ರೂಪಾಯಿ ಕುಸಿತ: ಮತ್ತೆ ಚಿಗುರಿದ ಅಮೆರಿಕನ್ ಡ್ರೀಂ
ಬೆಂಗಳೂರು:
ಮುಂದುವರಿದ ರೂಪಾಯಿ ಕುಸಿತದೊಂದಿಗೆ ವಾರ ಆರಂಭವಾಗಿದೆ. ಡಾಲರ್ ಕುಣಿತ ಜೋರಾಗಿದೆ. ಇತ್ತೀಚಿನ ದಿನಗಳಲ್ಲಿ ಒಂದೇ ಸಮನೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಮತ್ತು ಅಮೆರಿಕದ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುತ್ತಿರುವುದು American dreamಗೆ ಮತ್ತೆ ನೀರೆರೆಯತೊಡಗಿದೆ. id="toptextpromo"> id='are-slot-1' class='oiad oi-axt oiadv'>ಬಹುತೇಕ
ದಿವಾಳಿಯೆದ್ದು ಹೋಗಿ- ಅಗ್ಗದ ಕಾರ್ಮಿಕರಿಗಾಗಿ ತೃತೀಯ ಜಗತ್ತುಗಳಲ್ಲಿ off shoringಗೆ ಜೋತುಬಿದ್ದಿದ್ದ ಅಮೆರಿಕ ಈಗ ಚೇತರಿಕೆ ಕಾಣುತ್ತಿದ್ದು reshoringಗೆ ವಾಪಸಾಗುತ್ತಿದೆ. ಅಮೆರಿಕದ ಉತ್ಪಾದನಾ ವಲಯ ಮತ್ತೆ ಚಲಿಸುತ್ತಿದೆ. ಅಮೆರಿಕ ಫ್ಯಾಕ್ಟರಿಗಳ ಉತ್ಪಾದಕತೆ ಗಣನೀಯ ಪ್ರಮಾಣದಲ್ಲಿ ಏರತೊಡಗಿದೆ. ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತಿದೆ. id='are-slot-2' class='oiad oi-axt oiadv'>ದಶಕಗಳಿಂದ
ಒಂದೇ ಸಮನೆ ಇಳಿಜಾರುತ್ತಿದ್ದ ಅಮೆರಿಕಕ್ಕೆ 2008ರ ಆರ್ಥಿಕ ಸಂಕಷ್ಟ ಬರಸಿಡಿಲಿನಂತೆ ಬಡಿದಿತ್ತು. ಜಗತ್ತಿನ ದೊಡ್ಡಣ್ಣ, ಸೂಪರ್ ಪವರ್ ಅಮೆರಿಕ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಚೀನಾ, ಜರ್ಮನಿ ಸೇರಿದಂತೆ ಬಹುತೇಕ ರಾಷ್ಟ್ರಗಳು ಷರಾ ಸಹ ಬರೆದಿದ್ದವು. ಸಾಲದ ಸುಳಿಯಲ್ಲಿ ಅಮೆರಿಕ ಕೊಚ್ಚಿ ಹೋಗಲಿದೆ ಎಂದೇ ಕೆಲ ರಾಷ್ಟ್ರಗಳು ಪಿಳಿಪಿಳಿ ಕಣ್ಣುಗಳಿಂದ ನೋಡತೊಡಗಿದವು.
ಅಮೆರಿಕದಲ್ಲಿ ಮತ್ತೆ ಜೀವಂತಿಕೆ
ಆದರೆ ಅದು ಅಲ್ಲಿಗೇ ಸೀಮಿತವಾಯಿತು. ರಾಷ್ಟ್ರಾಧ್ಯಕ್ಷರಾಗಿ ಬರಾಕ್ ಒಬಾಮಾ ಮುಂದುವರಿಕೆಯ ನಂತರ 2013 ರಿಂದೀಚೆಗೆ ಅಮೆರಿಕದಲ್ಲಿ ಮತ್ತೆ ಜೀವಂತಿಕೆ ಕಾಣಬರುತ್ತಿದೆ. ಅಮೆರಿಕದ ಹಣಕಾಸು ಮಾರುಕಟ್ಟೆಗಳು ಮತ್ತೆ ಪುಟಿದೆದ್ದಿವೆ.
