ಟೆಕ್ಕಿಗಳಿಂದ ಸ್ವಾಗತಾರ್ಹ ಮಹತ್ತರ ಶಿಕ್ಷಣ ಯೋಜನೆ
ಬೆಂಗಳೂರು, ಜುಲೈ19: ಹೆಚ್ಚಾಗಿ ಐಟಿ ಕಂಪನಿಗಳೇ ಸಕ್ರಿಯವಾಗಿ ಭಾಗಿಯಾಗಿರುವ ಮಹತ್ತರ ಶಿಕ್ಷಣ ಯೋಜನೆಯೊಂದು ಸಾಕಾರಗೊಳ್ಳಲಿದೆ. ನಿಜಕ್ಕೂ ಇದೊಂದು ಕ್ರಾಂತಿಕಾರಿ ಬದಲಾವಣೆ ಎನ್ನಬಹುದು.
ಉನ್ನತ ಶಿಕ್ಷಣ ಗಗನಕುಸುಮವಾಗುತ್ತಿರುವ ಇಂದಿನ ದಿನಗಳಲ್ಲಿ ಹೆಚ್ಚು ಹೊರೆಯಾಗದಂತೆ ಗುಣಮಟ್ಟದ ಶಿಕ್ಷಣ ನೀಡುವುದು ಈ ಹೊಸ ಯೋಜನೆಯ ಉದ್ದೇಶ. ಗಮನಿಸಿ, ಇದು ಉಚಿತ. ಯಾವುದೇ ಶಿಕ್ಷಣ ಶುಲ್ಕ ಇರುವುದಿಲ್ಲ. ಆದರೆ ನಿಮ್ಮ ಬಳಿ ಅಂತರ್ಜಾಲ ಸಂಪರ್ಕವಿರುವ ಉತ್ತಮ ಕಂಪ್ಯೂಟರ್ ಸೆಟ್ ಇರಬೇಕು ಅಷ್ಟೇ.
ಇದು ಅಂತರ್ಜಾಲದ ಮೂಲಕ ಒದಗಿಸುವ ಶಿಕ್ಷಣ. Science ಮತ್ತು Engineering ವ್ಯಾಸಂಗ ಮಾಡುತ್ತಿರುವ ಯಾವುದೇ ಕಾಲೇಜಿನ ಯಾವುದೇ ವಿದ್ಯಾರ್ಥಿ ಈ ಕೋರ್ಸ್ ಪಡೆಯಬಹುದು. ಖಂಡಿತ ಇದು ಅವರ ಹಾಲಿ ವ್ಯಾಸಂಗಕ್ಕೂ ಪ್ರೇರಣೆ/ಪೂರಕವಾಗಿರಲಿದೆ ಎನ್ನುತ್ತಾರೆ IIT-Madrasನ electrical engineering ಪ್ರೊಫೆಸರ್ ಆಂಡ್ರ್ಯೂ ತಂಗರಾಜ್ ಅವರು.
ಸೈಬರ್ ಕೇಂದ್ರಗಳಿಗೆ ಹೋಗಿ ಪೋಲಿ ಬೀಳುವ ಚಟ ಹತ್ತಿಸಿಕೊಳ್ಳುವ ಬದಲು ಇಂದಿನ ವಿದ್ಯಾರ್ಥಿಗಳು ಧನಾತ್ಮಕವಾಗಿ ಜೀವನ ರೂಪಿಸಿಕೊಳ್ಳುವಂತಹ ಈ ಯೋಜನೆಯತ್ತ ಗಮನಹರಿಸಲಿ ಎನ್ನುತ್ತಾರೆ ಈಗಷ್ಟೇ ಕಾಲೇಜಿನಿಂದ ಹೊರಬಂದಿರುವ ಶಿವಮೊಗ್ಗದ ಗುರುರಾಜ್.

