ಮಣಿಪಾಲ್ ವಿದ್ಯಾರ್ಥಿನಿ ಅಸಹಕಾರ, ಆರೋಪಿಗಳು ಬಚಾವ್?

ಉಡುಪಿ, ಜುಲೈ24: ತನ್ನ ನೆಲದಲ್ಲಿ ಕಳೆದ ತಿಂಗಳು ಮೂವರು ಕಾಮುಕರಿಂದ ಅಮಾನುಷ ರೀತಿಯಲ್ಲಿ ಅತ್ಯಾಚಾರಕ್ಕೀಡಾದ ಕೆಎಂಸಿ ವೈದ್ಯಕೀಯ ವಿದ್ಯಾರ್ಥಿನಿ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿ, ಬಾಧಿತಗಳಿಗೆ ಕೊಂಚ ಮಟ್ಟಿಗೆ ಸಮಾಧಾನ ತರುವ ಸ್ಥಳೀಯ ಪೊಲೀಸರ ಪ್ರಯತ್ನಕ್ಕೆ ಭಾರಿ ತೊಡಕುಂಟಾಗಿದೆ.

ಮೂಲತಃ ಕೇರಳದ ತಿರುವನಂತಪುರ ನಿವಾಸಿಯಾದ ಬಾಧಿತ ಯುವತಿ 'ನೀವೂ ಬೇಡ, ನಿಮ್ಮ ಊರೂ ಬೇಡ' ಎಂದು ಶಿಕ್ಷಣಕ್ಕೂ ತಿಲಾಂಜಲಿಯಿಟ್ಟು ತವರು ತಲುಪಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾಗೆ ನೋಡಿದರೆ ಅನೇಕ ಅಡಚಣೆಗಳ ಮಧ್ಯೆಯೂ ಖಡಕ್ಕಾಗಿ ಕಾರ್ಯನಿರ್ವಹಿಸಿ ಸ್ಥಳೀಯ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ಜೈಲಿಗಟ್ಟಿದ್ದಾರೆ. ಆದರೆ...

ಪ್ರಕರಣ ನಡೆದು ಒಂದು ತಿಂಗಳಾದರೂ/ ಆರೋಪಿಗಳು ತಮ್ಮ ಹಿಡಿತದಲ್ಲೇ ಇದ್ದರೂ ಮಣಿಪಾಲ ಪೊಲೀಸರಿಗೆ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವುದಕ್ಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಆರೋಪಿಗಳ ವಿರುದ್ಧ ಸಂಶಯಕ್ಕೆ ಎಡೆಯಿಲ್ಲದಂತೆ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲು ಪೊಲೀಸರೇನೋ ಸಿದ್ಧವಾಗಿದ್ದಾರೆ, ಆದರೆ...

ಗುರುತು ಪತ್ತೆ ಪರೇಡ್‌ ಇನ್ನೂ ನಡೆದಿಲ್ಲ:

ಗುರುತು ಪತ್ತೆ ಪರೇಡ್‌ ಇನ್ನೂ ನಡೆದಿಲ್ಲ:

ಅತ್ಯಾಚಾರದ ಆರೋಪಿಗಳು ಇವರೇ ಎಂದು ತಿಳಿದಿದ್ದರೂ (ಸ್ವತಃ ಅವರೂ ಒಪ್ಪಿಕೊಂಡಂತಿದೆ), ಅದನ್ನು ಜಾರ್ಚ್‌ಶೀಟ್‌ನಲ್ಲಿ ದಾಖಲಿಸುವುದಕ್ಕೆ ಪಕ್ಕಾ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಕಾನೂನು ಪ್ರಕ್ರಿಯೆಗಳಿಗೆ ಅನುಸಾರವಾಗಿ, ಅತ್ಯಾಚಾರಕ್ಕೊಳಗಾದ ಯುವತಿ ಆರೋಪಿಗಳನ್ನು ನೋಡಿ ತನ್ನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಇವರೇ ಎಂದು ಗುರುತಿಸಬೇಕಾಗುತ್ತದೆ. ಆದರೆ, ಈ ಪರೇಡ್‌ನಲ್ಲಿ ಭಾಗವಹಿಸುವುದಕ್ಕೆ ಅತ್ಯಾಚಾರಕ್ಕೊಳಗಾದ ವೈದ್ಯ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ. ಆದ್ದರಿಂದ ಕಾನೂನಿನ ದೃಷ್ಟಿಯಲ್ಲಿ 'ಇವರೇ ಅತ್ಯಾಚಾರ ನಡೆಸಿದ್ದು' ಎಂದು ಆರೋಪಿಗಳನ್ನು ಜಾರ್ಚ್‌ಶೀಟ್‌ನಲ್ಲಿ ದಾಖಲಿಸುವುದಕ್ಕೆ ಪೊಲೀಸರಿಗೆ ತೊಡಕುಂಟಾಗುತ್ತಿದೆ.

ಅತ್ಯಂತ ಅಪರೂಪದ ಪ್ರಕರಣವಾಗಿ ಬದಲು?

