ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಬುಧವಾರ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 70 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 50 ಪೈಸೆ ಏರಿಕೆಯಾಗಲಿದೆ. ಎರಡು ದರಗಳು ತೆರಿಗೆ ರಹಿತ ಏರಿಕೆಯಾಗಿದ್ದು, ಆಯಾ ರಾಜ್ಯಗಳ ತೆರಿಗೆ ಸೇರಿಸಿದರೆ ಬೆಲೆ ಇನ್ನಷ್ಟು ದುಬಾರಿಯಾಗಲಿದೆ.
ರುಪಾಯಿಯ ಮೌಲ್ಯ ದಾಖಲೆಯ ಕುಸಿತ ಕಂಡಿರುವುದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿದೆ. ಬುಧವಾರ ಡಾಲರ್ ಎದುರು ರುಪಾಯಿ ಮೌಲ್ಯ 60.40ಕ್ಕೆ ಕುಸಿದಿತ್ತು. ಕಳೆದ ಮೂರು ತಿಂಗಳಲ್ಲಿ ರುಪಾಯಿ ಮೌಲ್ಯ ಶೇ 10 ರಷ್ಟು ಕುಸಿದಿದೆ. ಇಂಧನ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಚ್ಚಾತೈಲವನ್ನು ಡಾಲರ್ ಮೌಲ್ಯದಲ್ಲಿ ಖರೀದಿಸುವುದರಿಂದ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.
ಕಳೆದ ಎರಡು ತಿಂಗಳಲ್ಲಿ ಪೆಟ್ರೋಲ್ ದರ 5 ಬಾರಿ ಏರಿಕೆಯಾಗಿದೆ. ಡೀಸೆಲ್ ಬೆಲೆ ಜನವರಿ 17ರಿಂದ ಇಲ್ಲಿ ತನಕ 7 ಬಾರಿ ಏರಿಕೆ ಕಂಡಿದೆ.
ಪ್ರತಿ ಎರಡು ವಾರ ಪೆಟ್ರೋಲ್ ದರ ಪರಿಷ್ಕರಣೆಗೆ ಇಂಧನ ಸಂಸ್ಥೆಗಳು ಮುಂದಾಗಿವೆ. ಪೆಟ್ರೋಲ್ ದರ ಬೆಲೆ ನಿರ್ಧಾರ ಸರ್ಕಾರದ ಕೈಲಿಲ್ಲ. ಆದರೆ, ಡೀಸೆಲ್ ಬೆಲೆ ಸರ್ಕಾರ ನಿರ್ಧರಿಸಲಿದ್ದು, ಸ್ವಲ್ಪ ಬೆಲೆಯಲ್ಲಿ ಹೆಚ್ಚು ಕಮ್ಮಿ ಮಾಡಬಹುದಾಗಿದೆ.
ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 1.55 ರೂ. ಹೆಚ್ಚಳ ಮಾಡಿತ್ತು. ಜೂನ್ 17ರಂದು ಪೆಟ್ರೋಲ್ ದರವನ್ನು 1.82 ಏರಿಕೆ ಮಾಡಲಾಗಿತ್ತು ನಂತರ, ಡೀಸೆಲ್ ಬೆಲೆ 50 ಪೈಸೆ ಹೆಚ್ಚಾಗಿತ್ತು.
ದೆಹಲಿಯಲ್ಲಿ (ಎಲ್ಲಾ ದರಗಳು ಪ್ರತಿ ಲೀಟರ್ ಗೆ ಹಾಗೂ ತೆರಿಗೆ ರಹಿತ ಬೆಲೆ)
* ಪೆಟ್ರೋಲ್ ದರ 71.28 ರು
* ಡೀಸೆಲ್ 51.40 ರು
ಮುಂಬೈ
* ಪೆಟ್ರೋಲ್ ದರ 78.61 ರು
* ಡೀಸೆಲ್ 58.23 ರು
ಕೋಲ್ಕತ್ತಾ
* ಪೆಟ್ರೋಲ್ ದರ 78.64 ರು
* ಡೀಸೆಲ್ 55.74 ರು
ಚೆನ್ನೈ
* ಪೆಟ್ರೋಲ್ ದರ 74.49 ರು
* ಡೀಸೆಲ್ 54.76 ರು
ಬೆಂಗಳೂರು
* ಪೆಟ್ರೋಲ್ ದರ 77.91 ರು
* ಡೀಸೆಲ್ 55.89 ರು












Click it and Unblock the Notifications