ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಚಿತ್ರದಲ್ಲಿ 'ಕನ್ನಡ ಚಿಂತನೆ', ತಾಳಮದ್ದಲೆ

By Mahesh
|
Google Oneindia Kannada News

ಬೆಂಗಳೂರು, ಸೆ.5: ಬನಶಂಕರಿಯಲ್ಲಿರುವ ಸುಚಿತ್ರಾ ಸಭಾಂಗಣದಲ್ಲಿ ಕನ್ನಡ ಚಿಂತನೆ ಹಾಗೂ ತಾಳಮದ್ದಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ವಿವರ ಇಂತಿದೆ:
* 8ನೇ ಸೆಪ್ಟೆಂಬರ್, 2013ರ ಭಾನುವಾರ
* ಕನ್ನಡ ಚಿಂತನೆ, ಸಂಜೆ 5ಕ್ಕೆ
* ಸುಚಿತ್ರ ಸಭಾಂಗಣ, ಬನಶಂಕರಿ, ಬೆಂಗಳೂರು

ತಾಳಮದ್ದಲೆ ಕಾರ್ಯಕ್ರಮ.
ಪ್ರಸಂಗ: ಅಂಗದ ಸಂಧಾನ

ರಂಗದ ಮೇಲೆ:

ಪ್ರಹಸ್ತ : ಡಾ: ಪ್ರಭಾಕರ ಜೋಷಿ
ಅಂಗದ : ಡಾ: ಸರ್ಪಂಗಳ ಈಶ್ವರ ಭಟ್ಟರು
ಶ್ರೀರಾಮ : ಪ್ರೊ. ಕೆ.ಇ. ರಾಧಾಕೃಷ್ಣ
ಸುಗ್ರೀವ : ಸುಧನ್ವ ದೀರ್ಜೆ
ರಾವಣ: ಎಸ್.ಎನ್.ಪಂಜಾಜೆ
ಭಾಗವತರು :-ಪದ್ಯಾಣ ಗಣಪತಿ ಭಟ್ಟರು
ಚೆಂಡೆ : ರವಿಶಂಕರ್ ಬಡಿಕಿಲ
ಮದ್ದಲೆ: ಅವಿನಾಶ್ ಬೈಪಡಿತ್ತಾಯ

ಅವಧಿ: ಸಂಜೆ 5:30 - 8:00

Talamaddale Event at Suchitra Bangalore

ತಾಳಮದ್ದಲೆ: ದೇವಸ್ಥಾನದ ಅಥವಾ ಮನೆಯ ಚಾವಡಿಯಲ್ಲಿ, ಪೇಟೆಯ ಸಭಾಗೃಹಗಳಲ್ಲಿ ನಿಜಜೀವನದ ಉಡುಗೆ-ತೊಡುಗೆಗಳಲ್ಲಿಯೇ ಕುಳಿತು ಆಟದ ಪ್ರಸಂಗಗಳನ್ನು ಹಿಮ್ಮೇಳದೊಂದಿಗೆ, ಅರ್ಥದಾರಿಗಳೆಂದು ಹೆಸರಾದ ಪಾತ್ರಧಾರಿಗಳು ವಾಚಿಕಾಭಿನಯದ ಮೂಲಕ ಪ್ರಸ್ತುತಪಡಿಸುವ ಯಕ್ಷಗಾನ ರಂಗದ ಒಂದು ಕವಲಾದ ಪ್ರಕಾರ. ಸುಮಾರು 80 ವರ್ಷಗಳಿಂದೀಚೆಗೆ ಸಾಹಿತ್ಯ ಪ್ರಧಾನವಾದ ರಂಗಭೂಮಿಯಾಗಿ ಬೆಳೆದಿದೆ.

ಪ್ರೊ..ಕೆ.ಇ.ರಾಧಾಕೃಷ್ಣ: ಶಿಕ್ಷಣ ತಜ್ಞರು, ಶೇಷಾದ್ರಿಪುರಂ ಕಾಲೇಜು, ಸುರಾನಾ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿದ್ದವರು. ಸದಾ ಸಂಸ್ಕೃತಿ ಚಿಂತನೆಯಲ್ಲಿ ನಿರತರು. ಪ್ರಸ್ತುತ ಬಿ.ಎಸ್.ಇ.ಎಸ್ ಕಾಲೇಜಿನಲ್ಲಿ ಕಾರ್ಯದರ್ಶಿಗಳು. ಸಾಹಿತ್ಯ, ಕಲೆ, ಇವರ ಆಸಕ್ತಿಯ ವಿಷಯಗಳು. ವಿವಿಧ ವಿಷಯಕವಾದ ಹತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ.

ಹಲವು ಪತ್ರಿಕೆಗಳಿಗೆ ಅಂಕಣ ಬರಹ ನಿರ್ವಹಿಸಿದ್ದಾರೆ. 'ಸಾಮುದ್ರ' ಎಂಬ ಸಂಸ್ಥೆ ಸ್ಥಾಪಿಸಿ ಯುವ ಪೀಳಿಗೆಯವರ 'ವ್ಯಕ್ತಿತ್ವ ವಿಕಸನ' ಬೆಳೆಸುವಲ್ಲಿ ಕಾರ್ಯಪ್ರವೃತ್ತರು. ಮಹಾಕಾವ್ಯಗಳಿಗೆ ಯಕ್ಷಗಾನ ಪ್ರಸಂಗಗಳು ಹಾಗೂ ತಾಳಮದ್ದಲೆಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸಿದ್ದಾರೆ. ಭ್ರಷ್ಟ ವ್ಯವಸ್ಥೆಯನ್ನು ಎದುರಿಸಲು ರಾಜಕಾರಣಕ್ಕೂ ಧುಮುಕಿದ್ದುಂಟು. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಭಾಜನರು. ಕಲೆ ಹಾಗೂ ಶಿಕ್ಷಣ ಬೇರೆ ಬೇರೆಯಲ್ಲ ಎಂಬುದು ಅವರ ನಿಲುವು.

