ಹುಬ್ಬಳ್ಳಿ : ಬೆಂಗೇರಿ ರಾಷ್ಟಧ್ವಜ್ಜಕ್ಕೆ ಹೆಚ್ಚಿದ ಬೇಡಿಕೆ

National Flag
ಹುಬ್ಬಳ್ಳಿ, ಆ.10 : ತಾಲೂಕು, ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳ ಮೇಲೆ ಪ್ರತಿದಿನ ಧ್ವಜಾರೋಹಣ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಹುಬ್ಬಳ್ಳಿಯ ಬೆಂಗೇರಿ ರಾಷ್ಟಧ್ವಜ ತಯಾರಿಕಾ ಕೇಂದ್ರದಲ್ಲಿ ಧ್ವಜಗಳಿಗಾಗಿ ಬೇಡಿಕೆ ಹೆಚ್ಚಾಗುತ್ತಿದೆ.

ಆ.15ರಿಂದ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಪ್ರತಿದಿನ ಕಚೇರಿಯ ಮುಂಭಾಗ ಧ್ವಜಾರೋಹಣ ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ ಪ್ರತಿ ಪಂಚಾಯತ್‌ ಕನಿಷ್ಠ ಮೂರು ಧ್ವಜಗಳನ್ನು ಖರೀದಿಸಬೇಕಿದೆ. ಆದ್ದರಿಂದ ಬೆಂಗೇರಿ ಕೇಂದ್ರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ.

ಪ್ರತಿ ಪಂಚಾಯಿತಿಯಗಳು ಪ್ರಮಾಣೀಕೃತ ರಾಷ್ಟ್ರಧ್ವಜಗಳನ್ನು ಖರೀದಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಆದ್ದರಿಂದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಕೇಂದ್ರವಾದ ಹುಬ್ಬಳ್ಳಿಯ ಬೆಂಗೇರಿ ಕೇಂದ್ರದಲ್ಲಿ ತಯಾರಾಗುವ ಧ್ವಜಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. (ಪಂಚಾಯ್ತಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಟ ಕಡ್ಡಾಯ)

ಎಷ್ಟು ಪಂಚಾಯಿತಿಗಳಿವೆ : ಕರ್ನಾಟಕದಲ್ಲಿ 29 ಜಿಲ್ಲಾ ಪಂಚಾಯಿತಿ, 176 ತಾಲೂಕು ಪಂಚಾಯಿತಿ ಮತ್ತು 5,628 ಗ್ರಾಮ ಪಂಚಾಯತಿಗಳಿವೆ. ಪ್ರತಿ ಗ್ರಾಮ ಪಂಚಾಯಿತಿಗಳು ಕನಿಷ್ಠ ಮೂರು ಧ್ವಜಗಳನ್ನು ಖರೀದಿಸಬೇಕಾಗಿದೆ.

ಆದ್ದರಿಂದ ಜಿಲ್ಲಾ ಪಂಚಾಯಿತಿಗಳಿಗೆ 87, ತಾಲೂಕು ಪಂಚಾಯಿತಿಗಳಿಗೆ 528 ಹಾಗೂ ಗ್ರಾಮ ಪಂಚಾಯಿತಿಗಳಿಗೆ 16,884 ಧ್ವಜಗಳು ಬೇಕಾಗುತ್ತವೆ. ಒಟ್ಟು 17,499 ರಾಷ್ಟ್ರಧ್ವಜಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಬೇಡಿಕೆ ಪೂರೈಸಲು ಸಿದ್ದ : ಬೆಂಗೇರಿಯ ರಾಷ್ಟ್ರಧ್ವಜ ತಯಾರಿಕಾ ಕೇಂದ್ರದಲ್ಲಿ 2013ರ ಏಪ್ರಿಲ್‌ 1ರಿಂದ ಆಗಸ್ಟ್‌ 5ರ ವರೆಗೆ 3/2 ಅಡಿ ಅಳತೆಯ 3,512 ಧ್ವಜ ತಯಾರಿಸಲಾಗಿದೆ. ಕಳೆದ ವರ್ಷ ತಯಾರಿಸಿದ್ದ 2000ದಷ್ಟು ಧ್ವಜ ಉಳಿದಿದ್ದವು. ಇವೆಲ್ಲವೂ ಸೇರಿ ಒಟ್ಟಾರೆ ಶೇ.90ರಷ್ಟು ರಾಷ್ಟ್ರಧ್ವಜ ಈಗಾಗಲೇ ಮಾರಾಟಗೊಂಡಿವೆ.

3/2 ಅಡಿ ಅಳತೆ ರಾಷ್ಟ್ರಧ್ವಜಕ್ಕೆ ಬೆಂಗೇರಿಯಲ್ಲಿ 495ರೂ. ದರ ನಿಗದಿಗೊಳಿಸಲಾಗಿದೆ. ಸರ್ಕಾರದ ಸೂಚನೆಯಂತೆ 17,499 ರಾಷ್ಟ್ರಧ್ವಜ ಮಾರಾಟವಾದರೆ, ತಯಾರಿಕಾ ಕೇಂದ್ರಕ್ಕೆ 86.62 ಲಕ್ಷ ರೂ. ಆದಾಯ ಬರಲಿದೆ.

ಆ.20ರೊಳಗೆ ಪೂರೈಕೆ : ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವಷ್ಟು ರಾಷ್ಟ್ರಧ್ವಜಗಳನ್ನು ಆ. 20ರೊಳಗೆ ಪೂರ್ಣ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುವುದು ಎಂದು ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಒಕ್ಕೂಟದ ಕಾರ್ಯದರ್ಶಿ ಎಚ್‌.ಎನ್‌. ಅಂಟಿನ್‌ ಹೇಳಿದ್ದಾರೆ. (67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+