ಅಮೆರಿಕ ಬೇಡ ಅಂದಿದ್ದಕ್ಕೆ ಮಹಿಳಾ ಟೆಕ್ಕಿ ಆತ್ಮಹತ್ಯೆ

ರಾಜಧಾನಿಯ ಲಕಡಿ ಕಾ ಪೂಲ್ ಪ್ರದೇಶದಲ್ಲಿ ಲಾಡ್ಜಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು 26 ವರ್ಷದ ಕೆ ಪಲ್ಲವಿ ಮೃತಪಟ್ಟಿದ್ದಾಳೆ. ಈಕೆ ಹೈದರಾಬಾದಿಗೆ ಅಂಟಿಕೊಂಡಿರುವ ರಂಗಾರೆಡ್ಡಿ ಜಿಲ್ಲೆಯ ಹಯಾತ್ ನಗರದ ನಿವಾಸಿ.
ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಬಂದಿರುವುದಾಗಿ ಹೇಳಿ ಪಲ್ಲವಿ ಲಾಡ್ಜಿನಲ್ಲಿ ರೂಂ ಪಡೆದಿದ್ದಳು. ಆದರೆ ಎಷ್ಟು ಹೊತ್ತಾದರೂ ಹೊರಬಾರದಿದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಇಂದು ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ತನಿಖೆ ನಡೆಸಿದಾಗ ಪಲ್ಲವಿ ನೇಣು ಹಾಕಿಕೊಂಡು ಸತ್ತಿರುವುದು ಗೋಚರವಾಗಿದೆ.
ಪಲ್ಲವಿಯ ಪೂರ್ವಾಪರ ತಿಳಿದ ಸೈಫಾಬಾದ್ ಪೊಲೀಸರು ಆಕೆಯ ಪೋಷಕರಿಗೆ ಮಾಹಿತಿ ರವಾನಿಸಿದ್ದಾರೆ.
ಪಲ್ಲವಿಯ ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ- ಪಲ್ಲವಿ ಅಮೆರಿಕದಲ್ಲಿ MS ಶಿಕ್ಷಣ ಪೂರೈಸಿ ತಾಯ್ನಾಡಿಗೆ ಮರಳಿದ್ದಳು. ಆದರೆ ಕೆಲ ಸಮಯದ ನಂತರ ಮತ್ತೆ ತಾನು ಅಮೆರಿಕಕ್ಕೆ ಹೋಗಬೇಕೆಂದೂ ಅಲ್ಲೇ ಕೆಲಸ ಮುಂದುವರಿಸಬೇಕೆಂದು ಪೋಷಕರೆದುರು ತನ್ನ ಆಸೆಯನ್ನು ತೋಡಿಕೊಂಡಿದ್ದಾಳೆ.
ಆದರೆ ಪೋಷಕರು ಅಮೆರಿಕಕ್ಕೆ ಮತ್ತೆ ಹೋಗುವುದು ಬೇಡ. ತಮ್ಮ ಜತೆಯೇ ಇದ್ದುಬಿಡು ಎಂದು ಪಲ್ಲವಿಗೆ ತಿಳಿಯಹೇಳಿದ್ದಾರೆ. ಇದು ಪಲ್ಲವಿಗೆ ಇಷ್ಟವಾಗಿಲ್ಲ. ಪೋಷಕರ ನಿರ್ಧಾರದಿಂದ ಪಲ್ಲವಿ ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದಳು. ಈಗ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. (ಪಿಟಿಐ)












Click it and Unblock the Notifications