ಕ್ರೈಂ ರೌಂಡಪ್: ಆತ್ಮಹತ್ಯೆ, ಕಾಂಗ್ರೆಸ್ ಮುಖಂಡ ಸಾವು
ಬೆಂಗಳೂರು, ಆ.5: ಉತ್ತರ ಕನ್ನಡ ಜಿಲ್ಲೆ ಅಂಕೋಲದ ಮಾದನಗೆರೆ ಬಳಿ ಕಾರು ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ದೀಪಕ್ ಹೊನ್ನಾವರ ಭಾನುವಾರ ಸಾವನ್ನಪ್ಪಿದ್ದಾರೆ.
52ವರ್ಷದ ದೀಪಕ್ ಅವರು ರಾಷ್ಟೀಯ ಹೆದ್ದಾರಿ 17 ರಲ್ಲಿ ಚಲಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಒಂದೆರಡು ಪಲ್ಟಿ ಹೊಡೆದಿದೆ. ದೀಪಕ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಹಿಳೆಗೆ ತೀವ್ರ ಗಾಯಗಳಾಗಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ದೀಪಕ್ ಅವರು ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಜೆಪಿ ನಗರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ನಂತರ ಇದು ಎರಡನೇ ಪ್ರಕರಣವಾಗಿದೆ. ಜೆಪಿನಗರದ ಆರ್ ಬಿಐ ಲೇಔಟ್ ನಿವಾಸಿ 22 ವರ್ಷದ ವರುಣ್ ಎಂಬ ವಿದ್ಯಾರ್ಥಿ ಪಿಇಎಸ್ ಕಾಲೇಜಿನಲ್ಲಿ 5ನೇ ಸೆಮಿಸ್ಟರ್ ಓದುತ್ತಿದ್ದ. ಓದಿನಲ್ಲಿ ಹಿಂದೆ ಬಿದ್ದ ಪರಿಣಾಮ ಜೆಪಿ ನಗರದ ಲಕ್ಷ್ಮಿ ದೇಗುಲದ ಪೆಂಡಾಲ್ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾನುವಾರ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಅನುತೀರ್ಣಳಾದ ಹಿನ್ನೆಲೆಯಲ್ಲಿ ಮನನೊಂದು ಮನೆಯಲ್ಲಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನಷ್ಟು ಕ್ರೈಂ ಸುದ್ದಿ ಮುಂದೆ ಓದಿ...

ಇಂಜಿನಿಯರಿಂಗ್ ವಿದ್ಯಾರ್ಥಿನಿ ಸೂಸೈಡ್
ಬೆಂಗಳೂರಿನ ಸಿಎಮ್ ಆರ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬಬಿತಾ (21) ಎಂದು ಗುರುತಿಸಲಾಗಿದೆ. ಇಲ್ಲಿನ ದೇವಸಂದ್ರದ ನೇತ್ರಾವತಿ ಬಡವಾಣೆಯ ನಿವಾಸಿ ಮೇರಿಯವರ ಪುತ್ರಿ ಬಬಿತಾ ನಗರದ ಸಿಎಂಆರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಂಜಿನಿಯರ್ ನಾಲ್ಕನೆ ಸೆಮಿಸ್ಟರ್ ಪರೀಕ್ಷೆ ಬರೆದಿದ್ದಳು.
ಈಕೆ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು. ಆ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆಆರ್ ಪುರಂ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ ಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಹಾಸನ ಕಿರುಕುಳ ಕೇಸ್
ಹಾಸನ ತಾಲ್ಲೂಕು, ಕಸಬಾ ಹೋಬಳಿ, ಜನಿವಾರ ಗ್ರಾಮದ ರಂಗಮ್ಮ ರವರ ಮಗಳು ಸುಕನ್ಯಳನ್ನು ಈಗ್ಗೆ 3 ವರ್ಷದ ಹಿಂದೆ ನಂಜದೇವರ ಕಾವಲು ಪ್ರಕಾಶ್ ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಆದರೆ, ಪ್ರಕಾಶ್ ಮತ್ತು ಸುಕನ್ಯ ರವರು ಬಿಟ್ಟಗೌಡನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.
