ಎಸ್ಕಲೇಟರ್ನಲ್ಲಿ ಡಾಲರ್, ವೆಂಟಿಲೇಟರ್ ನಲ್ಲಿ ರುಪಾಯಿ!
ಬೆಂಗಳೂರು, ಆ.21: ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ ನೀಗಿಸಲು ಯುಪಿಎ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಭಾರಿ ಚರ್ಚೆ ನಡೆದಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ರುಪಾಯಿ ಅಪಮೌಲ್ಯ ಅಪಹಾಸ್ಯಗೀಡಾಗುತ್ತಿದೆ.
ರುಪಾಯಿ ಮೌಲ್ಯ ಕುಸಿದರೆ ಯಾವ ರೀತಿ ಹೊರೆ ಎದುರಿಸಬೇಕಾಗುತ್ತದೆ? ಯುಪಿಎ ಸರ್ಕಾರ ಬೆಲೆ ಏರಿಕೆ ಬಾಂಬ್ ಮತ್ತೆ ಸ್ಫೋಟಗೊಳ್ಳುತ್ತದೆಯೇ? ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ. ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 64.44 ರು ಸರ್ವಕಾಲಿಕ ಕುಸಿತ ಕಂಡಿದೆ.
ಸಾಮಾಜಿಕ ಜಾಲ ತಾಣದಲ್ಲಿ ಕ್ಷಣ ಕ್ಷಣಕ್ಕೂ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ರುಪಾಯಿ ಮೌಲ್ಯದ ಬಗ್ಗೆ ಟ್ವೀಟ್ ಗಳ ಮಹಾಪೂರ ಹರಿದಿದೆ. ಸಂಗ್ರಹಿತ ಟ್ವೀಟ್ ಗಳು ಇಲ್ಲಿವೆ ನೋಡಿ...
|
ಪ್ರಚಾರ ಪ್ರಿಯೆ ಟ್ವೀಟ್
ಪ್ರಚಾರ ಪ್ರಿಯೆ ಬಾಲಿವುಡ್ ನಟಿ ಪೂನಂಗೂ ರುಪಾಯಿ ಕುಸಿತಕ್ಕೂ ಏನು ಸಂಬಂಧ

ಹಣ ದುಬ್ಬರ ಏರಿಕೆ
ಹಣ ದುಬ್ಬರ ಏರಿಕೆ ಇಂಧನ ದರ ಏರಿಕೆಯಾಗುತ್ತಿದ್ದಂತೆ ಸರಕು ಸಾರಿಗೆ ವೆಚ್ಚ ದುಬಾರಿಯಾಗುತ್ತದೆ. ದಿನ ನಿತ್ಯ ಬಳಸುವ ತರಕಾರಿ, ಹಣ್ಣು ಹಂಪಲು ಬೆಲೆ ಗಗನಕ್ಕೇರುತ್ತದೆ. ಈಗಾಗಲೇ ತರಕಾರಿ ಬೆಲೆ ಏರಿಕೆಯಿಂದ ಜನ ಕಷ್ಟಪಡುತ್ತಿದ್ದಾರೆ.
ಆಹಾರ ಹಾಗೂ ರೀಟೈಲ್ ಕ್ಷೇತ್ರದ ಎಲ್ಲಾ ಉತ್ಪನ್ನಗಳ ಬೆಲೆ ಏರಿಕೆ ಖಾತ್ರಿ. ಡಾಲರ್ ಎದುರು ರುಪಾಯಿ ಮೌಲ್ಯ ಶೇ 10 ರಷ್ಟು ಕುಸಿದರೂ ಹಣ ದುಬ್ಬರ ದರ ಶೇ 0.60 ರಷ್ಟು ಏರಿಕೆಯಾಗುತ್ತದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಜೊತೆ ಪ್ರತಿ ರಾಜ್ಯಗಳ ಪ್ರತ್ಯೇಕ ವ್ಯಾಟ್ ತೆರಿಗೆ ಸೇರಿ ನಿತ್ಯ ತುತ್ತು ಎತ್ತಲು ಭಾರಿ 'ಬಿಲ್' ತೆರಬೇಕಾಗುತ್ತದೆ.
|
ಹೀಗೊಂದು ಸಲಹೆ
ಕಾರು ಬಳಕೆ ಕಡಿಮೆ ಮಾಡಿ ಎಂದು ಟ್ವೀಟ್

