ಕೆಎಸ್ಆರ್ ಟಿಸಿ ಬಸ್ ಬಾಡಿಗೆ ದರ ಇಳಿಕೆ

ಮದುವೆ, ಪ್ರವಾಸ, ಶೈಕ್ಷಣಿಕ ಪ್ರವಾಸ ಮತ್ತು ಇತರೆ ಸಭೆ ಸಮಾರಂಭಗಳಿಗೆ ಒಪ್ಪಂದದ ಮೂಲಕ ನೀಡಲಾಗುವ ಎಲ್ಲಾ ಬಸ್ ಗಳ ಬಾಡಿಗೆ ದರವನ್ನು ಕೆಎಸ್ಆರ್ ಟಿಸಿ ಪರಿಷ್ಕರಣೆ ಮಾಡಿದೆ. ಆದ್ದರಿಂದ ಕಿ.ಮೀ. ಒಂದಕ್ಕೆ2 ರಿಂದ 8 ರೂ.ವರೆಗೆ ದರ ಇಳಿಕೆಯಾಗಲಿದೆ.
ಯಾವುದು ಎಷ್ಟು ಇಳಿಕೆ : ಕರ್ನಾಟಕ ಸಾರಿಗೆ ಬಸ್ ಗಳ ಬಾಡಿಗೆ ದರ ಪ್ರತಿ ಕಿ.ಮೀ.ಗೆ 34 ರೂ. ಇತ್ತು ಅದನ್ನು 32 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಕರ್ನಾಟಕ ಸಾರಿಗೆಯ 12 ಮೀ.ಚಾಸಿ ಬಸ್ ದರವನ್ನು 38 ರೂ.ಗಳಿಗೆ ಇಳಿಕೆ ಮಾಡಲಾಗಿದೆ.
ನೂತನ ದರದಂತೆ ರಾಜಹಂಸ ಎಕ್ಸಿಕ್ಯೂಟಿವ್ ಬಸ್ ಬಾಡಿಗೆ ಪ್ರತಿ ಕಿ.ಮೀ.ಗೆ 40 ರೂ.ಗೆ ಇಳಿಕೆಯಾಗಿದೆ. ರಾಜಹಂಸ 12 ಮೀ.ಚಾಸಿಯ ಬಾಡಿಗೆದರ 49 ರೂ.ಗಳಿಗೆ ಕಡಿಮೆಯಾಗಿದೆ.
ವೋಲ್ವೊ ಸೆಮಿ ಸ್ಲೀಪರ್ ದರವನ್ನು 56 ರೂ.ಗಳಿಂದ 52 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಅದೇರೀತಿ ವೋಲ್ವೊ ಸಿಂಗಲ್ ಆಕ್ಸೆಲ್ ಬಾಡಿಗೆದರವನ್ನು 56 ರೂ.ಗಳಿಂದ 52 ರೂಗಳಿಗೆ ಇಳಿಕೆ ಮಾಡಲಾಗಿದೆ. ಮೈಸೂರು ನಗರ ಸಾರಿಗೆಯ ವೋಲ್ವೊ ಬಸ್ ಬಾಡಿಗೆಯನ್ನು 1 ರೂ.ಇಳಿಕೆ ಮಾಡಲಾಗಿದ್ದು, ಪ್ರತಿ ಕಿ.ಮೀ.ಗೆ 70 ರೂ.ನಿಗದಿಗೊಳಿಸಲಾಗಿದೆ.
ಕರ್ನಾಟಕ ವೈಭವ ಬಸ್ ಬಾಡಿಗೆಯನ್ನು 49ರಿಂದ 40 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಹವಾ ನಿಯಂತ್ರಿತ ಸ್ಲೀಪರ್ ಬಸ್ ನ ಬಾಡಿಗೆಯನ್ನು 75ರೂ. ನಿಗದಿಗೊಳಿಸಲಾಗಿದೆ. ಹವಾ ನಿಯಂತ್ರಣ ರಹಿತ ಬಸ್ ದರವನ್ನು 56 ರೂ.ಗಳಿಂದ 50 ರೂ.ಗಳಿಗೆ ಇಳಿಸಲಾಗಿದೆ.











Click it and Unblock the Notifications