ಚಿತ್ರಗಳು: ಮಹಾಕಾಳನಿಗೆ ಅಣ್ಣಾ ಅಭಿಷೇಕ

ಬೆಂಗಳೂರು, ಜು.18: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈಗ ಜನತಂತ್ರ ಯಾತ್ರೆ ನಡೆಯುತ್ತಿದೆ. ಸಾಮಾಜಿಕ ಕಾರ್ಯಕರ್ತರು ಒಟ್ಟಾಗಿ ಸೇರಿ ಜನ ಜಾಗೃತಿ ಜೊತೆಗೆ ದೇಗುಲಗಳಿಗೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬುಧವಾರ ಪೂಜೆ ಸಲ್ಲಿಸಿದವರಲ್ಲಿ ಅಣ್ಣಾ ಹಜಾರೆ ಅವರು ಪ್ರಮುಖರಾಗಿದ್ದರು.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಭೂಸೇನೆ ಮಾಜಿ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಸೇರಿದಂತೆ ಅಣ್ಣಾ ಹಜಾರೆ ಜನತಂತ್ರ ಯಾತ್ರೆ ಸದಸ್ಯರು ಮಹಾಕಾಳ ದೇಗುಲಕ್ಕೆ ಭೇಟಿ ನೀಡಿ ಮಹಾಕಾಳ(ಶಿವ)ನಿಗೆ ಅಭಿಷೇಕ ಸಲ್ಲಿಸಿದರು.

ಕೊಚ್ಚಿಯಲ್ಲಿ ಮೀನುಗಾರರಿಗೆ ಸಿಐಎಸ್ಎಫ್ ಯೋಧರ ಕಾಟ ಅಧಿಕವಾಗಿದೆ ಎಂದು ಮೀನುಗಾರರು ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ ತ್ರಿಸ್ಸೂರ್ ನ ವಡಕ್ಕುಂನಾಥನ್ ದೇಗುಲದಲ್ಲಿ ಆನಾಯೂಟ್ಟು(ಆನೆಗಳಿಗೆ ಊಟ ನೀಡಿಕೆ) ಹಬ್ಬದ ಅಂಗವಾಗಿ ಸಾಲು ಸಾಲು ಆನೆಗಳು. ಬುಧವಾರ ಮಲೆಯಾಳಂ ಎಣಿಕೆ ಪ್ರಕಾರ ಕರ್ಕಿಡಕಮ್ ತಿಂಗಳ ಮೊದಲ ದಿನ.

ಉಳಿದಂತೆ, ಬಿಹಾರದ ಬಿಸಿಯೂಟ ದುರಂತದ ಚಿತ್ರ, ಹಿಂದೂ ಕುಷ್ ಪರ್ವತ, ನಾಗಪುರ, ರಂಜಾನ್ ಹಾಗೂ ಕೊಯಮತ್ತೂರಿನ ಸಾಮೂಹಿಕ ಮದುವೆ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿವೆ

ಉಜ್ಜಯಿನಿ ಮಹಾಕಾಳನ ಸನ್ನಿಧಿ

ಉಜ್ಜಯಿನಿ ಮಹಾಕಾಳನ ಸನ್ನಿಧಿ

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಭೂಸೇನೆ ಮಾಜಿ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಅವರಿಂದ ಮಹಾಕಾಳನಿಗೆ ಅಭಿಷೇಕ

ಬಿಹಾರದ ದುರಂತ

ಬಿಹಾರದ ದುರಂತ

ಬಿಹಾರದ ಬಿಸಿಯೂಟ ದುರಂತದ ಸಂತ್ರಸ್ತ ಶಿಶು ಜೊತೆ ಪೋಷಕ

ಹೇಗಿದೆ ಸವಾರಿ

ಹೇಗಿದೆ ಸವಾರಿ

ನಾಗಪುರ: ಆರೆಸ್ಸೆಸ್ ಕೇಂದ್ರ ಕಚೇರಿಗೆ ದ್ವಿಚಕ್ರವಾಹನ ಏರಿ ಬಂದ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ

ಆನೆಗಳಿಗೆ ಊಟ ನೀಡಿಕೆ

ಆನೆಗಳಿಗೆ ಊಟ ನೀಡಿಕೆ

ತ್ರಿಸ್ಸೂರ್ ನ ವಡಕ್ಕುಂನಾಥನ್ ದೇಗುಲದಲ್ಲಿ ಆನಾಯೂಟ್ಟು(ಆನೆಗಳಿಗೆ ಊಟ ನೀಡಿಕೆ) ಹಬ್ಬದ ಅಂಗವಾಗಿ ಸಾಲು ಸಾಲು ಆನೆಗಳು.

ಸಾಮೂಹಿಕ ಮದುವೆ

ಸಾಮೂಹಿಕ ಮದುವೆ

ಕೊಯಮತ್ತೂರು: ಡಿಎಂಕೆ ಮುಖಂಡ ಎಂ.ಕೆ ಸ್ಟಾಲಿನ್ ಅವರು ಸಾಮೂಹಿಕ ವಿವಾಹಕ್ಕೆ ಒಳಪಟ್ಟ 117 ಜೋಡಿಗಳಿಗೆ ಹರಿಸಿದರು. ಡಿಎಂಕೆ ಮುಖಂಡ ಎಂ ಕರುಣಾನಿಧಿ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ಸಾಮೂಹಿಕ ವಿವಾಹ ಉತ್ಸವ ಆಯೋಜಿಸಲಾಗಿತ್ತು.