ಮದುವೆಯಾದ ಸ್ವಲ್ಪ ದಿವಸ ಅನ್ಯೋನ್ಯವಾಗಿದ್ದು, ನಂತರ ವರದಕ್ಷಿಣೆಗಾಗಿ ಹಿಂಸೆ ಕಿರುಕುಳ ನೀಡುತ್ತಿದ್ದು ದಿನಾಂಕ: 03-08-2013 ರಂದು ರಾತ್ರಿ ಸಮಯದಲ್ಲಿ ನೇಣು ಹಾಕಿ ಕೊಲೆ ಮಾಡಿದ್ದು ಸುಕನ್ಯ, 26 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಾಯಿ ಶ್ರೀಮತಿ ರಂಗಮ್ಮ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಪ್ರಕಾಶ್ @ ಗಿಡ್ಡೇಗೌಡ ಬಿನ್ ಲೇಟ್ ತಿಮ್ಮೇಗೌಡ ರವರನ್ನು ದಸ್ತಗಿರಿ ಮಾಡಿರುತ್ತಾರೆ.

ಕೋಲಾರ ರಸ್ತೆ ಅಪಘಾತ
ಗೌನಪಲ್ಲಿ ಪೊಲೀಸ್ ಠಾಣೆಯಲ್ಲಿ ಮರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬೆಂಗಳೂರು-ಮದನಪಲ್ಲಿ ರಸ್ತೆಯ ಜೋಡಿಕೊತ್ತಪಲ್ಲಿ ಗೇಟ್ ನ ಗೋಪಾಲಪ್ಪ ರವರ ಜಮೀನಿನ ಬಳಿ ಸಂಭವಿಸಿರುತ್ತದೆ.
ದಿನಾಂಕ 03/08/2013 ರಂದು ಸಂಜೆ 5 ಗಂಟೆಯಲ್ಲಿ ಕೋಲಾರ ನಗರ ಕೀಲುಕೋಟೆಯ ವಾಸಿ ಅಪ್ಪೋಜಪ್ಪ ರವರು ತಮ್ಮ ಬಾಬತ್ತು ಕೆಎ-01,ಇಬಿ-6569 ಟಿವಿಎಸ್ ಎಕ್ಸಲ್ ನಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದು,
ಕಾರ್ ನಂ-ಕೆಎ-05,ಪಿ-6588 ರ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿವಿಎಸ್ ಗೆ ಡಿಕ್ಕಿ ಹೊಡೆಸಿದ್ದು. ಅಪ್ಪೋಜಪ್ಪ ರವರಿಗೆ ತೀವ್ರತರವಾದ ಗಾಯಗಳಾಗಿದ್ದು, ಅವರು ಆರ್.ಎಲ್ .ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದವರು ಸಂಜೆ 7 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.
ದಾವಣಗೆರೆ ಹತ್ಯೆ
ಪಿರ್ಯಾದಿ ಜಿ.ಎನ್. ಶಿವಮೂರ್ತಿ ತಂದೆ ನಾರಪ್ಪ, 43 ವರ್ಷ, ಲಿಂಗಾಯಿತ, ಬಸ್ತಿಹಳ್ಳಿ ಗ್ರಾಮ, ಇವರ ತಂಗಿ ಶಿಕ್ಷಕಿ ರೇವತಿ @ ರೇವಮ್ಮ, ಗಂಡ ಶಿವನಾರಂದಪ್ಪ 35 ವರ್ಷ, ಯರ್ಲಕಟ್ಟೆ ಗ್ರಾಮ ಇವರಿಗೆ ಆರೋಪಿತ ಶಿವನಾರಂದಪ್ಪ, ಬಸಪ್ಪ, ನಿಂಗಮ್ಮ , ಸುಶಿಲಮ್ಮ,ಸುಲೋಚನಮ್ಮ, ಶಾಂತಮ್ಮ, ಪ್ರೇಮ ಇವರೆಲ್ಲ ಆಗಿಂದಾಗ್ಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ.