ವಾರ್ಷಿಕ 1.5 ಲಕ್ಷ ಮಂದಿಗೆ ಸದುಪಯೋಗ
ಏಳು ಮುಂಚೂಣಿ IITಗಳು, Infosys, TCS, Cognizant ಮತ್ತು ಉದ್ಯಮ ಪ್ರತಿನಿಧಿ ಸಂಸ್ಥೆಯಾದ Nasscom ಈ ಮಹತ್ಕಾರ್ಯದಲ್ಲಿ ಕೈಜೋಡಿಸಿವೆ. ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ಮಂದಿ ಇದರ ಸದುಪಯೋಗ ಮಾಡಿಕೊಂಡು ಹೆಚ್ಚು ಆತ್ಮವಿಶ್ವಾದಿಂದ ಉದ್ಯೋಗದ ಬೇಟೆಯಲ್ಲಿ ತೊಡಗಬಹುದು.

ಇದೇ ಅಕ್ಟೋಬರಿನಿಂದ ಕೋರ್ಸ್ ಆರಂಭ
Massive Open Online Courses (MOOCs) ಮೂಲಕ ಈ ಶಿಕ್ಷಣ ಯೋಜನೆ ಸಾಕಾರಗೊಳ್ಳಲಿದೆ. Computer Science ವಿಷಯದಲ್ಲಿ ಇದೇ ಅಕ್ಟೋಬರಿನಿಂದ ಮೊದಲ ಕೋರ್ಸ್ ಆರಂಭವಾಗಲಿದೆ.

ಉನ್ನತ ವಿವಿಗಳಿಂದ ಗುಣಮಟ್ಟದ ಶಿಕ್ಷಣ
ಭಾರತದಂತಹ ರಾಷ್ಟ್ರಗಳಲ್ಲಿ ಯುವ ವಿದ್ಯಾರ್ಥಿಗಳಿಗೆ ಇಂತಹ ಶಿಕ್ಷಣ ಮತ್ತು ತರಬೇತಿಯ ಅಗತ್ಯ ಬಹಳವಾಗಿರುತ್ತದೆ. ಉನ್ನತ ವಿಶ್ವವಿದ್ಯಾಲಯಗಳಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪ್ರಾಪ್ತಿಯಾಗಲಿದೆ. ಅದೂ ಉಚಿತವಾಗಿ ಎಂದು Cognizant Technology Solutions ಉಪಾಧ್ಯಕ್ಷ ಎನ್ ಲಕ್ಷ್ಮಿನಾರಾಯಣನ್ ಹೇಳುತ್ತಾರೆ.

Nasscom ಜತೆಗೂಡಿ
Delhi, Madras, Kharagpur, Kanpur, Roorkee, Bombay ಮತ್ತು Guwahati IITಗಳ ಸುಮಾರು 15 ಪ್ರೊಫೆಸರುಗಳು ಸೇರಿಕೊಂಡು ಕೋರ್ಸ್ ರಚನೆ ಮಾಡುತ್ತಿದ್ದಾರೆ. ಉದ್ಯಮದ ಬೇಡಿಕೆಗಳನ್ನು ಮನಗಾಣಲು Nasscom ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎನ್ನುತ್ತಾರೆ IIT-Madras ನಿರ್ದೇಶಕ ಪ್ರೊ. ಭಾಸ್ಕರ್ ರಾಮಮೂರ್ತಿ.

ಉದ್ಯಮದ ಇನ್ನಿತರೆ ಕ್ಷೇತ್ರಗಳು- ಇತರೆ ಶಿಕ್ಷಣ ಸಂಸ್ಥೆಗಳೂ ಭಾಗಿ
ಇದಲ್ಲದೆ Infosys, TCS ಮತ್ತು Cognizant ಕಂಪನಿಗಳೂ ಕೈಜೋಡಿಸಲಿವೆ. ಅದಲ್ಲದೆ ಉದ್ಯಮದ ಇನ್ನಿತರೆ ಕ್ಷೇತ್ರಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳ ಇನ್ನೂ 500 ಮಂದಿ ಯೋಜನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುತ್ತಾರೆ IIT-Kharagpurನ ಶಿಕ್ಷಣ ತಂತ್ರಜ್ಞಾನದ ಪ್ರೊ. ಎಕೆ ರಾಯ್.

