ವಸುಧೇಂದ್ರ, ವೈದ್ಯರ ಕಥೆ ರಂಗಶಂಕರದಲ್ಲಿ ನೋಡಿ
ನಮ್ಮ ದಿನ ನಿತ್ಯದ ಜಂಜಾಟದಲ್ಲಿ ಏನೆಲ್ಲಾ ಮರೆತಿದ್ದೇವೆ ಎಂದು ನೆನಪಿಸಲು ವಟಿ ಕುಟೀರ ಎರೆಡು ಸುಂದರ ನಾಟಕಗಳನ್ನು ಸೆಪ್ಟೆಂಬರ್ 11 ಮತ್ತು 12 ರಂದು ರಂಗಶಂಕರದಲ್ಲಿ ನಿಮ್ಮ ಮುಂದೆ ತರಲಿದೆ.
ಮೌಲ್ಯಗಳ ಮರೆತಿರುವ ಈ ಕಾಲದಲ್ಲಿ ಈ ರಂಗ ಪ್ರಯೋಗ ಸ್ವಾಗತಾರ್ಹ, ವಸುಧೇಂದ್ರ ಅವರ 'ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ' ಹಾಗು ಶ್ರೀನಿವಾಸ್ ವೈದ್ಯರ 'ಶ್ರದ್ಧಾ'. ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುವ ಹಿರಿಯರ ನಾಣುಡಿಯನ್ನು ಆಧುನಿಕತೆಗೆ ಸಿಲುಕಿ ಬದಲಾಗಿದೆ, ತಂದೆ, ತಾಯಿಯನ್ನು ಮೂಲೆಗುಂಪಾಗಿಸಿ ರಜ ಸಿಕ್ಕಾಗಲೆಲ್ಲ ದೇವರನ್ನು ಹುಡುಕುತ್ತ ಊರು ಕೇರಿಯಾದಿಗೆ ಹುಡುಕುತ್ತಾ ಸಾಗಿದ್ದಾನೆ. ಈ ರಂಗ ಪ್ರಯೋಗದ ಸಾರ್ಥಕತೆ ತಂದೆ ತಾಯಿಯನ್ನು ಪ್ರೀತಿಸುವವರು ಪ್ರತಿಯೊಬ್ಬರೂ ನೋಡಿದಾಗ ಮಾತ್ರ.

ಮಡದಿಯಾಗಿ ಹೊಸ ಮನೆ ಸೇರುವ ಹೆಣ್ಣು, ಆ ಮನೆಯ ಸೊಸೆಯಾಗಿ ಬೆಳಗುವ ನಂದಾದೀಪವಾಗಿ, ಅಮ್ಮನಾಗಿ, ಅಜ್ಜಿಯಾಗಿ ಆಯಾ ಪಾತ್ರಗಳಿಗೆ ಒಗ್ಗಿಕೊಳ್ಳುವಂತೆ ಅವಳ ಸುತ್ತ ಹುಟ್ಟಿ ನಿಲ್ಲುವ ಸಮಸ್ಯೆಗಳನ್ನು ಎದೆ ಗುಂದದೆ ಹೇಗೆ ನಿಭಾಯಿಸುತ್ತಾಳೆ, ಹಾಗೆಯೇ ರೈಲಿನಲ್ಲಿ ತಿರುಪತಿಗೆ ಹೋಗುವಾಗ ಕಳೆದು ಹೋದ ಲೋಟವನ್ನು ಮರೆಯುವುದೇ ಇಲ್ಲ. ಫಳ ಫಳ ಹೊಳೆಯುವ ಪಾತ್ರೆಗಳಲ್ಲಿ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಅಮ್ಮ ತಾನಿರಲಿ ಬಿಡಲಿ ನಮ್ಮ ಮನದಲ್ಲಿ ನಮ್ಮೊಂದಿಗೆ ಸದಾ ಇರುತ್ತಾಳೆ.
ಅಪ್ಪ ಬರಲಿ ಇರು ನೀ ಮಾಡಿದ್ದು ಹೇಳ್ತೀನಿ ಅಂದಾಗ ಎಲ್ಲಾ ಮಕ್ಕಳು ಹೆದರುವುದು ಸಹಜ, ಗಡಸು ಸ್ವಭಾವ, ಕೋಪಿಷ್ಠ, ಬಹಳ ಶಿಸ್ತು ಎನ್ನುವ ಪದಗಳೇ ಅಪ್ಪನನ್ನು ಪ್ರತಿಬಿಂಬಿಸುವುದು ಸಹಜ ಆದರೆ ಅದರ ಹಿಂದೊಂದು ಪ್ರೀತಿಸುವ ಮನಸಿದೆ, ಆಶಿಸುವ ಹೃದಯವಿದೆ, ಪ್ರೋತ್ಸಾಹಿಸುವ ಶ್ರೀಮಂತಿಕೆ ಇದೆ ಎನ್ನುವುದು ಅರಿಯದೆ ಹೋಗಿದ್ದೇವೆ. ಚಳಿಯಿರಲಿ, ಮಳೆಯಿರಲಿ, ಸುಡುವ ಬಿಸಿಲೆ ಇರಲಿ ನಮ್ಮನ್ನು ರಕ್ಷಿಸುವ ಅಪ್ಪನ ಆ ಔದಾರ್ಯತೆ ನಮ್ಮನ್ನು ಸೋಕಿದಾಗ ಅವರ ತ್ಯಾಗದ ಮುಂದೆ ನಾವು ಕುಬ್ಜರಾಗಿಬಿದುತ್ತೇವೆ.
ನಾಟಕಗಳು : ಶ್ರೀನಿವಾಸ ವೈದ್ಯ ಅವರ 'ಶ್ರದ್ಧ' ಹಾಗೂ ವಸುಧೇಂದ್ರ ಅವರ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು'
ದಿನಾಂಕ: ಸೆಪ್ಟೆಂಬರ್ 11 ಹಾಗೂ 12
ಸ್ಥಳ: ರಂಗಶಂಕರ, ಜೆಪಿ ನಗರ, ಬೆಂಗಳೂರು
ಸಮಯ: ಸಂಜೆ 7.30ಕ್ಕೆ ಸರಿಯಾಗಿ
ಟಿಕೆಟ್ ಗಳಿಗೆ : 9880695659
ಆನ್ ಲೈನ್ ಟಿಕೆಟ್ ಗಾಗಿ ಕ್ಲಿಕ್ ಮಾಡಿ
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications