ಆರ್ ಟಿಐ ಭಯದಿಂದ ರಾಜಕೀಯ ಪಕ್ಷಗಳು ನಿರಾಳ

ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ಪ್ರಮುಖ ಪಕ್ಷಗಳು ಆರ್ ಟಿಐ ವ್ಯಾಪ್ತಿಯಿಂದ ಹೊರಗಿರುವ ಕುರಿತು ಒಮ್ಮತದ ನಿರ್ಧಾರ ಕೈಗೊಂಡಿದ್ದವು.
ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಆರು ಪ್ರಮುಖ ರಾಜಕೀಯ ಪಕ್ಷಗಳನ್ನು ಆರ್ ಟಿಐ ವ್ಯಾಪ್ತಿಗೆ ಸೇರಿಸಿ ಇತ್ತೀಚೆಗಷ್ಟೇ ತೀರ್ಪು ನೀಡಿದ ಕೇಂದ್ರೀಯ ಮಾಹಿತಿ ಆಯೋಗಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ರಾಜಕೀಯ ಪಕ್ಷಗಳು ಹೊರಗುಳಿದರೆ, ರಾಜಕೀಯ ಪಕ್ಷಗಳ ಎಲ್ಲಾ ರಹಸ್ಯಗಳು ಜನರ ಕೈಗೆ ದೊರೆಯುವುದಿಲ್ಲ. ಪಕ್ಷದ ಹಣಕಾಸು ವ್ಯವಹಾರದ ವಿವರ ಮತ್ತು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂತಾದವುಗಳ ಕುರಿತು ಪಕ್ಷಗಳು ಜನರಿಗೆ ಉತ್ತರ ನೀಡಬೇಕಾಗಿಲ್ಲ.
ತಿದ್ದುಪಡಿ ಏಕೆ : ಕೇಂದ್ರ ಮಾಹಿತಿ ಹಕ್ಕು ಆಯೋಗ ಜೂನ್‌ನಲ್ಲಿ ಆರ್ ಟಿಐ ಕಾಯ್ದೆಯನ್ನು ರಾಜಕಿಯ ಪಕ್ಷಗಳಿಗೂ ಅನ್ವಯಿಸಿ, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳಿಗೆ ಸಾರ್ವಜನಿಕ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆದೇಶ ನೀಡಿತ್ತು.(ಆರ್ ಟಿಐ ಅಡಿಗೆ ಬರಲು ಪಕ್ಷಗಳಿಗೆ ಅಂಜಿಕೆ)
ಇದರ ಅನ್ವಯ ಪಕ್ಷಗಳು ಆರ್ ಟಿಐ ಅರ್ಜಿಗಳಿಗೆ ಕಡ್ಡಾಯವಾಗಿ ಉತ್ತರ ನೀಡಬೇಕಾಗಿತ್ತು. ಆದರೆ, ಇದನ್ನು ರಾಜಕೀಯ ಪಕ್ಷಗಳು ವಿರೋಧಿಸಿದ್ದವು. ಸಿಪಿಐನ್ನು ಹೊರತುಪಡಿಸಿ ಉಳಿದ ಯಾವುದೇ ಪಕ್ಷ ಸಾರ್ವಜನಿಕ ಅಧಿಕಾರಿಗಳನ್ನು ನೇಮಕ ಮಾಡಿರಲಿಲ್ಲ.
ಎಲ್ಲಾ ಪಕ್ಷಗಳಿಂದಲೂ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆರ್ ಟಿಐ ವ್ಯಾಪ್ತಿಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಡುವ ತಿದ್ದುಪಡಿ ವಿಧೇಯಕವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ನೀಡಿದೆ.












Click it and Unblock the Notifications