ಖಾಸಗಿ ಶಾಲೆಗೂ ಮಾದರಿ ಮೈಸೂರಿನ ಸರ್ಕಾರಿ ಶಾಲೆ!

school
ಮೈಸೂರು, ಆ.6 : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ, ಮೈಸೂರಿನ ಸರ್ಕಾರಿ ಶಾಲೆಯೊಂದು ಉತ್ತಮ ನಿರ್ವಹಣೆಗಾಗಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ. ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಇಲ್ಲಿನ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲಾ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆ (ಡಯಟ್) ಈ ಶಾಲೆಯ ಬಗ್ಗೆ ನಿರಂತರ ಅಧ್ಯಯನ ನಡೆಸಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ನೀಡಿದೆ. ಪ್ರಥಮ ಸ್ಥಾನವನ್ನು ಶಿರಸಿಯ ಶಾಲೆ ಪಡೆದಿದ್ದರೆ. ತೃತೀಯ ಸ್ಥಾನ ಬಾಗಲಕೋಟೆಯ ಶಾಲೆಯ ಪಾಲಾಗಿದೆ.

ಮೈಸೂರು ಜಿಲ್ಲೆಯ ಚಿಕ್ಕೇಗೌಡನಕೊಪ್ಪಲು ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿರ್ವಹಣೆಗಾಗಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ. ಈ ಶಾಲೆಯನ್ನು ನೋಡಿದವರು ಖಾಸಗಿ ಶಾಲೆಗಿಂತ ಚೆನ್ನಾಗಿದೆ ಎಂದು ಹೇಳುವುದರಲ್ಲಿ ಅನುಮಾನವಿಲ್ಲ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆದ ಒಟ್ಟು 107 ವಿದ್ಯಾರ್ಥಿಗಳಿದ್ದಾರೆ. ಒಟ್ಟು ನಾಲ್ವರು ಶಿಕ್ಷಕರು ಶಾಲೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಪಠ್ಯ, ಪಠ್ಯೇತರ, ಜನರ ಸಹಕಾರ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳಲ್ಲಿ ಶಾಲೆ ರಾಜ್ಯದ ಇತರ ಶಾಲೆಗಳಿಗೂ ಮಾದರಿಯಾಗಿದೆ.

ಶಾಲೆಯ ವಿಶೇಷವೇನು : ಶಾಲೆಯ ಮುಖ್ಯ ಶಿಕ್ಷಕರಾದ ಎಂ.ಪಿ.ಚಿಕ್ಕೇಗೌಡ ಅವರು ನಾಲ್ಕು ವರ್ಷಗಳ ಹಿಂದೆ ಈ ಶಾಲೆಗೆ ಆಗಮಿಸುವ ಮೊದಲು ಇದು ಸಾವಿರದಲ್ಲಿ ಒಂದು ಸರ್ಕಾರಿ ಶಾಲೆಯಾಗಿತ್ತು. ಆದರೆ, ಅವರ ಪರಿಶ್ರಮ ಮತ್ತು ಗ್ರಾಮಸ್ಥರ ಸಹಕಾರದಿಂದ ಇಂದು ಉತ್ತಮ ಶಾಲೆಯಾಗಿ ಪರಿವರ್ತನೆಗೊಂಡಿದೆ.

ತರಕಾರಿ ಬೆಳಯುತ್ತಾರೆ : ಶಾಲೆಯ ಆವರಣದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಾಕಾಗುವಷ್ಟು ತರಕಾರಿ ಬೆಳೆಯಲಾಗುತ್ತದೆ. ಇದರಿಂದಾಗಿ ಮಕ್ಕಳಿಗೆ ಪ್ರತಿದಿನವೂ ತಾಜಾ ತಕಕಾರಿ ದೊರೆಯುತ್ತದೆ.

ಸದ್ಯ ಹೆಚ್ಚು ತರಕಾರಿ ಬೆಳಯುತ್ತಿರುವುದರಿಂದ ಅಕ್ಕಪಕ್ಕದ ಶಾಲೆಗಳ ಬಿಸಿಯೂಟ ಯೋಜನೆಗಾಗಿಯೂ ಶಾಲೆಯಿಂದ ತರಕಾರಿ ಪೂರೈಸಲಾಗುತ್ತಿದೆ. ಗ್ರಾಮಸ್ಥರು ಸಹ ತರಕಾರಿ ಬೆಳೆಯಲು ಶಾಲೆಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ.

ಮಳೆ ನೀರು ಕೊಯ್ಲ : ಶಾಲೆಯಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಗ್ರಾಮಸ್ಥರ ಸಹಕಾರದಿಂದ 18,000 ಲೀಟರ್ ನೀರನ್ನು ಸಂಗ್ರಹಿಸು ಟ್ಯಾಂಕ್ ನಿರ್ಮಿಸಲಾಗಿದೆ.

ಶೌಚಾಲಯ : ಶಾಲೆಯಲ್ಲಿ ಸುಸಜ್ಜಿತವಾದ ಶೌಚಾಲಯವಿದ್ದು, ಪ್ರತಿದಿನವೂ ಸ್ವಚ್ಛಗೊಳಿಸಲಾಗುತ್ತದೆ. ಶಿಕ್ಷಕರು ಸಹ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಾರೆ. ಶಾಲೆಯ ಕೆಲವು ಪ್ರದೇಶಗಳಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದ್ದು, ಮಕ್ಕಳು ಆಟವಾಡಿದ ನಂತರ ಕೈ ಕಾಲು ತೊಳೆದು ತರಗತಿಗೆ ಆಗಮಿಸುತ್ತಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಉತ್ತಮ ಸ್ವಚ್ಛ ವಾತಾವರಣ ಹೊಂದಿರುವ ಶಾಲೆ ಎಂದು ಪ್ರಶಸ್ತಿಯನ್ನು ನೀಡಿದೆ. ಗ್ರಾಮಸ್ಥರು, ಖಾಸಗಿ ಸಂಸ್ಥೆಗಳು ಈ ಶಾಲೆಗೆ ಹೆಚ್ಚಿನ ಅನುದಾನ ನೀಡಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿವೆ.

ಕಂಪ್ಯೂಟರ್ ಶಿಕ್ಷಣ : 5ರಿಂದ 7ನೇ ತರಗತಿ ಮಕ್ಕಳಿಗಾಗಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಪ್ರಾರಂಭಿಸಲಾಗಿದೆ. ಗ್ರಾಮದ ರವಿ ಎಂಬ ಪದವೀಧರರು ಮಕ್ಕಳಿಗೆ ಕಂಪ್ಯೂಟರ್ ಪಾಠ ಹೇಳಿಕೊಡುತ್ತಾರೆ. ಶಾಲೆಯ ಅವಧಿ ಮುಗಿದ ನಂತರ ಹಳೆಯ ವಿದ್ಯಾರ್ಥಿಗಳು ಇಲ್ಲಿ ಬಂದು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+