ಜಲಪ್ರವಾಹಕ್ಕೆ ಭಾರತದ ಬಹುಭಾಗ ತತ್ತರ
ಬೆಂಗಳೂರು, ಆ.6: ಭಾರತದ ಬಹುತೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಹಲವೆಡೆ ಸಾವು ನೋವು ಗಳು ಸಂಭವಿಸಿದೆ. ದೆಹಲಿ, ಪಂಜಾಬ್, ಹರ್ಯಾಣ, ಪಶ್ಚಿಮ ಬಂಗಾಳ, ಅಸ್ಸಾ, ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.
ಕೇರಳ ಇಡುಕ್ಕಿ ಹಾಗೂ ಅಕ್ಕ ಪಕ್ಕ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಪ್ರವಾಹಕ್ಕೆ 16 ಮಂದಿ ಬಲಿಯಾಗಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿದ್ದು, ಮಂಗಳವಾರ ಮಧ್ಯಾಹ್ನದ ವರೆಗೆ ನಿಲ್ದಾಣವನ್ನು ಮುಚ್ಚಲಾಗಿದೆ. ಪೆರಿಯಾರ್ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಸೇನೆಗೆ ಕರೆ ನೀಡಲಾಗಿದೆ.
ಕಳೆದ ಭಾನುವಾರ ಉತ್ತರಪ್ರದೇಶದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಗಂಗಾ ನದಿ ಆರ್ಭಟ ಮುಂದುವರೆದಿದ್ದು, ವಾರಣಾಸಿ, ಘಾಜಿಪುರ್, ಬಾಲ್ಲಿಯಾ ಹಾಗೂ ಅಲಹಾಬಾದ್ ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಿರ್ಜಾಪುರ, ಚಂಡೌಲಿ, ಬಾಂದ, ಘೊರ್ವಾಲ್ ನಲ್ಲಿ ಪ್ರವಾಹ ಪರಿಸ್ಥಿತಿ ಇದೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದ ಎಲ್ಲಾ ಅಣೆಕಟ್ಟುಗಳು ತುಂಬಿಕೊಂಡಿವೆ. ಅಣೆಕಟ್ಟುಗಳಿಂದ ಹೊರ ಹರಿವು ಹೆಚ್ಚಿರುವುದರಿಂದ ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮುನ್ನಚ್ಚರಿಕೆ ನೀಡಲಾಗಿದೆ. ತಮಿಳುನಾಡಿನಲ್ಲಿ ಮೆಟ್ಟೂರು ಜಲಾಶಯ ತುಂಬಿದ್ದು, ಕಾವೇರಿ ನದಿ ತನ್ನ ಆರ್ಭಟ ಮುಂದುವರೆಸಿದೆ. ದೇಶದ ವಿವಿಧ ಭಾಗಗಳ ಜಲಮಮವಾಗಿರುವ ಚಿತ್ರಗಳನ್ನು ಇಲ್ಲಿ ಕಾಣಿರಿ

ಕೊಚ್ಚಿ ವಿಮಾನ ನಿಲ್ದಾಣ
ನೀರು ತುಂಬಿಕೊಂಡಿರುವ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಸ್ ಓಡಾಟ

ಕೊಳಿಕ್ಕೋಡ್
ಕೇರಳದ ಕೊಳಿಕ್ಕೋಡ್ (ಈ ಹಿಂದಿನ calicut) ನಲ್ಲಿ ಅನೇಕ ಕಡೆ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಇಲ್ಲದ್ದಂತಾಗಿದೆ.

ಕೇರಳದ ಮಾರುಕಟ್ಟೆ
ಕೇರಳದ ಹಲವು ಜಿಲ್ಲೆಗಳಲ್ಲಿ ನಿತ್ಯ ಜೀವನ ಸಾಗಿಸುವುದು ಕಷ್ಟವಾಗಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ನೀರು ತುಂಬಿದೆ.

ಭುವನೇಶ್ವರದಲ್ಲಿ
ಭುವನೇಶ್ವರದ ಹೊರ ಪ್ರದೇಶದ ತುಂಬಾ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಜನರ ಸಂಚಾರ ಕಷ್ಟವಾಗಿದೆ.

