ಟೆಂಪೋ-ಟ್ರಕ್ ಡಿಕ್ಕಿ: ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಸಾವು

ವಡೋದರ(ಗುಜರಾತ್), ಫೆಬ್ರವರಿ 23: ವಡೋದರ ಜಿಲ್ಲೆಯ ಮಹಾವುದ್ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟೆಂಪೋ ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ದುರ್ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾವುದ್ ಗ್ರಾಮದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಈ ದುರಂತದಲ್ಲಿ 12 ಮಂದಿ ಮೃತರಾಗಿದ್ದು, ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಎಸ್ಎಸ್ ಜಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವಡೋದರಾ ಎಸ್ಪಿ ಸುಧೀರ್ ದೇಸಾಯಿ ಹೇಳಿದರು.

12 killed in tempo-truck collision in Gujarat

ಮದುವೆ ಮನೆಗೆ ತೆರಳಿ ತಮ್ಮ ಗ್ರಾಮಕ್ಕೆ ಮಿನಿ ಟ್ರಕ್ ಮಾದರಿ ವಾಹನದಲ್ಲಿ ಹಿಂತಿರುಗಿದ್ದ ಮಂದಿ ಮೃತರಾಗಿದ್ದಾರೆ. ಸಾವ್ಲಿ ತಾಲೂಕಿಮ ಗೋತ್ಡಾ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವಿತ್ತು. 12 ಮಂದಿ ಪೈಕಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಿಕ್ಕವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಪಾದ್ರಾ ತಾಲೂಕಿನ ಭೋಜ್ ಹಾಗೂ ರಾನು ಗ್ರಾಮದವರು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+