ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Olxನಲ್ಲಿ ಏಕತಾ ಪ್ರತಿಮೆಗೆ 30 ಸಾವಿರ ಕೋಟಿ ರು ಫಿಕ್ಸ್ ಏಕೆ?

|
Google Oneindia Kannada News

ಅಹಮದಾಬಾದ್, ಏಪ್ರಿಲ್ 6: ವಿಶ್ವದ ಅತಿ ಎತ್ತರ ಪ್ರತಿಮೆ ಎನಿಸಿಕೊಂಡಿರುವ ಏಕತಾ ಪ್ರತಿಮೆ(Statue of Unity) ಆನ್ ಲೈನ್ ನಲ್ಲಿ ಮಾರಾಟಕ್ಕಿಡಲಾಗಿತ್ತು. ಸರಿ ಸುಮಾರು 30, 000 ಕೋಟಿ ರು ಬೆಲೆ ಕಟ್ಟಿ, ಈ ಹಣವನ್ನು ಕೊವಿಡ್19 ವಿರುದ್ಧ ಹೋರಾಟಕ್ಕೆ ಸರ್ಕಾರ ಬಳಸಲಿ ಎಂದು ವ್ಯಕ್ತಿಯೊಬ್ಬ ತನ್ನ ಜಾಹೀರಾತಿನಲ್ಲಿ ಹೇಳಿಕೊಂಡಿದ್ದ. ಸದ್ಯ ಜಾಹೀರಾತು ತೆಗೆದು ಹಾಕಲಾಗಿದೆ, ಆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ

ಗುಜರಾತಿನ ನರ್ಮದಾ ಜಿಲ್ಲೆಯ ಕೇವಡಿಯಾದಲ್ಲಿರುವ 182 ಮೀಟರ್ ಎತ್ತರದ ಪ್ರತಿಮೆಯನ್ನು 2018ರಲ್ಲಿ ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದ್ದರು. ಇಲ್ಲಿ ತನಕ ಲಕ್ಷಾಂತರ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ.

ಕಳೆದ ಶನಿವಾರದಂದು ಅನಾಮಿಕ ವ್ಯಕ್ತಿಯೊಬ್ಬ ಒಎಲ್ಎಕ್ಸ್ ನಲ್ಲಿ ಏಕತಾ ಪ್ರತಿಮೆಯನ್ನು 30,000 ಕೋಟಿ ರು ಗಳಿಗೆ ಮಾರಾಟಕ್ಕಿಟ್ಟಿದ್ದ. ಇದರಿಂದ ಬಂದ ಹಣವನ್ನು ಆರೋಗ್ಯ ಇಲಾಖೆ ಉಪಕರಣ, ಸಾಧನ, ವೆಂಟಿಲೇಟರ್ ಖರೀದಿಗೆ ಬಳಸುವ ಮೂಲಕ ಕೊವಿಡ್19 ರೋಗಿಗಳಿಗೆ ಸರ್ಕಾರ ಸೂಕ್ತ ಚಿಕಿತ್ಸೆ ಒದಗಿಸಬಹುದು ಎಂದು ಹೇಳಿಕೊಂಡಿದ್ದ.

Ad Seeks 30,000 Crores For Statue Of Unity To Fight COVID-19, Case Filed

ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ಕುರಿತಂತೆ ಸುದ್ದಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸ್ಮಾರಕ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರ ಮೊರೆ ಹೊಕ್ಕಿದ್ದಾರೆ. ಐಪಿಸಿ ಸೆಕ್ಷನ್ 420 ಅನ್ವಯ ವಂಚನೆ, ಫೋರ್ಜರಿ, ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಪಿಟಿ ಚೌಧುರಿ ಹೇಳಿದ್ದಾರೆ.

English summary
A case was filed against an unknown person in Gujarat for placing an online advertisement to "sell" the Statue of Unity in Kevadiya in Narmada district for Rs 30,000 crore to meet the government's expenses for hospitals and medical infrastructure to fight the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X