ಪದ್ಯಾಣ ಗಣಪತಿ ಭಟ್ಟರು: ಪ್ರಸಿದ್ಧ ಕಲಾವಿದ ವಂಶವಾದ ಪದ್ಯಾಣ ಗಣಪತಿ ಭಟ್ಟರು. ಇಂದಿನ ಯಕ್ಷಗಾನ ಭಾಗವತಿಕೆಯಲ್ಲಿ ಮುಂಚೂಣಿಯಲ್ಲಿರುವ ಹೆಸರು. ಪ್ರಖ್ಯಾತ ಭಾಗವತರಾಗಿದ್ದ ಶ್ರೀ ಮುಂಬಾಡಿ ನಾರಾಯಣ ಭಾಗವತರ ಶಿಷ್ಯರೂ, ಖ್ಯಾತ ಪುಟ್ಟು ನಾರಾಯಣ ಭಾಗವತರ ಮೊಮ್ಮಗನೂ ಆದ ಗಣಪತಿ ಭಟ್ಟರು ಕಳೆದ ಐದು ದಶಕಗಳಿಂದಲೂ ಯಕ್ಷಗಾನದ ಭಾಗವರತಾಗಿ ಹಾಡುತ್ತಾ ಬಂದಿದ್ದಾರೆ.

ಅತ್ಯಂತ ಕಿರುವಯಸ್ಸಿನಲ್ಲಿ ಯಕ್ಷಗಾನ ಪ್ರಪಂಚಕ್ಕೆ ಕಾಲಿಟ್ಟ ಶ್ರೀಯುತರಿಗೆ ಪರಿಣಾಮಕಾರಿ ಯಾದ ಧ್ವನಿ, ಹಾಸ್ಯಪ್ರಜ್ಞೆ ಹಾಗೂ ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸುವ ಕಲೆಯು ಕರಗತವಾಗಿದೆ. ಸುದೀರ್ಘ ಕಾಲ ಹಾಡುಗಾರಿಕೆಯಲ್ಲಿರುವ ಗಣಪತಿ ಭಟ್ಟರು ಯಕ್ಷಗಾನ ಹಾಗೂ ತಾಳಮದ್ದಲೆ ಪ್ರಸಂಗಗಳೆರಡರಲ್ಲಿಯೂ ಎರಡು ತಲೆಮಾರಿನ ಕಲಾವಿದರಿಗಾಗಿ ಹಾಡಿದ್ದಾರೆ. ಸುರತ್ಕಲ್, ಎಡನೀರು ಹಾಗೂ ಹೊಸನಗರ ತಂಡಗಳೊಂದಿಗೆ ವ್ಯಾಪಕವಾಗಿ ಸಂಚಾರ ಮಾಡಿದ್ದಾರೆ. ಎಲ್ಲಾ ಕಲಾವಿದರಿಗೂ ಪ್ರಿಯರಾದ ಗಣಪಣ್ಣನಾಗಿ ಪ್ರಖ್ಯಾತರು.

ಡಾ.ಸರ್ಪಂಗಳ ಈಶ್ವರ ಭಟ್ಟರು: ಪಾತ್ರಕ್ಕೂ ಸೈ-ಅರ್ಥಗಾರರಾಗಿಯೂ ಸೈ-ಭಾಗವತಿಕೆಗೂ ಸೈ ಎನ್ನುವ ಸರ್ಪಂಗಳ ಈಶ್ವರ ಭಟ್ಟರು ಯಕ್ಷಗಾನದ ಆಲ್ರೌಂಡರ್ ವಿಶಿಷ್ಠ ಪ್ರತಿಭೆಯ ಸರ್ಪಂಗಳ ಈಶ್ವರ ಭಟ್ಟರು. ವೃತ್ತಿನಿರತ ಹವ್ಯಾಸಿಗಳು. ಕನ್ನಡ ಹಾಗೂ ಹಿಂದಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಭಟ್ಟರು ಮಂಗಳೂರಿನಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಯಕ್ಷಗಾನ ಹಾಗೂ ತಾಳಮದ್ದಲೆಗಳಲ್ಲಿ ಈಶ್ವರ ಭಟ್ಟರು ಎಲ್ಲಾ ತಂಡಗಳ ಸಹಜ ಆಯ್ಕೆ. ಕಳೆದ 40 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಭಟ್ಟರ ಸಹಕಾರಿ ಸ್ವಭಾವದ ದೃಷ್ಠಿ ಕೋನ ಹಾಗೂ ವಿವಿಧ ಪಾತ್ರಗಳನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಗೊಳಿಸುವ ವಿಶಿಷ್ಠ ಪ್ರತಿಭೆಯಾಗಿ ಸರ್ವಜನ ಪ್ರಿಯರು.

English summary
Dr. K.E Radhakrishna & Team presents Kannada chitane programme and Padyana Ganapati Bhat and team presents Talamaddale 'Angada Sandhana' prasanga at Suchitra Auditorium, Banashankari, Bangalore on Sept 8
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X