ಕಾರಿನಲ್ಲಿ ಸಲ್ಲಾಪದಲ್ಲಿದ್ದ ಪ್ರೇಮಿಗಳ ಬೆದರಿಸಿ ರೇಪ್: ಶಿಕ್ಷೆ

3 ವರ್ಷದ ಹಿಂದೆ 2010ರ ಜುಲೈನಲ್ಲಿ ಸಿಂಗಾಪುರ ನಗರದ ಹೊರವಲಯದಲ್ಲಿ ಏನಾಗಿತ್ತೆಂದರೆ
16 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರನ ಜತೆ ಕಾರಿನಲ್ಲಿ ಚಕ್ಕಂದ ಆಡುತ್ತಿದ್ದಳು. ಇದನ್ನು ಕಂಡ ಶಿವಕುಮಾರ್ ಸೆಲ್ವರಾಜ್ ಪೊಲೀಸ್ ಮಾರುವೇಷದಲ್ಲಿ ಬಂದು ಪ್ರೇಮಿಗಳನ್ನು ಬೆದರಿಸಿದ್ದ. ಅಷ್ಟೇ ಅಲ್ಲದೆ ಹುಡುಗಿಯನ್ನು ಬಿಟ್ಟು ಪರಾರಿಯಾಗುವಂತೆ ಯುವಕನಿಗೆ ಸೂಚಿಸಿದ್ದ.
ಅತ್ತ ಯುವಕ ಪರಾರಿಯಾಗುತ್ತಿದ್ದಂತೆ ಪಾಪಿ ಶಿವಕುಮಾರ ಹದಿಹರಯದ ಬಾಲಕಿ ಮೇಲೆ ಅದೇ ಕಾರಿನಲ್ಲಿ ಅತ್ಯಾಚಾರವೆಸಗಿಬಿಟ್ಟಿದ್ದ. ಆ ಕುಕೃತ್ಯದಲ್ಲಿ ಶಿವಕುಮಾರನಿಗೆ ಇನ್ನೂ ಇಬ್ಬರು ನೆರವಾಗಿದ್ದರು. ಅವರಿಗೂ ಈಗ ಶಿಕ್ಷೆಯಾಗಿದೆ ಅನ್ನಿ.
ಏನಪ್ಪಾ ಶಿಕ್ಷೆ ಅಂದರೆ ಪ್ರಕರಣವನ್ನು ಆಲಿಸಿದ ಸಿಂಗಾಪುರದ ಹೈಕೋರ್ಟ್ ತೀರ್ಪು ನೀಡಿದೆ. ಮೂರೂ ತಪ್ಪಿತಸ್ಥರಿಗೆ ತಲಾ 12 ವರ್ಷ ಜೈಲು ಮತ್ತು ತಲಾ 12 ಲಾಠಿಏಟು ಶಿಕ್ಷೆ ನೀಡಿದೆ.
ಅಂದಹಾಗೆ 41 ವರ್ಷದ ಶಿವಕುಮಾರ್ ಸೆಲ್ವರಾಜ್ aircraft technician ಆಗಿದ್ದಾನೆ. ಕೋರ್ಟಿನಲ್ಲಿ ವಿಚಾರಣೆ ವೇಳೆ ಹಾಜರಿದ್ದ ಶಿವಕುಮಾರನ ಪತ್ನಿ, ತೀರ್ಪು ಪ್ರಕಟವಾಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. (PTI)












Click it and Unblock the Notifications