ಅತ್ಯಂತ ಅಪರೂಪದ ಪ್ರಕರಣವಾಗಿ ಬದಲು?

ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರಿಗೆ ಸಹಕರಿಸುವುದಕ್ಕೆ ನಿರಾಕರಿಸಿರುವುದರಿಂದ, ಪೊಲೀಸರು ಆರೋಪಿಗಳನ್ನು ವೈಜ್ಞಾನಿಕವಾಗಿ ಐಡೆಂಟಿಫಿಕೇಶನಿಗೆ (ಗುರುತಿಸುವ ಪ್ರಕ್ರಿಯೆ) ಒಳಪಡಿಸಬೇಕಾಗುತ್ತದೆ. ಇದರೊಂದಿಗೆ ಇದು ಅತ್ಯಂತ ಅಪರೂಪದ ಪ್ರಕರಣವಾಗಿ ಬದಲಾಗುತ್ತಿದೆ.

ವೈಜ್ಞಾನಿಕವಾಗಿ ಐಡೆಂಟಿಫಿಕೇಶನ್

ವೈಜ್ಞಾನಿಕವಾಗಿ ಐಡೆಂಟಿಫಿಕೇಶನ್

ಅಂದರೆ, ಅತ್ಯಾಚಾರ ನಡೆಸಿದಾಗ ಯುವತಿ ಮೈಮೇಲೆ ಉಳಿದಿದ್ದ ಅತ್ಯಾಚಾರಿಗಳ ವೀರ್ಯ, ಕೂದಲು, ಎಂಜಲು, ರಕ್ತ, ಯುವತಿ ಮತ್ತು ಆರೋಪಿಗಳ ಒಳಉಡುಪು, ಬಟ್ಟೆ ಇತ್ಯಾದಿಗಳನ್ನು ಸಂಗ್ರಹಿಸಿ, ಬೆಂಗಳೂರಿನಲ್ಲಿರುವ ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಫೊರೆನ್ಸಿಕ್ ಸೈನ್ಸ್ ಲ್ಯಾಬ್) ಕಳುಹಿಸಲಾಗಿದೆ. ಜತೆಗೆ, ನ್ಯಾಯಾಲಯದ ಒಪ್ಪಿಗೆ ಮೇರೆಗೆ ಆರೋಪಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅದನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ.

ಎಸ್ಪಿ ಬೋರಲಿಂಗಯ್ಯ ಉಲ್ಲೇಖಿಸಿ 'ಕನ್ನಡ ಪ್ರಭ' ವರದಿ

ಎಸ್ಪಿ ಬೋರಲಿಂಗಯ್ಯ ಉಲ್ಲೇಖಿಸಿ 'ಕನ್ನಡ ಪ್ರಭ' ವರದಿ

ಈ ಎರಡೂ ಪರೀಕ್ಷೆಗಳ ವರದಿಗಳು ಒಂದೇ ಆಗಿದ್ದಲ್ಲಿ, ಪೊಲೀಸರು ಬಂಧಿಸಿದ ಆರೋಪಿಗಳೇ ಅತ್ಯಾಚಾರ ನಡೆಸಿದ್ದು ಎಂದು ಗುರುತಿಸಿದಂತಾಗುತ್ತದೆ. ಮಾತ್ರವಲ್ಲ, ಮುಂದೆ ನ್ಯಾಯಾಲಯದಲ್ಲಿ ಆತ್ಯಾಚಾರದ ಆರೋಪ ಸಾಬೀತು ಮಾಡುವಲ್ಲಿಯೂ ಈ ವರದಿಗಳ ಮಹತ್ತರ ಸಾಕ್ಷಿಗಳಾಗುತ್ತವೆ. ಇದಾದ ನಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ ಅವರನ್ನು ಉಲ್ಲೇಖಿಸಿ 'ಕನ್ನಡ ಪ್ರಭ' ವರದಿ ಮಾಡಿದೆ.

ಜುಲೈ ಕೊನೆಗೆ ವರದಿ?:

ಜುಲೈ ಕೊನೆಗೆ ವರದಿ?:

ಆರೋಪಿಗಳ ರಕ್ತದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಈಗಾಗಲೇ 2 ವಾರ ಕಳೆದಿವೆ. ಈ ತಿಂಗಳ ಕೊನೆಗೆ ವರದಿ ಬರುವ ನಿರೀಕ್ಷೆ ಇದೆ. ನಂತರ ವಾರದೊಳಗೆ ಚಾರ್ಜ್‌ಶೀಟ್ ಸಲ್ಲಿಸುತ್ತೇವೆ ಎಂಬ ವಿಶ್ವಾಸವನ್ನು ಎಸ್ಪಿ ವ್ಯಕ್ತಪಡಿಸಿದ್ದಾರೆ. ಜು 29ಕ್ಕೆ ಆರೋಪಿಗಳ ನ್ಯಾಯಾಂಗ ಬಂಧನ ಮುಗಿಯಲಿದೆ. ಅಂದು ಆರೋಪಿಗಳನ್ನು ಪೊಲೀಸರು ಮತ್ತೊಮ್ಮೆ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+