ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿ ಇಲ್ಲವೇನ್ರೀ?

ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವದಲ್ಲಿ ಇದೆ ಅಂಬೋದು ನಿಮಗೆಲ್ಲ ಗೊತ್ತಿಲ್ವೇನ್ರೀ? ಎಂದು ದೊಡ್ಡಗೌಡ್ರು ಮಾಧ್ಯಮ ಮಂದಿಯನ್ನು ಗದರಿಕೊಂಡಿದ್ದಾರೆ.
'ಅಲ್ರೀ ಮುಂಬರುವ 2014ರ ಲೋಕಸಭಾ ಚುನಾವಣೆ ಕುರಿತು ಅಷ್ಟೆಲ್ಲಾ ಮಾಧ್ಯಮ ಸಮೀಕ್ಷೆಗಳು ನಡೆಯುತ್ತಿವೆ. ಸಮೀಕ್ಷೆ ನಡೆಸಿ ಕೇಂದ್ರದ ಯುಪಿಎ ಮತ್ತು ಎನ್‌ಡಿಎ ಪಕ್ಷಗಳ ಬಲಾಬಲವನ್ನು ಈಗಿನಿಂದಲೇ ಲೆಕ್ಕ ಹಾಕತೊಡಗಿವೆ. ಈ ಮಾಧ್ಯಮಗಳಿಗೆ ರಾಜ್ಯದಲ್ಲಿ ಜೆಡಿಎಸ್ ಇದೆ ಎಂಬುದೇ ಕಾಣುತ್ತಿಲ್ವಾ?' ಎಂದು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಮಾಧ್ಯಮಗಳು ನಮ್ಮ ಪಕ್ಷ ಸಣ್ಣದೆಂದು ಲಘುವಾಗಿ ಪರಿಗಣಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೇಗೆ ಮಹತ್ವದ ಪಾತ್ರ ವಹಿಸಲಿದೆ ಎಂಬುದನ್ನು ಸಾಧಿಸಿ ತೋರಿಸಲಿದ್ದೇವೆ, ಕಾಯ್ತಿರಿ ಎಂದು ಗುಡುಗಿದರು. ಈ ದೇವೇಗೌಡ ಇಲ್ಲದೆ ಯಾವ ಪಕ್ಷವೂ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದೂ ಒಕ್ಕಣೆಯನ್ನೂ ಸೇರಿಸಿದರು.












Click it and Unblock the Notifications