ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ ಮತ್ತಷ್ಟು ಸುಲಭ

ನಗರದ ರಾಷ್ಟ್ರೀಕೃತ ಮತ್ತು ಖಾಸಗಿ ಸೇರಿದಂತೆ ಒಟ್ಟು 50 ಬ್ಯಾಂಕ್ ಗಳನ್ನು ಆಸ್ತಿ ತೆರಿಗೆ ಪಾವತಿ ಮಾಡಲು ಆಯ್ಕೆ ಮಾಡಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಇರುವ ಐಡಿಬಿಐ ಮತ್ತು ಎಂ.ಜಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಮೇಯರ್ ನೂತನ ವ್ಯವಸ್ಥೆ ಉದ್ಘಾಟಿಸಿದ್ದಾರೆ.
ಈ ವ್ಯವಸ್ಥೆ ಕುರಿತು ಮಾಹಿತಿ ನೀಡಿರುವ ವೆಂಕಟೇಶ್ ಮೂರ್ತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ 50 ಬ್ಯಾಂಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ನಗರದ ಜನರು ತಮ್ಮ ಹತ್ತಿರ ಬ್ಯಾಂಕ್ ಗಳಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬಹುದು ಎಂದು ಹೇಳಿದರು.
ಸದ್ಯ ಐಡಿಬಿಐ, ಕಾರ್ಪೋರೇಷನ್, ಕೆನರಾ, ಇಂಡಿಯನ್ ಓವರ್ ಸಿಸ್, ಐಸಿಐಸಿಐ, ಎಚ್ ಡಿಎಫ್ ಸಿ, ಕೋಟಕ್ ಮಹೀಂದ್ರಾ, ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹಾರಾಷ್ಟ್ರ ಬ್ಯಾಂಕ್ ಇಂಡಸ್ ಇಂಡ್ ಸೇರಿದಂತೆ 50 ಬ್ಯಾಂಕ್ ಗಳಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದೆ.
ಆಗಸ್ಟ್ ತಿಂಗಳ ಕೊನೆಯವಾರದಿಂದ ಈ ಎಲ್ಲಾ ಬ್ಯಾಂಕ್ ಗಳಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಅಕ್ಟೋಬರ್ ವೇಳೆಗೆ ನಗರದ 350 ಬ್ಯಾಂಕ್ ಗಳಲ್ಲಿ ಈ ಸೌಲಭ್ಯ ಒದಗಿಸಲಾಗುವುದು ಎಂದು ವೆಂಕಟೇಶ್ ಮೂರ್ತಿ ಭರವಸೆ ನೀಡಿದ್ದಾರೆ. (ಆನ್ ಲೈನ್ ನಲ್ಲಿ ಆಸ್ತಿ ತೆರಿಗೆ ಪಾವತಿ ಸುಲಭ : ಬಿಬಿಎಂಪಿ)
ಆನ್ ಲೈನ್ ಮೂಲಕವೂ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಒದಗಿಸಲಾಗಿದೆ. ಆದರೆ, ಎಲ್ಲಾ ಜನರಿಗೂ ಇದು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಬ್ಯಾಂಕ್ ಗಳಲ್ಲಿ ಈ ವ್ಯವಸ್ಥೆ ಒದಗಿಸಲಾಗಿದೆ ಎಂದು ಐಡಿಬಿಐ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮೈಥಿಲಿ ಸುಬ್ರಮಣಿಯನ್ ಹೇಳಿದರು. ಬ್ಯಾಂಕ್ ನಲ್ಲಿ ತೆರಿಗೆ ಪಾವತಿಸುವ ಜನರಿಗೆ ಕಂಪ್ಯೂಟರಿಕೃತ ರಸೀದಿ ದೊರೆಯಲಿದೆ ಎಂದರು. (ಆನ್ ಲೈನ್ ಮೂಲಕ ಆಸ್ತಿ ತೆರಿಗೆ ವಾವತಿಸಿ)












Click it and Unblock the Notifications