ಮಂಗಳೂರು : ಟಿವಿವೊಳಗೆ ಚಿನ್ನದ ಬಿಸ್ಕತ್ ತಂದು ಸಿಕ್ಕಿಬಿದ್ದ

ಕಾಸರಗೋಡು ಮೂಲದ ಮಹಮದ್ ಅಸ್ಲಾಂ (39) ಬಂಧಿತ ವ್ಯಕ್ತಿ. ಮಂಗಳವಾರ ಬೆಳಗ್ಗಿನ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಮಹಮದ್ ಮಂಗಳೂರಿಗೆ ಆಗಮಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳಿಗೆ ಈತ ಸಿಕ್ಕಿಬಿದ್ದಿದ್ದಾನೆ.
ಮಹಮದ್ ನಿಂದ ಐದು ಚಿನ್ನದ ಬಿಸ್ಕತ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, 32 ಇಂಚಿನ ಎಲ್ ಇಡಿ ಟಿವಿವೊಳಗೆ ಅವುಗಳನ್ನು ಇಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿನ್ನದ ಬಿಸ್ಕತ್ ಗಳ ಮೌಲ್ಯ 14 ಲಕ್ಷ ವಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಕಳ್ಳಸಾಗಣೆಯಲ್ಲ : ಬಂಧಿತ ಅಸ್ಲಾಂ ಚಿನ್ನದ ಬಿಸ್ಕತ್ ಗಳು ನನಗೆ ಸೇರಿದವು. ನನ್ನ ವೈಯಕ್ತಿಕ ಉಪಯೋಗಕ್ಕಾಗಿ ಅವುಗಳನ್ನು ತೆಗೆದುಕೊಂಡು ಬಂದಿದ್ದೇನೆ. ಇದು ಕಳ್ಳ ಸಾಗಣೆಯಲ್ಲ ಎಂದು ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾನೆ.
ಅಸ್ಲಾಂ ಕಾಸರಗೋಡಿನವರಾಗಿದ್ದು, ಮೊದಲ ಬಾರಿಗೆ ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಚಿನ್ನದ ಬಿಸ್ಕತ್ ಗಳನ್ನು ತೆಗೆದುಕೊಂಡು ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಅಂಗಡಿ ಹೊಂದಿರುವ ಅಸ್ಲಾಂ ವಿದೇಶದಿಂದ ಆಮದು ಮಾಡಿಕೊಂಡು ಚಾಕೋಲೇಟ್ ಗಳನ್ನು ಮಾರಾಟ ಮಾಡುತ್ತಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಅಸ್ಲಾಂನನ್ನು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications