ಅಚ್ಚರಿ: ಹೃದಯವೇ ಇಲ್ಲದೆ ಆತ 2 ವರ್ಷ ಬದುಕಿದ!

ಯಾವುದೇ ಜೀವಂತ ವ್ಯಕ್ತಿ ಉಸಿರಾಡಬೇಕು ಅಂದರೆ ಹೃದಯ ಇರಲೇ ಬೇಕು. ಅಂದರೆ ರಕ್ತವನ್ನು ಇಡೀ ದೇಹಕ್ಕೆ ಪಂಪ್ ಮಾಡಲು ಹೃದಯದ ಎಂಬ ಪುಟ್ಟ ಯಂತ್ರ ಬೇಕೇ ಬೇಕು. ಅಥವಾ ಅದಿಲ್ಲದಿದ್ದರೂ ಆ ಕಾರ್ಯವನ್ನು ಯಥಾವತ್ತಾಗಿ ಪೂರೈಸಬಲ್ಲ ಬೇರೊಂದು ಜೋಡಣೆ ಇದ್ದರೂ ಆದೀತು. ಅಂದರೆ ಬಾಹ್ಯ ಯಂತ್ರ ಹೃದಯದ ಕಾರ್ಯವನ್ನು ಅಚ್ಚುಕಟ್ಟಾಗಿ ಪೂರೈಸಿದರೆ ಸಾಕು.
42 ವರ್ಷದ ಬ್ರಿಟನ್ನಿನ ಮ್ಯಾಥ್ಯೂ ಗ್ರೀನ್ ವಿಷಯದಲ್ಲೂ ಇದೇ ಆಗಿದೆ. ಈತ ವೃತ್ತಿಯಿಂದ ವೈದ್ಯಲೋಕದಲ್ಲೇ ಇದ್ದಾನೆ. ಈತನಿಗೆ 7 ವರ್ಷದ ಮಗನೂ ಇದ್ದಾನೆ. 2-3 ವರ್ಷದ ಹಿಂದೆ ಈತನ ಹೃದಯ ಕುಲಗೆಟ್ಟು ಹೋಗಿ ಬಹುತೇಕ ಸ್ಥಬ್ದವಾಗುವ ಹಂತಕ್ಕೆ ಬಂದುಬಿಟ್ಟಿತ್ತು. ತಕ್ಷಣವೇ ವೈದ್ಯರು ಬದಲಿಯಾಗಿ/ ಬಾಹ್ಯದಿಂದ ರಕ್ತದ ಪಂಪ್ ಅನ್ನು ಅಳವಡಿಸಿದರು.
ಈ ಮಧ್ಯೆ, ಬೋನಸ್ ಅಂತಲೇ ಅಂದುಕೊಂಡು ಮ್ಯಾಥ್ಯೂ ಗ್ರೀನ್ 2 ವರ್ಷ ಬದುಕು ನಡೆಸಿದ. ಪಕ್ಕದ ಚಿತ್ರ: ಪಾರ್ಕಿನಲ್ಲಿ ತನ್ನ ಮುದ್ದು ಕಂದನ ಜತೆ ಆಟವಾಡುತ್ತಿರುವ ಮ್ಯಾಥ್ಯೂ. ಜತೆಗೆ ಬಾಹ್ಯ ಹೃದಯದ ಯಂತ್ರವೂ ಇದೆ ಗಮನಿಸಿ.
ಕಳೆದ ತಿಂಗಳು ಹೃದಯ ವೈಶಾಲ್ಯದವರೊಬ್ಬರು ಅಂಗಾಂಗ ದಾನದ ಮೂಲಕ ತಮ್ಮ ಹೃದಯವನ್ನು ಆಸ್ಪತ್ರೆಗೆ ಒಪ್ಪಿಸಿದರು. ವೈದ್ಯರೂ ತಡಮಾಡದೆ ಮತ್ತೆ ಮ್ಯಾಥ್ಯೂನ ಎದೆಗೂಡನ್ನು ತೆರೆದು ಅದರಲ್ಲಿ ದಾನಿಯೊಬ್ಬರು ಪುಟ್ಟ ಹೃದಯವನ್ನು ಅಳವಡಿಸಿಯೇ ಬಿಟ್ಟರು.
Cambridgeshireನಲ್ಲಿ Papworth Hospitalನಲ್ಲಿ ಈ ಅಪರೂಪದ ಬದಲಿ ಹೃದಯ ಜೋಡಣೆ ನಡೆಯಿತು. 2 ವರ್ಷದಿಂದ ಆಸ್ಪತ್ರೆಯಲ್ಲಿ ಕಾಲ ಕಳೆದ ಮ್ಯಾಥ್ಯೂನನ್ನು ಸ್ವತಃ ವೈದ್ಯರೇ ಕೈಹಿಡಿದು ಸದ್ಯದಲ್ಲೇ ಮನೆಗೆ ಬಿಟ್ಟು ಬರಲು ತಯಾರಿ ನಡೆಸಿದ್ದಾರೆ. ಜೋಪಾನ, ನಿಮ್ಮ ಹೃದಯ!












Click it and Unblock the Notifications