ಲಗ್ಗೇಜ್ ಕಳವು: ಕೊನೆಗೂ ರೈಲ್ವೆಯಿಂದ ಪರಿಹಾರ

ಹಾಗಂತ ತಮ್ಮ ಲಗ್ಗೇಜು ಕಳೆದುಕೊಂಡಿದ್ದ ರೈಲ್ವೆ ಪ್ರಯಾಣಿಕರೊಬ್ಬರು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ 'ಬಾಧಿತ ಪ್ರಯಾಣಿಕರಿಗೆ ಮೊದಲು 2.01 ಲಕ್ಷ ರೂ ಪರಿಹಾರ ನೀಡಿ' ಎಂದು ಭಾರತೀಯ ರೈಲ್ವೆಗೆ ಕೋರ್ಟ್ ಆದೇಶ ನೀಡಿದೆ.
ಆದರೆ ಉತ್ತರಪ್ರದೇಶದ ಡಾ. ಶೋಭಾ ಅಗರವಾಲ್ ಅವರು ಹೀಗೆ ತಮ್ಮ ಲಗ್ಗೇಜು ಕಳೆದುಕೊಂಡಿದ್ದು 1996ರಲ್ಲಿ. ಅಲ್ಲಿಂದಾಚೆಗೆ ಅವರು ಎಲ್ಲ ನ್ಯಾಯಾಲಯದ ಕಟೆಕಟೆಗಳನ್ನು ತುಳಿದು ಕೊನೆಗೆ ಅತ್ಯುಚ್ಛ ಗ್ರಾಹಕ ನ್ಯಾಯಾಲಯಕ್ಕೆ ಬರುವ ವೇಳೆಗೆ ಆ ನ್ಯಾಯಾಲಯ ಮೊನ್ನೆ ಪ್ರಯಾಣಿಕರ ಪರವಾಗಿ ತೀರ್ಪು ನೀಡಿದೆ.
ಮಹಿಳಾ ವೈದ್ಯೆಯೊಬ್ಬರು 1996ರಲ್ಲಿ ಖುಷಿನಗರ್ ಎಕ್ಸ್ ಪ್ರೆಸ್ ನಲ್ಲಿ ಸಂಚರಿಸುತ್ತಿದ್ದಾಗ ಅವರ ಲಗೇಜನ್ನು ಯಾರೋ ಕದ್ದಿದ್ದರು. ಸೂಕ್ತ ಭದ್ರತೆ ಇಲ್ಲದ ಕಾರಣ ಮತ್ತು ಸಂಬಂಧಪಟ್ಟ ರೈಲ್ವೆ ಉದ್ಯೋಗಿಗಳ ನಿರ್ಲಕ್ಷ್ಯದಿಂದಾಗಿ ಲಗ್ಗೇಜು ಕಳುವಾಗಿದೆ ಎಂದು ಸದರಿ ವೈದ್ಯರು ಕೋರ್ಟಿಗೆ ಮೊರೆಹೋಗಿದ್ದರು.
ಪ್ರಯಾಣಿಕರ ವಾದವನ್ನು ಎತ್ತಿಹಿಡಿದ National Consumer Disputes Redressal Commission (NCDRC) ಭಾರತೀಯ ರೈಲ್ವೆಯ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಪರಿಹಾರ ವಿತರಿಸುವಂತೆ ಆದೇಶಿಸಿದೆ.
ಕಾಯ್ದಿರಿಸಿ ಬೋಗಿಯೊಳಕ್ಕೆ ಅಪರಿಚಿತರು ನುಸುಳದಂತೆ ಕಾಯ್ದುಕೊಳ್ಳುವುದು ಟಿಕೆಟ್ ಕಲೆಕ್ಟರ್ ಕೆಲಸ. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಹಾಗಾಗಿ ಇಲಾಖೆಯೇ ಅದಕ್ಕೆ ಹೊಣೆಯಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ತೀರ್ಪಿನ ಪೂರ್ಣ ಪಾಠಕ್ಕೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications