ರಾಜಕುಮಾರನಿಗೆ ಜನ್ಮವಿತ್ತ ಕೇಟ್ ವಿಲಿಯಂ

ಲಂಡನ್, ಜು. 23 : ಇಡೀ ಜಗತ್ತು ಅತ್ಯಂತ ಕಾತರದಿಂದ ನಿರೀಕ್ಷಿಸುತ್ತಿದ್ದ ಆ ಘಳಿಗೆ ಬಂದುಬಿಟ್ಟಿದೆ. ಕೇಂಬ್ರಿಜ್ ಡಚೆಸ್ ಕೇಟ್ ಮಿಡ್ಲ್‌ಟನ್ ಜು.22ರಂದು ಸಂಜೆ 4.24 ಗಂಟೆ ಸುಮಾರಿಗೆ ರಾಜಕುವರನಿಗೆ ಜನ್ಮವಿತ್ತಿದ್ದಾಳೆ. ಪ್ರಿನ್ಸ್ ಚಾರ್ಲ್ಸ್, ಪ್ರಿನ್ಸ್ ವಿಲಿಯಂ ನಂತರ ಬ್ರಿಟಿಷ್ ಅಧಿಪತ್ಯಕ್ಕೆ ಮೂರನೇ ರಾಜಕುಮಾರ ದಕ್ಕಿದಂತಾಗಿದೆ.

ಲಂಡನ್ ನಲ್ಲಿರುವ ಸೇಂಟ್ ಮೇರೀಸ್ ಆಸ್ಪತ್ರೆಯಲ್ಲಿ ತನ್ನ ಅಪ್ಪ ಜನಿಸಿದ ಕೋಣೆಯಲ್ಲಿಯೇ ಮಗುವಿನ ಜನ್ಮವಾಗಿದೆ. ಮಗು 8 ಪೌಂಡ್ 6 ಔನ್ಸ್ ತೂಕವಿದ್ದು (3.6 ಕೆಜಿ) ತಾಯಿ ಮತ್ತು ಮಗು ಆರಾಮವಾಗಿದ್ದಾರೆ, ಪ್ರಿನ್ಸ್ ವಿಲಿಯಂ ಮತ್ತು ಕೇಟ್‌ಗೆ ಮೊದಲನೇ ಮಗುವಾಗಿದೆ ಎಂದು ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ತಿಳಿಸಿದೆ. ರಾಣಿ ಎಲಿಜಬೆತ್‌ಗೆ ಇದು ಮೊದಲನೇ ಮರಿಮಗ.

It's baby boy for Prince William and Kate Middleton

ಅಜ್ಜನಾಗಿದ್ದಕ್ಕೆ ಪ್ರಿನ್ಸ್ ಚಾರ್ಲ್ಸ್ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. "ನನ್ನ ಮೊದಲನೇ ಮೊಮ್ಮಗು ಬಂದಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ವಿಲಿಯಂ ಮತ್ತು ಕ್ಯಾಥರೀನ್‌ಗೆ ಗಂಡು ಮಗು ಜನಿಸಿರುವುದು ವಿಶೇಷವಾದ ಘಳಿಗೆ. ಅಜ್ಜನಾಗುವುದು ಎಂತಹ ವಿಶೇಷವಾದ ಅನುಭೂತಿ ಎಂದು ನನಗೆ ಅನೇಕ ಜನರು ಹೇಳಿದ್ದಾರೆ. ನನ್ನ ಮೊಮ್ಮಗುವನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ" ಎಂದು ಅವರು ಹರ್ಷ ಹಂಚಿಕೊಂಡಿದ್ದಾರೆ. ರಾಜಕುಮಾರಿ ಡಯಾನಾ ಇದ್ದಿದ್ದರೆ ಇನ್ನೆಷ್ಟು ಸಂತಸಪಟ್ಟಿರುತ್ತಿದ್ದಳೋ! ಅಲಾಸ್!

ಮಗು ಹುಟ್ಟಿದ ವಿಷಯವನ್ನು ಸಂಜೆ 8.30ಕ್ಕೆ ಯುಕೆಯಲ್ಲಿ (ಭಾರತೀಯ ಕಾಲಮಾನ ಜು.23ರ ಬೆಳಗಿನ ಜಾವ 1.30ಕ್ಕೆ) ಪ್ರಕಟಿಸಲಾಯಿತು. "ಇಡೀ ದೇಶವೇ ಯುವ ರಾಜಕುಮಾರನ ಆಗಮನವನ್ನು ಆಚರಿಸಲಿದೆ. ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಉತ್ತಮ ತಂದೆ-ತಾಯಿಯಾಗುವುದರಲ್ಲಿ ಸಂಶಯವಿಲ್ಲ" ಎಂದು ಪ್ರಧಾನಿ ಡೆವಿಡ್ ಕ್ಯಾಮರೂನ್ ಹೇಳಿಕೆ ನೀಡಿದ್ದಾರೆ. ಮಗುವಿನ ಜನನವಾಗುತ್ತಿದ್ದಂತೆ "It's baby boy" ಎಂದು ಬಕ್ಕಿಂಗ್ ಹ್ಯಾಮ ಪ್ಯಾಲೇಸ್ ಎದುರುಗಡೆ ಬೋರ್ಡ್ ಮೇಲೆ ಪ್ರಕಟಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+