ಉತ್ತರಪ್ರದೇಶದಲ್ಲಿ
ಉತ್ತರಪ್ರದೇಶದಲ್ಲಿ ಗಂಗಾನದಿ ಪ್ರವಾಹಕ್ಕೆ ಸಿಲುಕಿ ದ್ವೀಪದಂತಾಗಿರುವ ನಗರಗಳು

ಅಹಮದಾಬಾದಿನಲ್ಲಿ
ಗುಜರಾತಿನಲ್ಲೂ ಮಳೆ ಅನಾಹುತದ ವರದಿ ಬಂದಿದ್ದು,ಅಹಮದಾಬಾದಿನಲ್ಲಿ ಮುಖ್ಯ ರಸ್ತೆಗಳಲ್ಲಿ ನೀರು ತುಂಬಿದೆ.

ಅಹಮದಾಬಾದಿನಲ್ಲಿ
ಗಂಗಾನದಿ ಪ್ರವಾಹದ ನಡುವೆ ಸಿಲುಕಿರುವ ಬಡೇ ಹನುಮಾನ್ ಮಂದಿರ

ಅಹಮದಾಬಾದ್ ನ ಚಿತ್ರ
ಅಹಮದಾಬಾದಿನ ಹಲವಾರು ಬಡಾವಣೆಗಳಲ್ಲಿ ರಸ್ತೆಗಳು ಮಾಯವಾಗಿದ್ದು, ಎಲ್ಲೆಡೆ ನೀರು ಕಾಣಿಸುತ್ತಿದೆ.

ಬಿಹಾರದ ಚಿತ್ರ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈಮಾನಿಕ ಸಮೀಕ್ಷೆ ನಡೆಸಿ ಪಾಟ್ನಾ ಹಾಗೂ ಸುತ್ತಮುತ್ತಲಿನ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿದರು.

ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆ ಬಹುವಾಗಿ ಪ್ರವಾಹದಿಂದ ತತ್ತರಿಸಿದೆ. ಜನ ಸಂಚಾರ ಕಷ್ಟಕರವಾಗಿದೆ.

ಪಶ್ಚಿಮ ಬಂಗಾಳದ ಚಿತ್ರ
ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ತಗ್ಗುಪ್ರದೇಶಗಳಲ್ಲಿದ್ದ ಮನೆಗಳೆಲ್ಲವೂ ಸಂಪೂರ್ಣವಾಗಿ ನಾಶವಾಗಿವೆ.

ಪಶ್ಚಿಮ ಬಂಗಾಳ ಪ್ರವಾಹ
ಪಶ್ಚಿಮ ಬಂಗಾಳದ ಬಹುತೇಕ ಕಡೆಗಳಲ್ಲಿ ರಸ್ತೆ ಸಂಚಾರ ದುರ್ಲಭವಾಗಿದ್ದು, ದೋಣಿಗಳಲ್ಲಿ ಸಂಚರಿಸುವುದೇ ನಿತ್ಯಕಾಯಕವಾಗಿದೆ.

ಬಿಹಾರದ ಚಿತ್ರ
ಮನೇರ್ ನ ಹಲ್ದಿಚಾಪ್ರಾ ಗ್ರಾಮದಲ್ಲಿ ಜೀವರಕ್ಷಣೆಗಾಗಿ ಜನರು ಪ್ರವಾಹದ ನಡುವೆ ಈಜಿಕೊಂಡು ಸಾಗುತ್ತಿದ್ದಾರೆ.

ಬಿಹಾರದ ಪ್ರವಾಹ
ಮನೇರ್ ನ ಹಲ್ದಿಚಾಪ್ರಾ ಗ್ರಾಮದಲ್ಲಿ ಜೀವರಕ್ಷಣೆಗಾಗಿ ಜನರು ಪ್ರವಾಹದ ನಡುವೆ ಸೈಕಲ್ ಹೊತ್ತು ಸಾಗುತ್ತಿರುವ ವ್ಯಕ್ತಿ

ಬಿಹಾರದಲ್ಲಿ ಪ್ರವಾಹ
ಮನೇರ್ ನ ಹಲ್ದಿಚಾಪ್ರಾ ಗ್ರಾಮದಲ್ಲಿ ದಿನನಿತ್ಯ ನೀರು ತುಂಬಿದ ರಸ್ತೆಯಲ್ಲೇ ಸಂಚರಿಸಬೇಕಿದೆ.

