ವಿಜಯ್ ದಿವಸ ಯೋಧರಿಗೆ ಟ್ವೀಟ್ ನಮನ
ಬೆಂಗಳೂರು, ಜು.26: ಕಾರ್ಗಿಲ್ ಯುದ್ಧದ ವಿಜಯೋತ್ಸವದ 14ನೇ ವರ್ಷದ ಸಂಭ್ರಮಾಚರಣೆ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದೆಲ್ಲೆಡೆ ಯೋಧರಿಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಲಾಗುತ್ತಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಕಾರ್ಗಿಲ್ ಯುದ್ಧದ ಬಗ್ಗೆ, ಯುದ್ಧದ ಗೆಲುವಿನ ಬಗ್ಗೆ ಚರ್ಚೆ ನಡೆದಿದೆ. ಎನ್ ಡಿಟಿವಿ ಪ್ರಧಾನ ಪತ್ರಕರ್ತೆ ಬರ್ಖಾ ದತ್ ವರ ಕಾರ್ಗಿಲ್ 'ವಾರ್' ವರದಿ, 26ನೇ ದಿನಾಂಕದ ಬಗ್ಗೆ ಕುತೂಹಲಕಾರಿ ಅಂಶಗಳು, ಹುತಾತ್ಮ ಯೋಧರಿಗೆ ನಮನ ಸೇರಿದಂತೆ ಹಲವಾರು ಸಂದೇಶಗಳು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹರಿದಾಡಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ಯೋಧರ ಜತೆ ಇರುವ ಅಪರೂಪದ ಚಿತ್ರ, ಟೈಗರ್ ಹಿಲ್ ಏರಿ ನಿಂತ ಯೋಧರ ಫೋಟೊ ಸೇರಿದಂತೆ ಹಲವು ಚಿತ್ರಗಳು ಲಭ್ಯವಿದೆ. 26ನೇ ದಿನಾಂಕದ ಬಗ್ಗೆ ಕುತೂಹಲಕಾರಿ ಅಂಶವನ್ನು ನೀಡಲಾಗಿದೆ. 1999ರ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ ಬಿಟ್ಟರೆ ಮಿಕ್ಕಂತೆ 26ನೇ ತಾರೀಖು ನೋವನ್ನೇ ತಂದಿದೆಯಂತೆ 2006ರಲ್ಲಿ ಮುಂಬೈ ಮಹಾ ಪ್ರವಾಹ, 2013ರಲ್ಲಿ ರುಪಾಯಿ ಸರ್ವಕಾಲಿಕ ಕುಸಿತ ..ಹೀಗೆ ಅನೇಕ ಟ್ವೀಟ್ ಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ ಓದಿರಿ...
|
ಗಣ್ಯರ ಟ್ವೀಟ್
ರಾಜಸ್ಥಾನ ಪ್ರಮುಖ ಬಿಜೆಪಿ ನಾಯಕಿ ವಸುಂಧರ ರಾಜೇ ಅವರ ಸಂದೇಶ
|
ರಜೆ ಬೇಕಂತೆ
ಭಾರತದಲ್ಲಿ ಗಣ್ಯರ ಹುಟ್ಟುಹಬ್ಬಕ್ಕೆ, ಪುಣ್ಯಸ್ಮರಣೆಗೆ ಸಾರ್ವತ್ರಿಕ ರಜೆ ಇದೆ ಯುದ್ಧದ ಗೆಲುವಿಗೇಕೆ ಇಲ್ಲ
|
ಮೋದಿ ಅವರ ಸಂದೇಶ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಂದೇಶ
| Array |
ಒಂದು ಅಪೂರ್ವ ಚಿತ್ರ
ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ಯುದ್ಧ ಗೆದ್ದ ವೀರರ ಜೊತೆ
|
26ನೇ ದಿನಾಂಕದ ಮಹಿಮೆ
26ನೇ ದಿನಾಂಕದ ಮಹಿಮೆ ಬಗ್ಗೆ ಒಂದು ಕುತೂಹಲಕಾರಿ ಟ್ವೀಟ್
|
ಬರ್ಖಾಗೂ ಜೈ
ಎನ್ ಡಿಟಿವಿಗಾಗಿ ಕಾರ್ಗಿಲ್ ಯುದ್ಧದ ನೇರ ವರದಿ ನೀಡಿದ ಬರ್ಖಾ ದತ್ ಗೂ ಹಾರೈಕೆಗಳು ಸಂದಿವೆ.
|
ಗೊಂದಲ ಪರಿಹರಿಸಿ
ಇವತ್ತು ಕಾರ್ಗಿಲ್ ದಿವಸ್ ಅಥವಾ ವಿಜಯ್ ದಿವಸ್ ?












Click it and Unblock the Notifications