ಈ ಬಗ್ಗೆ ಪಿರ್ಯಾದಿ ಮತ್ತು ಹಿರಿಯರು ಹಲವಾರು ಬಾರಿ ಬುದ್ಧಿಮಾತು ಹೇಳಿದ್ದರೂ ಶಿವನಾರಂದನು ತನ್ನ ಹೆಂಡತಿಯ ಮೇಲೆ ಸದಾ ಅನುಮಾನಗೊಂಡು, ಕಿರುಕುಳ ನೀಡುವುದನ್ನು ನಿಲ್ಲಿಸಿರುವುದಿಲ್ಲ.
03.08.2013 ರಂದು ಸಾಯಂಕಾಲ 4.00 ಗಂಟೆಗೆ ಶಿವನಾರಂದನು ರೇವಮ್ಮಳನ್ನು ಮನೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ, ತಾನು ಸಹ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಸದರಿ ಕೊಲೆಗೆ ಮೃತನ ತಂದೆ ತಾಯಿ ಮತ್ತು ಅಕ್ಕತಂಗಿಯರಾದ ಮೇಲ್ಕಂಡ ಆರೋಪಿತರು ಕುಮ್ಮಕ್ಕು ನೀಡಿರುತ್ತಾರೆ.

ಮೋಟಾರ್ ಸೈಕಲ್ ಕಳುವು
ದಿನಾಂಕ-04-08-2013.ರಂದು ಸಮಯ 19-00 ಗಂಟೆಗೆ ಪಿರ್ಯಾದುದಾರರಾದ ವಸಂತರಾಜ್ ಅರಸ್ ತೇಗೂರು ವಾಸಿ ಇವರು ಠಾಣೆಗೆ ದೂರು ನೀಡಿದ್ದಾರೆ.ನಾನು ಸುಮಾರು 14 ವರ್ಷದಿಂದ ನಗರ ಸಭೆಯಲ್ಲಿ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ನಾನು ನಮ್ಮ ಊರಿನಿಂದ ಓಡಾಡಿಕೊಂಡಿರಲು ಅಕ್ಟೋಬರ್ 2007 ರಲ್ಲಿ ಒಂದು ಬಜಾಜ್ ಪ್ಲಾಟೀನಾ ಬೈಕ್ ನಂ.ಕೆಎ-18 ಆರ್-0289 ನ್ನು ಕೊಂಡುಕೊಂಡು ಅದರಲ್ಲೇ ಓಡಾಡಿಕೊಂಡಿದ್ದೆ.
ದಿನಾಂಕ:04-08-2013 ರಂದು ಸಂಜೆ 7-45 ರ ಸಮಯದಲ್ಲಿ ನಮ್ಮ ಊರಿನಿಂದ ಚಿಕ್ಕಮಗಳೂರು ನಗರಕ್ಕೆ ಕರ್ತವ್ಯ ನಿರ್ವಹಿಸಲು ನನ್ನ ಮಗನೊಂದಿಗೆ ಬಂದು ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಬಾಗದಲ್ಲಿರುವ ನಿಲ್ಲಿಸಿ ಕಾಫಿ ಕುಡಿದು ನಂತರ ಸಮಯ 8-30 ಕ್ಕೆ ಬಂದು ನೋಡಿದಾಗ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ ನಂತರ ನಾನು ಎಲ್ಲಾ ಕಡೆ ಹುಡುಕಾಡಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.
ಮೊ.ಸಂ. 156/2013 ಕಲಂ; 379 ಐಪಿಸಿ












Click it and Unblock the Notifications