ಮುಂಬೈ: ಸೇವೆ ನಿಲ್ಲಿಸಿದ ಪ್ರೀಮಿಯರ್ ಪದ್ದು

ಮುಂಬೈ, ಆ.4: ವಾಣಿಜ್ಯ ನಗರಿ ಮುಂಬೈನ ಅವಿಭಾಜ್ಯ ಅಂಗವೊಂದು ಕಳಚಿ ಕೊಂಡಿದೆ. ಸುಮಾರು 50 ವರ್ಷಗಳಿಂದ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಹಳದಿ-ಕಪ್ಪು ಬಣ್ಣದ ಪುಟ್ಟ ಪ್ರೀಮಿಯರ ಪದ್ಮಿನಿ ಶಾಶ್ವತವಾಗಿ ತನ್ನ ಸೇವೆ ನಿಲ್ಲಿಸಿದೆ.

ಇನ್ನು ಕೆಲವೇ ದಿನಗಳಲ್ಲಿ ಈ ಕಾರುಗಳು ಇತಿಹಾಸದ ಭಾಗವಾಗಿ ಹೋಗಲಿದೆ. 20 ವರ್ಷಕ್ಕಿಂತ ಹಳೆಯ ಕಾರುಗಳನ್ನು ರಸ್ತೆಯಿಂದ ಪೂರ್ಣ ರೀತಿಯಲ್ಲಿ ಹಿಂದಕ್ಕೆ ಪಡೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಮುಂಬೈನಲ್ಲಿ ಸದ್ಯ ಸಂಚಾರದಲ್ಲಿರುವ ಸುಮಾರು 4500 ಪ್ರೀಮಿಯರ್ ಪದ್ಮಿನಿ ಫಿಯೆಟ್ ಕಾರುಗಳು ಗುಜರಿ ಸೇರಲಿವೆ. ಈ ವಾರದಿಂದಲೇ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ನಿರ್ಧರಿಸಿರುವುದರಿಂದ ಈ ಕಾರುಗಳು ರಸ್ತೆಯಿಂದ ಮಾಯಾವಾಗುವುದು ಖಚಿತವಾಗಿದೆ.

Mumbai’s Premier Padmini taxis to be phased out
1964ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಈ ಕಾರುಗಳನ್ನು ಪರಿಚಯಿಸಿದ್ದು ಹಿಂದೂಸ್ತಾನ್ ಮೋಟರ್ ಕಂಪನಿ, ಫಿಯೆಟ್ ಕಂಪನಿ ಲೈಸನ್ ಅಡಿಯಲ್ಲಿ ಬಾಂಬೆ(ಈಗಿನ ಮುಂಬೈ ನಲ್ಲಿ ಪದ್ಮಿನಿ ತಯಾರಾಗತೊಡಗಿತು. ಮುಂಬೈನ ಟ್ಯಾಕ್ಸಿ(ಫಿಯೆಟ್ ಟ್ಯಾಕ್ಸಿ ಎಂದೇ ಕರೆಯುತ್ತಾರೆ)ಯಾಗಿ ಸುಮಾರು 62,000ಕ್ಕೂ ಪದ್ಮಿನಿಯರು ಓಡಾಡುತ್ತಿದ್ದರು. ಆದರೆ, 2000ರ ಹೊತ್ತಿಗೆ ಪದ್ಮಿನಿ ತಯಾರಿಕೆ ನಿಲ್ಲಿಸಲಾಯಿತು.

ಆದರೆ, ಹಳೆ ಕಾರಿನ ಶೋಕಿ ಬಿಡದ ಮುಂಬೈಕರ್ ಗಳು ಪದ್ಮಿನಿಗೆ ಹೊಸ ರೂಪ ಕೊಟ್ಟು ಮತ್ತೆ ರೋಡಿಗಿಳಿಸಿದ್ದರು. ದೆಹಲಿಯ ಅಂಬಾಸಿಡರ್ ಟ್ಯಾಕ್ಸಿ, ಲಂಡನ್ನಿನ ಹ್ಯಾಕ್ನಿ ಕ್ಯಾಬ್ ನಂತೆ ಬಾಂಬೆಯಲ್ಲಿ ಫಿಯೆಟ್ ಟ್ಯಾಕ್ಸಿ ಜನಪ್ರಿಯವಾಗಿತ್ತು. ಮುಂಬೈನ ಮಹಾ ಮಳೆ, ಸುಡು ಬಿಸಿಲು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಕ್ವೀನ್ ನೆಕ್ಲೆಸ್ ನಲ್ಲಿ ಹಗಲು ರಾತ್ರಿ ಎನ್ನದೆ ಪದ್ಮಿನಿ ಓಡಾಡಿದ್ದಾಳೆ.

ಸುಮಾರು 26 ವರ್ಷಗಳ ಕಾಲ ಪದ್ಮಿನಿ ವಾಹನ ಚಾಲನೆ ಮಾಡಿರುವ ದಶರಥ್ ಸಾವಂತ್ ಅವರ ಪ್ರಕಾರ, ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ.ಇನ್ನೂ ಐದು ವರ್ಷವಾದರೂ ಪದ್ಮಿನಿ ಓಡಾಡಲು ಬಿಡಬೇಕಿತ್ತು ಎಂದಿದ್ದಾರೆ. ವಯಸ್ಸಾದ ತಕ್ಷಣ ಗುಜರಿಗೆ ಹಾಕುವುದು ಎಷ್ಟು ಅಮಾನವೀಯ ಎಂದು ಪ್ರಶ್ನಿಸಿದ್ದಾರೆ.

ಆದರೆ, ಪದ್ಮಿನಿ ವಾಹನಗಳಿಂದ ಆಗುವ ಪರಿಸರ ಮಾಲಿನ್ಯ ತಡೆಗಟ್ಟಲು ತುರ್ತು ಕ್ರಮ ಅನಿವಾಯ್ರ 20 ವರ್ಷ ಹಳೆಯದಾದ ಸುಮಾರು 5 ಸಾವಿರ ಕಾರುಗಳನ್ನು ಗುಜರಿಗೆ ಸೇರಿಸಲಾಗುವುದು ಮಿಕ್ಕ ಕಾರುಗಳು ನಿಧಾನವಾಗಿ ಓಡಾಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ರಸ್ತೆ ಸಾರಿಗೆ ಸಂಸ್ಥೆ ಇನ್ಸ್ ಪೆಕ್ಟರ್ ರಮೇಶ್ ಸರ್ನಾಯಕ್ ಹೇಳಿದ್ದಾರೆ. ಒಟ್ಟಾರೆ ಮುಂಬೈನಲ್ಲಿ ಟ್ಯಾಕ್ಸಿ ಎಂದರೆ ಎದುರಿಗೆ ಕಾಣುತ್ತಿದ್ದ ಹಳದಿ ಕಪ್ಪು ಪದ್ಮಿನಿ ಇನ್ಮುಂದೆ ಕಾಣಸಿಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+