ಕೊನೆಗೂ ಕ್ಷೀರಭಾಗ್ಯ ಯೋಜನೆ ಪ್ರಾರಂಭ

ಗುರುವಾರ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಾಲು ಅಮೃತ ಸಮಾನ, ಮಕ್ಕಳು ದೇವರ ಸಮಾನ. ದೇವರಿಗೆ ನಾವು ಹಾಲನ್ನು ನೀಡುತ್ತದ್ದೇವೆ ಎಂದರು.
ಉಚಿತ ಹಾಲು ವಿತರಣೆ ಯೋಜನೆಯಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು 400 ಕೋಟಿ ರುಪಾಯಿ ಹೊರೆಯಾಗಲಿದೆ. ಆದರೆ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಒಳಿತಿಗಾಗಿ ಯೋಜನೆ ಜಾರಿಗೆ ತರಲಾಗಿದ್ದು, ಯೋಜನೆ ಯಶಸ್ವಿಯಾಗಬೇಕು ಎಂದು ಹೇಳಿದರು.
ವಾರದಲ್ಲಿ ಮೂರುದಿನ ಸೋಮವಾರ, ಬುಧವಾರ ಮತ್ತು ಶುಕ್ರವಾರ ಶಾಲಾಮಕ್ಕಳಿಗೆ ಹಾಲು ದೊರೆಯಲಿದೆ. ಅಂಗನವಾಡಿಯಿಂದ ಎಸ್ಎಸ್ಎಲ್ ಸಿ ವರೆಗಿನ ಸುಮಾರು 1ಕೋಟಿಗೂ ಅಧಿಕ ಮಕ್ಕಳು ಈ ಯೋಜನೆಗೆ ಫಲಾನುಭವಿಗಳಾಗಲಿದ್ದಾರೆ ಎಂದು ತಿಳಿಸಿದರು.
ಹಾಲಿನಲ್ಲಿ ಕಲಬೆರೆಕೆ ಆಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂದು ಕಚ್ಚಾ ಹಾಲು ಪೂರೈಸುವ ಬದಲು ಪೋಷಕಾಂಶಗಳನ್ನು ಹೊಂದಿರುವ ಪರಿಶುದ್ಧ ನಂದಿನಿ ಹಾಲಿನ ಪುಡಿಯನ್ನು ಸರಬರಾಜು ಮಾಡಲು ಸರ್ಕಾರ ನಿರ್ಧರಿಸಿತು ಎಂದರು.












Click it and Unblock the Notifications