ಶೀಘ್ರವೇ ಯಶವಂತಪುರ-ಸ್ವಸ್ತಿಕ್ ಮೆಟ್ರೋ ಪರೀಕ್ಷೆ

metro
ಬೆಂಗಳೂರು, ಆ.6 : ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ವೇಳೆಗೆ ನಮ್ಮ ಮಟ್ರೋ ಯೋಜನೆಯ ಮತ್ತೊಂದು ರೈಲು ಬೆಂಗಳೂರಿನಲ್ಲಿ ಸಂಚಾರ ಪ್ರಾರಂಭಿಸಲಿದೆ. ರೀಚ್ 3 ಯೋಜನೆ ಡಿಸೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಸ್ವಸ್ತಿಕ್ ನಿಂದ ಯಶವಂತರಪುರದ ವರೆಗಿನ ರೀಚ್‌-3 ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು, ಆಗಸ್ಟ್ ಅಂತ್ಯ ಅಥವ ಸೆಪ್ಟೆಂಬರ್ ನಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ನಂತರ ಸಂಚಾರಕ್ಕೆ ಮುಕ್ತವಾಗಲಿದೆ.

ರೈಲ್ವೆ ಇಲಾಖೆಯ ಆರ್ ಎಇಎಸ್ಓ ತಂಡ ಆಗಸ್ಟ್ ಕೊನೆಯಲ್ಲಿ ಅಥವ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಆಗಮಿಸಲಿದೆ. ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ನಗರಕ್ಕೆ ಆಗಮಿಸಿ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ವೀಕ್ಷಿಸುವಂತೆ ಆರ್ ಎಇಎಸ್ಓ ತಂಡಕ್ಕೆ ಈಗಾಗಲೇ ಮನವಿ ಮಾಡಿದೆ.

ಜುಲೈ ಅಂತ್ಯದ ವೇಳೆಗೆ ತಂಡ ನಗರಕ್ಕೆ ಆಗಮಿಸಿ ಪರೀಕ್ಷಾರ್ಥ ಸಂಚಾರ ವೀಕ್ಷಿಸಬೇಕಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡಿರದ ಕಾರಣ ತಡವಾಗಿದೆ. ಸೆಪ್ಟೆಂಬರ್ ನಲ್ಲಿ ನಡೆಯುವ ಪರೀಕ್ಷಾರ್ಥ ಸಂಚಾರ ಯಶಸ್ವಿಯಾದರೆ, ಡಿಸೆಂಬರ್ ಅಥವ ಜನವರಿಯಲ್ಲಿ ಮೆಟ್ರೋ ಜನರ ಸಂಚಾರಕ್ಕೆ ಮುಕ್ತವಾಗಲಿದೆ.

ರೈಲಿನ ವೇಗ, ಹಳಿಗಳ ವಿನ್ಯಾಸ ಮುಂತಾದವುಗಳ ಕುರಿತು ತಂಡ ಅಧ್ಯಯನ ನಡೆಸಿ ರೈಲ್ವೆ ಇಲಾಖೆಗೆ ವರದಿ ನೀಡಲಿದೆ. ರೈಲ್ವೆ ಇಲಾಖೆಯ ಅಂತಿಮ ಒಪ್ಪಿಗೆ ದೊರೆತರೆ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ. ತಂಡಕ್ಕೆ ಈ ಯೋಜನೆಯ ವರದಿಯನ್ನು ಈಗಾಗಲೇ ಬಿಎಂಆರ್ ಸಿಎಲ್ ಕಳುಹಿಸಿದೆ.

ಪೀಣ್ಯ-ಯಶವಂತರದ ನಡುವಿನ ಮೆಟ್ರೋ 3ಎ ಯೋಜನೆಯ ಪರೀಕ್ಷಾರ್ಥ ಸಂಚಾರವೂ ಇದೇ ವೇಳೆ ನಡೆಯುವ ಸಾಧ್ಯತೆ ಇದೆ. ಪೀಣ್ಯ ಡಿಪೋದಲ್ಲಿರುವ ರೈಲುಗಳನ್ನು ಪರೀಕ್ಷಿಸಿ ತಂಡ ತನ್ನ ವರದಿಯನ್ನು ತಯಾರಿಸಲಿದೆ.

ಸೆಪ್ಟೆಂಬರ್ ನಲ್ಲಿ ಪ್ರಾಯೋಗಿಕ ಸಂಚಾರ ಮುಕ್ತಾಯಗೊಂಡರೆ ಡಿಸೆಂಬರ್ ಅಥವ 2014ರ ಜನವರಿಯಲ್ಲಿ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಶಿವಶೈಲಂ ತಿಳಿಸಿದ್ದಾರೆ.

ಪೀಣ್ಯ-ಯಶವಂತಪುರ ನಡುವೆ ಸಂಚರಿಸುವ ರೈಲು ಈಗಾಗಲೇ ಪೀಣ್ಯ ಡಿಪೋಕ್ಕೆ ಆಗಮಿಸಿದೆ. ಪರೀಕ್ಷಾರ್ಥ ಸಂಚಾರವನ್ನಿ ಇದರ ಮೂಲಕವೇ ತಂಡ ನಡೆಸಲಿದೆ. ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡು ಮತ್ತೊಂದು ಮೆಟ್ರೋ ರೈಲು ಹಳಿಯ ಮೇಲೆ ಓಡುವ ಕಾಲ ದೂರವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+