ಟೆಕ್ಕಿ ಮಹಿಳೆಯ ಮೇಲೆ ಟೆಕ್ಕಿ ಮಿತ್ರರ ಗ್ಯಾಂಗ್ ರೇಪ್

ಮಾಧಪುರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ 27 ವರ್ಷದ ಮಹಿಳೆ ಬಾಧಿತಳು. ಈಕೆಗೆ ಈಗಾಗಲೇ ಮದುವೆಯಾಗಿದ್ದು, ವಿಚ್ಛೇದನ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹ ಸಂಬಂಧಿ ವೆಬ್ ಸೈಟ್ ಮೂಲಕ ಈಕೆಗೆ ಆರೋಪಿ ಟೆಕ್ಕಿ ಸತೀಶ್ ರೆಡ್ಡಿಯ ಪರಿಚಯವಾಗಿತ್ತು. ಶ್ರೀಕಾಂತ್ ರೆಡ್ಡಿ ಮತ್ತು ಬಾಧಿತ ಮಹಿಳೆ ವಿವಾಹ ಬಂಧನಕ್ಕೊಳಗಾಗಲು ಆಲೋಚಿಸಿದ್ದರು. ತತ್ಸಂಬಂಧ ಇಬ್ಬರೂ ಮೊಬೈಲ್ ನಂಬರುಗಳನ್ನು ವಿನಿಮಯ ಮಾಡಿಕೊಂಡಿದ್ದರು.
ಅದರಂತೆ ಆಗಸ್ಟ್ 2 ರಂದು ಶ್ರೀಕಾಂತ್ ಮತ್ತು ಬಾಧಿತ ಮಹಿಳೆ ಮಧ್ಯಾಹ್ನ ಷಂಶಾಬಾದಿನ ಹೋಟೆಲೊಂದರಲ್ಲಿ ರೂಮನ್ನು ಬಾಡಿಗೆಗೆ ಪಡೆದು ಇಡೀ ಮಧ್ಯಾಹ್ನ ಅಲ್ಲೇ ಕಾಲ ಕಳೆದಿದ್ದಾರೆ. ಆದರೆ ಮಾರನೆಯ ದಿನ ಸೀದಾ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ನುಗ್ಗಿದ ಮಹಿಳೆ, ಶ್ರೀಕಾಂತ್ ರೆಡ್ಡಿ ಮತ್ತು ಆತನ ಮೂವರು ಸ್ನೇಹಿತರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪ ಹೊರಿಸಿ, ದೂರು ದಾಖಲಿಸಿದ್ದಾಳೆ.
'ಶ್ರೀಕಾಂತ್ ಜತೆ ನನ್ನ ಮದುವೆ ಬಗ್ಗೆ ಮಾತನಾಡಲು ಹೋಟೆಲಿಗೆ ಮೊದಲೇ ಹೇಳಿ ಹೋಗಿದ್ದೆ. ಆದರೆ ಅವನೂ ಮತ್ತು ಅವನ ಮೂವರು ಸ್ನೇಹಿತರು ನನ್ನ ಮೇಲೆ ರೇಪ್ ಮಾಡಿಬಿಟ್ಟರು. ಅಷ್ಟೇ ಅಲ್ಲ. ಅವರು ನನ್ನ ಮೊಬೈಲ್ ಫೋನನ್ನೂ ದೋಚಿದ್ದಾರೆ' ಎಂದು ಬಾಧಿತ ಮಹಿಳೆ ಅಲವತ್ತುಕೊಂಡಿದ್ದಾಳೆ.
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ ಪೊಲೀಸರು ಶ್ರೀಕಾಂತನನ್ನು ಬಂಧಿಸಿದ್ದು, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications