ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಬೇಡವೆನ್ನುವ ಹುಡುಗೀರು ಏನ್ಮಾಡ್ತಿದ್ದಾರೆ ಗೊತ್ತಾ?

By Srinath
|
Google Oneindia Kannada News

london-girls-adopt-spoon-tricks-to-escape-forced-marriage-in-asia
ಲಂಡನ್, ಆಗಸ್ಟ್ 17: ಮದುವೆ ಬೇಡವೆನ್ನುವ ಬ್ರಟನ್ನಿನಲ್ಲಿ ವಾಸವಾಗಿರುವ ಏಷ್ಯಾ ಮೂಲದ ಹದಿಹರೆಯದ ಹುಡುಗಿಯರು ಪಾಪ ಏನ್ಮಾಡ್ತಿದ್ದಾರೆ ಗೊತ್ತಾ?

ಲಂಡನ್ನಿನಲ್ಲಿ ಇನ್ನೇನು ವಿಮಾನ ನಿಲ್ದಾಣದೊಳಕ್ಕೆ ಹೋಗಬೇಕು. ಭದ್ರತಾ ತಪಾಸಣೆ ಆರಂಭವಾಗುತ್ತದೆ ಅನ್ನುವಾಗ ಒಂದು ಚಿಕ್ಕ ಸ್ಪೂನ್ ಅಥವಾ ಮೆಟಲ್ ಪೀಸನ್ನು ತಮ್ಮ ಅಂಡರ್ ವೇರ್ ನೊಳಕ್ಕೆ ಕಸಕ್ಕನೆ ತೂರಿಸಿಕೊಳ್ಳುತ್ತಾರಂತೆ.

ಅಲ್ಲಿಂದ ಮುಂದೆ ಮೆಟಲ್ ಡಿಟೆಕ್ಟರ್ ಮೂಲಕ ಸಾಗುವಾಗ ಅದು ತಡೆದು ನಿಲ್ಲಿಸುತ್ತದೆ. ಆಗ ಅಲ್ಲಿರುವ ವಿಶೇಷ ಭದ್ರತಾಧಿಕಾರಿಗಳು ಹುಡುಗಿ ಅಪಾಯದಲ್ಲಿದ್ದಾಳೆ ಎಂಬುದನ್ನು ಗ್ರಹಿಸಿ, ಆಕೆಯನ್ನು ರಕ್ಷಿಸುತ್ತಾರಂತೆ.

ಸರಿ ಇಷ್ಟಕ್ಕೂ ಲಂಡನ್ನಿನಲ್ಲಿ ಆರಾಮವಾಗಿರುವ ಹುಡುಗಿಯರಿಗೆ ಇಂತಹ ದುಃಸ್ಥಿತಿ ಏಕಪ್ಪಾ, ಯಾರು ಈ ಹುಡುಗಿಯರು ಅಂದರೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತಕ್ಕೆ ಹೋಗುವ ಹದಿಹರೆಯದ ಹುಡುಗಿಯರು ಇವರೆಲ್ಲ. ಜತೆಗೆ ಅಫಘಾನಿಸ್ತಾನ, ಸೊಮಾಲಿಯಾ ಮತ್ತು ಟರ್ಕಿ ಮಕ್ಕಳೂ ಇಂತಹ ದುಃಸ್ಥಿತಿ ಎದುರಿಸುತ್ತಿದ್ದಾರೆ.

ಈ ಹುಡುಗಿಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಡಲೆಂದೇ ಇಂಗ್ಲೆಂಡಿನಿಂದ ಹೊರಸಾಗಿಸುವ ವಿದ್ಯಮಾನ ಇತ್ತೀಚೆಗೆ ಕಂಡುಬರುತ್ತಿದೆ. ಇದನ್ನು ತಪ್ಪಿಸಿಕೊಳ್ಳಲು ವಿಶೇಷವಾಗಿ ಭದ್ರತಾಧಿಕಾರಿಗಳ ಗಮನ ಸೆಳೆದು ಅವರಿಂದ ಸಂರಕ್ಷಿಸಲ್ಪಡುತ್ತಾರೆ. ಮತ್ತು ಕೊನೆಯ ಘಳಿಗೆಯಲ್ಲಿ ಗಂಡನ ಮನೆಗೆ ಹಾರುವ ತಾಪತ್ರಯದಿಂದ ಈ ಹುಡುಗಿಯರು ಪಾರಾಗುತ್ತಿದ್ದಾರೆ.

ಸಾಮಾನ್ಯವಾಗಿ ಬೇಸಿಗೆ ರಜಾ ಕಾಲದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಮಕ್ಕಳಿಗೆ ರಜೆ ಪ್ರವಾಸವೆಂದು ಪುಸಲಾಯಿಸಿ, ಬೇರೆ ದೇಶಗಳಿಗೆ ಕರೆದೊಯ್ದು ಅಲ್ಲಿ ದಿಢೀರಂತೆ ಬಲವಂತವಾಗಿ ಮದುವೆ ಮಾಡಿಸಿ, ದಲ್ಲಾಳಿಗಳಿಂದ ಹಣ ವಸೂಲಿ ಮಾಡಿ, ಮಕ್ಕಳನ್ನು ಗಂಡನ ಮನೆಯಲ್ಲಿ ಬಿಟ್ಟುಹೋಗುವುದು ಇದರ ಅಸಲಿ ಹಕೀಕತ್ತು.

ಕಳೆದ ಬೇಸಿಗೆಯಲ್ಲಿ ಇಂತಹ 500 ಪ್ರಕರಣಗಳು ವರದಿಯಾಗಿವೆ. ಆದರೆ ಅಧಿಕಾರಿಗಳ ಗಮನಕ್ಕೆ ಬಾರದೆ, ಹದಿಹರೆಯದ ಹೆಣ್ಣುಮಕ್ಕಳು ಹೀಗೆ ಮದುವೆ ಹಸೆಮಣೆ ಏರಿರುವ ಪ್ರಕರಣಗಳು ಇನ್ನೂ ಹೆಚ್ಚಾಗಿವೆ ಎನ್ನಲಾಗಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲೆಂದೇ helplineಗಳು ಕಾರ್ಯನಿರ್ವಹಿಸುತ್ತಿದ್ದು, ಅವು ಹೆಣ್ಣುಮಕ್ಕಳಿಗೆ ಈ ಸುರಕ್ಷಿತ ಐಡಿಯಾ ಕೊಟ್ಟು, ಸಕಾಲದಲ್ಲಿ ಅವರ ಕೈಹಿಡಿಯುತ್ತಿವೆ.

English summary
Teenage girls in London escape forced marriage by concealing spoons in under wear clothing to set off metal detectors at the airport. Teenage girls who fear they are being taken abroad to enter into a forced marriage are using a simple trick to escape: hiding a spoon or any other metal object in their underwear to set off the metal detector at the airport and avoid the flight at the last minute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X