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ತೈಲ ಬೆಲೆ ಏರಿಕೆ ಖಂಡಿತ. ನಮ್ಮ ತೈಲ ಕಂಪನಿಗಳು 64.44 ರು ಪ್ರತಿ ಡಾಲರ್ ನಂತೆ ನೀಡಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ $104.96 ನಷ್ಟಿದೆ.
ಹೀಗಾಗಿ ಪೆಟ್ರೋಲ್, ಡೀಸೆಲ್ ಇನ್ನಿತರ ಇಂಧನ ದರ ಏರಿಕೆಗೆ ತಯಾರಾಗಿ. ರುಪಾಯಿ ಮೌಲ್ಯ ಕುಸಿದಾಗ ಇಂಧನ ದರ ಏರಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜನ ಸಾಮಾನ್ಯರಿಗೆ ಇದು ಮೊದಲ ಹೊಡೆತ.
|
ಅವರವರ ಚಿಂತೆ ಅವರಿಗೆ
ಬೀರ್ ದರ ಏರಿಕೆ ಬಗ್ಗೆ ಒಂದು ಟ್ವೀಟ್, ಆಮದು ಮದ್ಯದ ಬೆಲೆ ಕೂಡಾ ಶೇ 30ರಷ್ಟು ಏರಿಕೆಯ ಸೂಚನೆ ಸಿಕ್ಕಿದೆ.

ಬಡ್ಡಿದರ ಏರಿಕೆ
ಹಣದುಬ್ಬರ ಏರಿಕೆಯಾಗುತ್ತಿದ್ದಂತೆ ಆರ್ ಬಿಐ ಬಲವಂತವಾಗಿ ಹೆಚ್ಚಿನ ಬಡ್ಡಿದರ ಬಯಸುತ್ತದೆ. ಮನೆ, ಕಾರು ಕೊಳ್ಳುವ ಕನಸು ಹೊತ್ತು ಸಾಲ ಪಡೆಯಲು ಯೋಜನೆ ಹಾಕಿಕೊಂಡವರಿಗೆ ಭಾರಿ ಹೊಡೆತ ಬೀಳಲಿದೆ. ವೈಯಕ್ತಿಕ ಸಾಲ, ಗೃಹಸಾಲ ಎಲ್ಲಾ ರೀತಿಯ ಸಾಲಗಳ ಬಡ್ಡಿದರ ಏರಿಕೆಯಾಗಲಿದೆ.
|
ಕೋಮಾ ಕೋಮಾ ಕೋಮಾ
ಎಸ್ಕಲೇಟರ್ನಲ್ಲಿ ಡಾಲರ್, ವೆಂಟಿಲೇಟರ್ ನಲ್ಲಿ ರುಪಾಯಿ!

ಅಭಿವೃದ್ಧಿ ಕುಂಠಿತ
ದೇಶದ ವಿತ್ತೀಯ ಕೊರತೆ ನಿವಾರಣೆ ಆಗದಿದ್ದರೆ, ಹಣ ದುಬ್ಬರ ಏರುತ್ತಿದ್ದರೆ, ಬಡ್ಡಿದರ ಹೊರೆಯಾದರೆ, ದೈನಂದಿನ ವ್ಯವಹಾರ ತುಂಬಾ ದುಬಾರಿಯಾದರೆ ಅಭಿವೃದ್ಧಿ ತಾನೇ ತಾನಾಗಿ ಕುಂಠಿತಗೊಳ್ಳುತ್ತದೆ. ಆಗ ಜನ ಸಾಮಾನ್ಯರ ಉಳಿತಾಯಕ್ಕೆ ಕತ್ತರಿ ಬೀಳುತ್ತದೆ.
ಇದರ ಪರಿಣಾಮ ನೇರವಾಗಿ ಹೂಡಿಕೆ ಹಾಗೂ ಅಭಿವೃದ್ಧಿಯ ಮೇಲಾಗುತ್ತದೆ. ಜನ ಸಾಮಾನ್ಯರ ಆರ್ಥಿಕ ಜೀವನ ಮಟ್ಟ ಸುಧಾರಣೆ ಕನಸಾಗೇ ಉಳಿಯುತ್ತದೆ.
|
ಅಸಾರಾಮ್ ಬಾಪು ಅಧಃಪತನ
ಆರ್ಥಿಕ ಅಧಃಪತನ, ನೈತಿಕ ಅಧಃಪತನ ಒಟ್ಟಾರೆ freefall












Click it and Unblock the Notifications