ಕೋವಿಡ್ ಸೋಂಕಿತರಿಗೆ 3 ಸಾವಿರ ಕೆಜಿ ಸೇಬು ಹಂಚಿಕೆ!
ಅಹಮದಾಬಾದ್, ಅಕ್ಟೋಬರ್ 13: ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಕೋವಿಡ್ ರೋಗಿಗಳಿಗೆ 3 ಸಾವಿರ ಕೆಜಿ ಸೇಬು ವಿತರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,52,764.
ಅಹಮದಾಬಾದ್‌ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರದಲ್ಲಿ ಮಂಗಳವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ದೇವಾಲಯವನ್ನು ಮುಚ್ಚಲಾಗಿತ್ತು.
ಮೊದಲ ದಿನ ದೇವರಿಗೆ 3 ಸಾವಿರ ಕೆಜಿ ಸೇಬು ಹಣ್ಣಿನ ನೈವೇದ್ಯವನ್ನು ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಹಣ್ಣಗಳನ್ನು ಜೋಡಿಸಿ ಇಡಲಾಗಿದೆ. ಈ ಹಣ್ಣುಗಳನ್ನು ಕೋವಿಡ್ ರೋಗಿ, ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ.

"ಪೂಜೆಯ ಬಳಿಕ ಸೇಬು ಹಣ್ಣುಗಳನ್ನು ಕೋವಿಡ್ ರೋಗಿಗಳು, ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಭಕ್ತರು ಸಹ ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ" ಎಂದು ಅರ್ಚಕರು ಹೇಳಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,52,764. ಸಕ್ರಿಯ ಪ್ರಕರಣಗಳು 15,335. ಇದುರೆಗೂ ರಾಜ್ಯದಲ್ಲಿ 3,577 ಜನರು ಮೃತಪಟ್ಟಿದ್ದಾರೆ. ರಾಜಧಾನಿ ಅಹಮದಾಬಾದ್‌ನಲ್ಲಿಯೇ 39,110 ಪ್ರಕರಣಗಳಿವೆ.












Click it and Unblock the Notifications