ಪರ್ವತ ತಪ್ಪಲಲ್ಲಿ

ಪರ್ವತ ತಪ್ಪಲಲ್ಲಿ

ಹಿಂದೂ ಕುಷ್: ಕರಾಚಿ ಮೂಲದ ಯೋಗ ಶಿಕ್ಷಕಿ ಐಷಾ ಚಾಪ್ರಾ ಅವರು ಪಾಕಿಸ್ತಾನಿಗಳಿಗೆ ಯೋಗ ಹೇಳಿಕೊಡುತ್ತಿದ್ದಾರೆ.

ಕೊಚ್ಚಿಯಲ್ಲಿ ಪ್ರತಿಭಟನೆ

ಕೊಚ್ಚಿಯಲ್ಲಿ ಪ್ರತಿಭಟನೆ

ಕೊಚ್ಚಿಯಲ್ಲಿ ಮೀನುಗಾರರಿಗೆ ಸಿಐಎಸ್ ಎಫ್ ಯೋಧರ ಕಾಟ ಅಧಿಕವಾಗಿದೆ ಎಂದು ಮೀನುಗಾರರು ಪ್ರತಿಭಟನೆ ನಡೆಸಿದರು.

ಹಿಮ ಚಿರತೆ

ಹಿಮ ಚಿರತೆ

ವಿಂಚೆಸ್ಟರ್: 12 ವಾರಗಳನ್ನು ಕಂಡಿರುವ ಚಿರತೆ ಮರಿಗಳು(Panthera uncia) ಅನಿಮೇಶ್, ಅರ್ಜುನ್ ಎಂದು ಎರಡಕ್ಕೆ ಹೆಸರಿಡಲಾಗಿದೆ. ಹಿಮ ಚಿರತೆಗಳು ಅಲ್ ಪೈನ್ ಪ್ರದೇಶಗಳಲ್ಲಿ 3,350 ರಿಂದ 6700 ಮೀ(10,990 ರಿಂದ 22,000 ಅಡಿ) ಎತ್ತರ ಪ್ರದೇಶಗಳಲ್ಲಿ ವಾಸಿಸುತ್ತವೆ. ಮಧ್ಯ ಏಷ್ಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ

ಪಶ್ಚಿಮ ಬಂಗಾಳ ಎಲೆಕ್ಷನ್

ಪಶ್ಚಿಮ ಬಂಗಾಳ ಎಲೆಕ್ಷನ್

ನಾರ್ಥ್ 24 ಪರಾಗಣ: ಪಶ್ಚಿಮ ಬಂಗಾಲದ ನಾರ್ಥ್ 24 ಪರಾಗಣ ಜಿಲ್ಲೆಯಲ್ಲಿ ಸೆಂಟ್ರಲ್ ಫೋರ್ಸ್ ಯೋಧರು ಪಂಚಾಯಿತಿ ಚುನಾವಣೆಗೂ ಮುನ್ನ ಭದ್ರತೆ ಪರಿಶೀಲನೆಗಾಗಿ ಮೆರವಣಿಗೆ

ಮಳೆಯಲ್ಲಿ ಜೋಡಿ

ಮಳೆಯಲ್ಲಿ ಜೋಡಿ

ಹೈದರಾಬಾದಿನಲ್ಲಿ ಪತಿ, ಪತ್ನಿ ಜೋಡಿ ಮಳೆಯಲ್ಲಿ ಹೊರಟ್ಟಿದ್ದು ಹೀಗೆ

ರಂಜಾನ್ ಭದ್ರತೆ

ರಂಜಾನ್ ಭದ್ರತೆ

ಹೈದರಾಬಾದ್: ಸೆಂಟ್ರಲ್ ಫೋರ್ಸ್ ಯೋಧರು ಮುಷಿರಾಬಾದ್ ನಲ್ಲಿ ರಂಜಾನ್ ಸಂದರ್ಭದಲ್ಲಿ ಭದ್ರತೆಗಾಗಿ ಮೆರವಣಿಗೆ ನಡೆಸಿದರು.

ಬಿಸಿಯೂಟದ ಬಿಸಿ

ಬಿಸಿಯೂಟದ ಬಿಸಿ

ಚಾಪ್ರಾ: ಬಿಸಿಯೂಟದಿಂದ ಮಕ್ಕಳ ಸಾವು ನೋವು ಕಂಡು ಹಲವಾರು ಸಂಘಟನೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಪೊಲೀಸರು ಪರಿಸ್ಥಿತಿ ಮಿತಿ ಮೀರಿದಾಗ ಲಾಠಿ ಬೀಸಿದ್ದಾರೆ.

 ಹೊಸ ಪುಸ್ತಕ ಬಿಡುಗಡೆ

ಹೊಸ ಪುಸ್ತಕ ಬಿಡುಗಡೆ

ನವದೆಹಲಿ: ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯಂ ಸ್ವಾಮಿ ಅವರು ಬಾಲೇಶ್ವರ್ ಅಗರವಾಲ್ ಅವರ 93ನೇ ಜನ್ಮದಿನೋತ್ಸವದ ಅಂಗವಾಗಿ ಹೊಸ ಪುಸ್ತಕ ಬಿಡುಗಡೆ ಮಾಡಿದರು. PTI Photo by Kamal Kishore

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+