ತಾರತಮ್ಯವಿಲ್ಲದೆ ಗ್ರಾಮೀಣ ಪ್ರತಿಭೆಗಳಿಗೂ ಅವಕಾಶ
ಉದ್ಯಮ ರಂಗದ ನಿರ್ದಿಷ್ಟ ಬೇಕುಬೇಡಗಳನ್ನು ಪೂರೈಸಲು ಕ್ರೋಡೀಕೃತವಾಗುತ್ತಿರುವ ಅತಿ ದೊಡ್ಡ ಯೋಜನೆ ಇದಾಗಿದೆ. ಮೊದಲ ಬಾರಿಗೆ ಯಾವುದೇ ತಾರತಮ್ಯವಿಲ್ಲದೆ ಗ್ರಾಮೀಣ ಪ್ರತಿಭೆಗಳಿಗೂ ಅವಕಾಶವಿರುವಂತಹ ಯೋಜನೆ ರೂಪಿಸಲಾಗಿದೆ. ಎಲ್ಲರಿಗೂ ಸಮಾನವಾಗಿ ಒಂದೇ ತೆರನಾದ content, channel, tests, experts ಮತ್ತು certification ಪ್ರಾಪ್ತಿಯಾಗಲಿದೆ ಎನ್ನುತ್ತಾರೆ Cognizant ಕಂಪನಿಯ ನಾರಾಯಣನ್.

ಕಡಿಮೆ ಶುಲ್ಕ ನೀಡಿ ಪರೀಕ್ಷೆ ಬರೆದು certificate ಪಡೆಯಬಹುದು
ಕೋರ್ಸಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಕೊನೆಗೆ ಕಡಿಮೆ ಶುಲ್ಕ ನೀಡಿ ಒಂದು ಪರೀಕ್ಷೆ ಅಂತ ಬರೆದು, certificate ಸಹ ಪಡೆಯಬಹುದು. computer science courseಗೆ IITಗಳು ಪ್ರಮಾಣಪತ್ರ ನೀಡಿದರೆ ಇತರೆ ಕೋರ್ಸುಗಳಿಗೆ ಉದ್ಯಮ ವಲಯವೇ ನೀಡುತ್ತದೆ.

ಸರ್ಚ್ ಇಂಜಿನ್ ಗೂಗಲ್ MOOCಗೆ ಸಾಥ್
ಇದು ಸಂಪೂರ್ಣವಾಗಿ ಅಂತರ್ಜಾಲ ಆಧಾರಿತ ಶಿಕ್ಷಣವಾಗಿರುವುದರಿಂದ ಸರ್ಚ್ ಇಂಜಿನ್ ದೈತ್ಯ ಗೂಗಲ್ MOOC ಶಿಕ್ಷಣಕ್ಕೆ ನೆರವಾಗುತ್ತಿರುವುದು ಗಮನಾರ್ಹ.

NPTEL ಸುಧಾರಿತ ರೂಪ MOOC
ಇದುವರೆಗೂ IISC-Bangalore ಸಹಯೋಗದಲ್ಲಿ ಏಳೂ IITಗಳು National Programme on Technology Enhanced Learning (NPTEL) ಎಂಬ ಶಿಕ್ಷಣವನ್ನು Youtube ಕೊಡಮಾಡುತ್ತಿದೆ. ಅದರ ಸುಧಾರಿತ ರೂಪವಾಗಿ ವೆಬ್ ಆಧಾರಿತ MOOC ಶಿಕ್ಷಣ ಸಾಕಾರಗೊಳ್ಳಲಿದೆ.
All the Best to both Industry and Student Community from kannada.oneindia.in












Click it and Unblock the Notifications