ಉತ್ತರಪ್ರದೇಶದಲ್ಲಿ
ಉತ್ತರಪ್ರದೇಶದಲ್ಲಿ ಪ್ರವಾಹದಿಂದ ಅರ್ಧ ಮುಳುಗಿರುವ ದೇಗುಲ

ಪಶ್ಚಿಮ ಬಂಗಾಳ
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಿತ್ಯ ದೋಣಿಯಲ್ಲೇ ಸಂಚಾರ

ಜಮ್ಮು ಮತ್ತು ಕಾಶ್ಮೀರ
ಜಮ್ಮುವಿನ ತಾವಿ ನದಿಯ ಪ್ರವಾಹಕ್ಕೆ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿದ ಯೋಧರು

ವಾರಣಾಸಿ
ಉತ್ತರಪ್ರದೇಶದ ವಾರಣಾಸಿಯಲ್ಲಿ ಎಲ್ಲೆಡೆ ಗಂಗಾ ನದಿ ಪ್ರವಾಹ ಕಂಡು ಬಂದಿದೆ.

ಅಸ್ಸಾಂನಲ್ಲಿ
ಗೊಲಾಘಾಟ್ ನಲ್ಲಿ ವ್ಯಕ್ತಿಯೊಬ್ಬರು ಮಗುವಿನೊಂಡಿಗೆ ಬಾಳೆದಿಂಡಿನ ತಾತ್ಕಾಲಿಕ ತೆಪ್ಪ ನಿರ್ಮಿಸಿಕೊಂಡು ಸುರಕ್ಷಿತ ಜಾಗದ ಕಡೆಗೆ ಸಾಗುತ್ತಿರುವ ದೃಶ್ಯ

ಅಹಮದಾಬಾದಿನಲ್ಲಿ
ಅಹಮದಾಬಾದಿನಲ್ಲಿ ನೀರು ತುಂಬಿದ ರಸ್ತೆಗಳಲ್ಲಿ ಸಾಗುತ್ತಿರುವ ರಾಸುಗಳು

ಕೇರಳದಲ್ಲಿ
ಮಕ್ಕಂ ಊರಿನಲ್ಲಿ ನೀರು ತುಂಬಿದ ರಸ್ತೆಗಳಲ್ಲಿ ದೋಣಿ ಸಂಚಾರ ಸಾಗಿದೆ.

ಕರ್ನಾಟಕದಲ್ಲಿ
ಕರ್ನಾಟಕದ ಲಿಂಗನಮಕ್ಕಿ ಅಣೆಕಟ್ಟು : 1964ರಲ್ಲಿ ಜಲಾಶಯ ನಿರ್ಮಾಣವಾದ ಬಳಿಕ ಜಲಾಶಯ 14 ನೇ ಬಾರಿ ತುಂಬಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ...

ಕರ್ನಾಟಕದ ಅಣೆಕಟ್ಟು
ಗೊರೂರು ಅಣೆಕಟ್ಟಿನ ಎತ್ತರ 146 ಅಡಿ ಇದೆ. ಚಿಕ್ಕಮಗಳೂರಲ್ಲಿ ಹುಟ್ಟಿರುವ ಹೇಮಾವತಿ ನದಿ ಹಾಸನ ಮತ್ತು ಮೈಸೂರು ಜಿಲ್ಲೆಗಳ ಮುಖಾಂತರ ಸಾಗಿ ಕೃಷ್ಣರಾಜಸಾಗರದ ಬಳಿ ಕಾವೇರಿಯನ್ನು ಸೇರುತ್ತದೆ. ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ

ಕೇರಳದಲ್ಲಿ
ಮಳೆ ನಡುವೆ ಸಂಚರಿಸುತ್ತಿರುವ ಮಹಿಳೆ

ದೆಹಲಿಯಲ್ಲಿ
ಯುಮುನಾದಲ್ಲಿ ಪ್ರವಾಹದ ನಡುವೆ ಭರ್ಜರಿ ಸುರಿಯುತ್ತಿದ್ದು, ಜನ ಅಹ್ಲಾದಕರ ವಾತಾವರಣವನ್ನು ಆನಂದಿಸುತ್ತಿದ್ದಾರೆ.












Click it and Unblock the Notifications