಳಗ್ಗೆ 10 ರಿಂದ 10 ದಿನಗಳ ಕಾಲ ಉಚಿತವಾಗಿ ಪ್ರಯಾಣಿಸಬಹುದು. ಮಾರ್ಚ್ 16ರಂದು ಎರಡನೇ ರೈಲು ಆರಂಭವಾಗಲಿದೆ. ಮೊದಲ ಹಂತದ ಯೋಜನೆಗೆ 10,773 ಕೋಟಿ ರು ವೆಚ್ಚವಾಗಿದ್ದು, ಜಪಾನ್ ನಿಂದ 6,066 ಕೋಟಿ ರು ಸಾಲ ಪಡೆಯಲಾಗಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿ(ಜೆಐಸಿಎ)ಯಿಂದ ಹೂಡಿಕೆ ಮಾಡಲಾಗಿದೆ.

1000 ಕೋಟಿಯ ದೇವಾಲಯ ಸಮುಚ್ಚಯಕ್ಕೆ ಮಾರ್ಚ್ 4 ಮೋದಿ ಶಂಕುಸ್ಥಾಪನೆ

ಮೊದಲ ಹಂತದ 40.3 ಕಿ.ಮೀ ಪೈಕಿ 6.5 ಕಿ.ಮೀ ಸುರಂಗ ಮಾರ್ಗದಲ್ಲಿದ್ದು, ಮಿಕ್ಕಿದ್ದು ಎಲಿವೇಟೆಡ್ ಮಾರ್ಗ ಹೊಂದಿದೆ. ಉತ್ತರ- ದಕ್ಷಿಣ ಕಾರಿಡಾರ್ ನಡುವೆ ಎಪಿಎಂಸಿ ಇಂದ ಮೊಟೆರಾ 18.87 ಕಿ.ಮೀ, ಪೂರ್ವ -ಪಶ್ಚಿಮ ಕಾರಿಡಾರ್ ಥಾಲ್ತೇಜ್ ನಿಂದ ವಾಸ್ತ್ರಾಲ್ ತನಕ 21.16 ಕಿ.ಮೀ ತನಕ ಸಂಪರ್ಕ ಒದಗಿಸಲಿದೆ. ಎರಡು ಕಾರಿಡಾರ್ ಗಳು 32 ನಿಲ್ದಾಣಗಳಿವೆ. ಮೊದಲ ಹಂತ 2021ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಎರಡನೇ ಹಂತದಲ್ಲಿ ಮೊಟೆರಾ ಕ್ರಿಕೆಟ್ ಸ್ಟೇಡಿಯಂನಿಂದ ಗಾಂಧಿನಗರದ ಮಹಾತ್ಮಾ ಮಂದಿರ ತನಕ ಸಾಗಲಿದೆ.

English summary
Prime Minister Narendra Modi inaugurated a 6.5-km stretch of phase one of the Ahmedabad Metro train service on Monday. After inaugurating the 6.5 km stretch, connecting Vastral to Apparel park area here, Modi also took a ride on the metro. Ahmedabad metro was thrown open for public from Wednesday which began its free ride from 10am. The free ride will continue for 10 days till the second train is introduced from March 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X