ಯೂನಿಕೋಡ್ ಅನುಷ್ಠಾನ, ಕನ್ನಡಕ್ಕೆ 26 ಕೋಟಿ ಖೋತಾ
ಬೆಂಗಳೂರು, ಜು.13: ಮುಖ್ಯಮಂತ್ರಿಯಾದ ಮೇಲೆ ಚೊಚ್ಚಲ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸುಮಾರು 263 ಕೋಟಿ ರು ಅನುದಾನ ಒದಗಿಸಿದ್ದಾರೆ. ಆದರೆ, ಜಗದೀಶ್ ಶೆಟ್ಟರ್ ಸರ್ಕಾರ ನೀಡಿದ್ದಕ್ಕಿಂತ ಇದು 26 ಕೋಟಿ ಕಮ್ಮಿ ಮೊತ್ತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಾಖಲೆಗಳು ಹೇಳುತ್ತಿವೆ.
ಸಿದ್ದರಾಮಯ್ಯ ಅವರ ಕನ್ನಡ ಪರ ಕಾಳಜಿಯನ್ನು ಪ್ರಶ್ನಿಸುವಂತಿಲ್ಲ 1983ರಲ್ಲಿ ಸ್ಥಾಪನೆಯಾಗಿದ್ದ ಕನ್ನಡ ಕಾವಲು ಸಮಿತಿ ಚೇರ್ಮನ್ ಆಗಿದ್ದ ಸ್ವತಂತ್ರ ಶಾಸಕ ಸಿದ್ದರಾಮಯ್ಯ ಅವರಿಗೆ ಮೊದಲ ಬಾರಿಗೆ ಪ್ರಮುಖ ಹುದ್ದೆ, ಸ್ಥಾನಮಾನ ನೀಡಿದ್ದು 'ಕನ್ನಡ' ಸಮಿತಿ ಎಂಬ ಅರಿವು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ.
ಆದರೆ, ಬಹುತೇಕ ಜಗದೀಶ್ ಶೆಟ್ಟರ್ ಅವರ ಕನ್ನಡ ಪರ ಯೋಜನೆ, ಅನುದಾನಗಳನ್ನು ಸಿದ್ದರಾಮಯ್ಯ ಅವರು ಮುಂದುವರೆಸಿಕೊಂಡು ಬಂದಿದ್ದಾರೆ.
2013-14ರ ಸಿದ್ದರಾಮಯ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ನೋಡಿ...

* ಡಾ. ಚಿದಾನಂದ ಗೌಡ ಸಮಿತಿಯ ಶಿಫಾರಸ್ಸಿನಂತೆ ಯೂನಿಕೋಡ್ ಕನ್ನಡ ತಂತ್ರಾಂಶದ ಲೋಕಾರ್ಪಣೆ
* ವೂಜ್ ಬರ್ಗ್, ವಿಯೆನ್ನಾ, ಹೈಡಲ್ ಬರ್ಗ್ ಹಾಗೂ ಮ್ಯೂನಿಚ್ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳ ಸ್ಥಾಪನೆ
* ಒಂದು ಕೋಟಿ ರು ವೆಚ್ಚದಲ್ಲಿ ಗುಲ್ಬರ್ಗ ವಿಭಾಗದಲ್ಲಿ ರಂಗಾಯಣ ಸ್ಥಾಪನೆ
* ಬೆಂಗಳೂರಿನಲ್ಲಿ ಒಂದು ಅಂತಾರಾಷ್ಟ್ರೀಯ ಮಟ್ಟದ 'ಕುವೆಂಪು ಕಲಾ ಭವನ' ನಿರ್ಮಾಣ.
* ಕಾರಾಗೃಹಗಳಲ್ಲಿನ ಖೈದಿಗಳಿಗೆ ಲಲಿತಕಲಾ ತರಬೇತಿ ನೀಡಲು 'ಸಂಕಲ್ಪ ಸಂಸ್ಥೆ' ಗೆ 30 ಲಕ್ಷ ರು.
* ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನಕ್ಕೆ 3.5 ಕೋಟಿ ರು.
* ಚಾಮರಾಜನಗರ ಮಾರಿಹಾಳದಲ್ಲಿರುವ ಅಖಿಲ ಭಾರತ ಮಾದರಿ ಶಿಕ್ಷಣ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರು
* ತಾತಗುಣಿಯಲ್ಲಿರುವ ರೋರಿಚ್ ಎಸ್ಟೇಟ್ ನ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯವನ್ನು 25 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆ
* ಬೆಂಗಳೂರಿನ ಗಾಂಧಿ ಭವನದ ವಿವಿಧ ಕಾರ್ಯಕ್ರಮಗಳಿಗೆ 4 ಕೋಟಿ ರು
* ತುಳು ಮತ್ತು ಬಿಲ್ಲವ ಸಮಾಜದ ಆರಾಧ್ಯ ದೈವವಾದ ಕೋಟಿ ಚನ್ನಯ್ಯನವರ ಜನ್ಮಸ್ಥಳವಾದ ಪುತ್ತೂರು ತಾಲ್ಲೂಕಿನ ಪಡುಮಲೈಯಲ್ಲಿ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರು
* ಕರ್ನಾಟಕ ವಿದ್ಯಾವರ್ಧಕ ಸಂಘದ ಪರಂಪರಾ ಕಟ್ಟಡವನ್ನು ಬಲಪಡಿಸಲು 1 ಕೋಟಿ ರೂ
* ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜೈನ ಕವಿ ರತ್ನಾಕರ ವರ್ಣಿ ಅಧ್ಯಯನ ಪೀಠವನ್ನು ಸ್ಥಾಪಿಸಲು 1 ಕೋಟಿ ರೂ.
* ಮೂಡಬಿದರೆ ಹಾಗೂ ಬೆಂಗಳೂರಿನಲ್ಲಿ ಜೈನ ಕವಿ ರತ್ನಾಕರ ವರ್ಣಿ ಜಯಂತಿ ಆಚರಿಸಲು 50 ಲಕ್ಷ ರೂ
* ಶಿವಮೊಗ್ಗ ನಗರದಲ್ಲಿ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಕಟ್ಟಡ ನಿರ್ಮಾಣಕ್ಕಾಗಿ 1.60 ಕೋಟಿ ರೂ
* ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ರಂಗಭಾರತಿ ಸಂಸ್ಥೆಯ ರಂಗಸಮುಚ್ಛಯ ನಿರ್ಮಾಣ ಪೂರ್ಣಗೊಳಿಸಲು 1 ಕೋಟಿ ರೂ.












Click it and Unblock the Notifications