ಬೆಗ್ಗರ್ ಅಂದಿದ್ದಕ್ಕೆ ರಾಹುಲ್ ಗೆ ಸಮನ್ಸ್

ಬೆಂಗಳೂರು, ಸೆ.4: ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಹೊರಡಿಸಿರುವ ಚಂಡೀಗಡದ ನ್ಯಾಯಾಲಯ, ಸೆಪ್ಟೆಂಬರ್ 19ರಂದು ಹಾಜರಾಗುವಂತೆ ಸೂಚಿಸಲಾಗಿದೆ.

ರಾಹುಲ್ ಗಾಂಧಿ ಅವರಿಗೆ ನೇರವಾಗಿ ಸಮನ್ಸ್ ತಲುಪಿಸಲು ಸೂಚಿಸಲಾಗಿದೆ. ಈ ಮುಂಚೆಯು ನ್ಯಾಯಾಲಯ ಸಮನ್ಸ್ ಹೊರಡಿಸಿತ್ತು.ಆದರೆ, ಎಂಟು ಸಲವೂ ಅವರಿಗೆ ಸಮನ್ಸ್ ನೀಡಿರಲಿಲ್ಲ.

ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಅನ್ಯ ರಾಜ್ಯಗಳಿಗೆ ಕೆಲಸ ಮತ್ತು ಭಿಕ್ಷೆ ಬೇಡಲು ಹೋಗುತ್ತಾರೆ ಎಂದು 2011ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಮೆರವಣಿಗೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಅರವಿಂದ್ ಠಾಕೂರ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

Chandigarh court issues summons to Rahul Gandhi over 'beggar' remark

ಉತ್ತರ ಪ್ರದೇಶದಲ್ಲಿ ಫುಲ್ ಪುರದ ಪ್ರಚಾರ ಕಾರ್ಯದಲ್ಲಿ ರಾಹುಲ್ ಗಾಂಧಿ ಅವರು ಉತ್ತರಪ್ರದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ 'ಇನ್ನೆಷ್ಟು ಕಾಲ ಉತ್ತರ ಪ್ರದೇಶ ಹಾಗೂ ಬಿಹಾರದ ಜನರು ಮಹಾರಾಷ್ಟ್ರ ಹಾಗೂ ಪಂಜಾಬ್ ಗೆ ತೆರಳಿ ಉದ್ಯೋಗಕ್ಕಾಗಿ ಭಿಕ್ಷೆ ಬೇಡುತ್ತೀರಾ? ಎಂದು ಪ್ರಶ್ನಿಸಿದ್ದರು.

ಉತ್ತರ ಪ್ರದೇಶದ ಜನರು ಕಠಿಣ ಶ್ರಮಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಆದರೆ, ಈ ರೀತಿ ಪರ ರಾಜ್ಯಕ್ಕೆ ಹೋಗಿ ಭಿಕ್ಷೆ ಎತ್ತುವುದು ಹೇಗೆ ಸಹಿಸಿಕೊಂಡಿದ್ದೀರಾ ಎಂದು ಕೇಳಿದ್ದರು. ರಾಹುಲ್ ಗಾಂಧಿ ಅವರ ಭಾಷಣದ ಉದ್ದೇಶ ಸರಿ ಇದ್ದರೂ ಭಿಕ್ಷೆ ಬೇಡುವುದನ್ನು ಬಳಸಿದ್ದು ಉತ್ತರಪ್ರದೇಶದ ಜನರನ್ನು ಕೆರಳಿಸಿತ್ತು. 2011ರಲ್ಲಿ ಸಾಮಾಜಿಕ ಕಾರ್ಯಕರ್ತ ವಕೀಲ ಅರವಿಂದ್ ಠಾಕೂರ್ ಅವರು ರಾಹುಲ್ ಗಾಂಧಿ ವಿರುದ್ಧ ಮೊಕದ್ದಮೆ ಹೂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+