ರೂಪಾಯಿ ಮೌಲ್ಯ ಗಿರಗಿರ: ಗಗನವೇರಿತು ಚಿನ್ನದ ದರ

rupee-value-breaches-66-mark-gold-rates-surge
ನವದೆಹಲಿ, ಆಗಸ್ಟ್ 27: ಅಮೆರಿಕನ್ ಡಾಲರ್ ಬೇಡಿಕೆ ಅಧಿಕಗೊಂಡು, ರುಪಾಯಿ ಮೌಲ್ಯ ಗಿರಗಿರನೇ ತರಗೆಲೆಯಂತೆ ಉದುರುತ್ತಿರುವಾಗ ಮಂಗಳವಾರ 10 ಗ್ರಾಂ ಚಿನ್ನದ ಬೆಲೆ 32,677 ರೂ. ಗೆ ತಲುಪಿತು. ಸಿರಿಯಾದಲ್ಲಿನ ಆಂತರಿಕ ಕ್ಷೋಭೆಯೂ ಏಷ್ಯಾ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದೆ.

ಒಂದು ಡಾಲರಿಗೆ 66 ರೂಪಾಯಿಯಷ್ಟು ದಾಖಲೆ ಕುಸಿತವಾಗಿದೆ. ಸತ್ವಹೀನ ರೂಪಾಯಿಯಿಂದಾಗಿ ಸರಕು ವಾಯಿದಾ ಮಾರುಕಟ್ಟೆಯಲ್ಲಿ (ಎಂಸಿಎಕ್ಸ್) ಅಕ್ಟೋಬರ್ ತಿಂಗಳ ವಾಯಿದಾ ಚಿನ್ನದ ಬೆಲೆ 801 ರೂ ಏರಿಕೆಯಾಗಿದೆ. ತನ್ಮೂಲಕ ಚಿನ್ನದ ಬೆಲೆ 32,677 ರೂ ಆಗಿದ್ದು, ಇದು ದಾಖಲೆ ಬೆಲೆಯಾಗಿದೆ. ಇದೇ ವೇಳೆ ಸೆಪ್ಟೆಂಬರ್ ತಿಂಗಳ ವಾಯಿದಾ ಬೆಳ್ಳಿಯ ಬೆಲೆಯಲ್ಲಿಯೂ ದಿಢೀರನೆ ಏರಿಕೆ ಕಾಣಿಸಿಕೊಂಡಿದೆ. ಬೆಳ್ಳಿಯ ಬೆಲೆ 1,488 ರೂ ಏರಿಕೆ ಆಗಿದ್ದು, ಕೆಜಿ ಗೆ 55,275 ರೂ ಆಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಧಾರಣೆ ಆಗಸ್ಟ್ 27ರಂದು ಹೀಗಿತ್ತು:
Bangalore - Rs 30,150
Chennai - Rs 30,450
Delhi - Rs 30,460
Hyderabad - Rs 30,200
Kolkata - 30,330
Mumbai - Rs 30,130

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಧಾರಣೆ ಆಗಸ್ಟ್ 26ರಂದು ಹೀಗಿತ್ತು:
Bangalore - Rs 29,550
Chennai - Rs 30,480
Delhi - Rs 29,490
Hyderabad - Rs 29,600
Kolkata - 29,560
Mumbai - Rs 29,420

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+