ಇದಕ್ಕೆ ಇಂಬು ಕೊಡುವಂತೆ ಭಾರತ ರೂಪಾಯಿ ಅಮೆರಿಕದ ಡಾಲರ್ ಮುಂದೆ ತುಂಬಾ ಅಗ್ಗವಾಗಿದೆ. ಐಟಿ-ಬಿಟಿ ಸೇರಿದಂತೆ ಜವಳಿ ಕ್ಷೇತ್ರದಲ್ಲೂ ಹೆಚ್ಚಾಗಿ ಭಾರತವನ್ನೇ ಅವಲಂಬಿಸಿದ್ದ ಅಮೆರಿಕಕ್ಕೆ ಈಗ ಡಾಲರ್ ಕರೆನ್ಸಿಗೆ ಮೌಲ್ಯ ಮರುಕಳಿಸಿರುವುದೂ ಸಹಕಾರಿಯಾಗಿದೆ. ಅಮೆರಿಕ ನೆಗಡಿ ಅಂದರೆ ಜಗತ್ತಿನ ಇತರೆ ಬಲಾಢ್ಯ ಅರ್ಥವ್ಯವಸ್ಥೆಗಳಿಗೆ ಗರಬಡಿಯುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.

ಮತ್ತೆ ಚಿಗಿತುಕೊಳ್ಳಲು ಹೇಗೆ ಸಾಧ್ಯವಾಗಿದೆ
ಅಮೆರಿಕಕ್ಕೆ ವಲಸೆ ಹೋಗುವುದು, ಅದರ ಭೌಗೋಳಿಕ ಭದ್ರತೆ, ಉನ್ನತ ಶಿಕ್ಷಣದಲ್ಲಿ ಅಗ್ರಮಾನ್ಯ ಪಟ್ಟ ಉಳಿಸಿಕೊಂಡಿರುವುದು, ಅಬಾಧಿತ ಸಂಶೋಧನೆಗಳು ತನ್ನ ರಕ್ತದಲ್ಲಿ ಹರಿಯುತ್ತಿರುವುದರಿಂದ ಅಮೆರಿಕಕ್ಕೆ ಮತ್ತೆ ಚಿಗಿತುಕೊಳ್ಳಲು ಸಾಧ್ಯವಾಗಿದೆ ಎನ್ನಬಹುದು. ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಸಹ ಈ ಬಾರಿ ಒಗ್ಗೂಡಿ ಆರ್ಥಿಕ ಪುನಶ್ಚೇತನಕ್ಕೆ ಆಧಾರವಾಗಿವೆ.

'ಎಲ್ಲರ ಮನೆಯ ದೋಸೆಯೂ ತೂತು'
'ಎಲ್ಲರ ಮನೆಯ ದೋಸೆಯೂ ತೂತು' ಎಂಬಂತೆ ನಮ್ಮ ಆರ್ಥಿಕತೆಯೂ ಹೆಚ್ಚೇ ಎನಿಸುವಷ್ಟು ಕುಲಗೆಟ್ಟಿತ್ತು. ಆದರೆ ನಾವು ಮತ್ತೆ ಸುಗಮ ಹಾದಿಗೆ ಮರಳಿದ್ದೇವೆ. ಕಳೆದ ದಶಕದ ದ್ವಿತೀಯಾರ್ಧದಲ್ಲಿ ನಾವು ಅನುಭವಿಸಿದ್ದ ಪಡಿಪಾಟಲು ದೂರವಾಗುತ್ತಿವೆ ಎಂದು ಅಮೆರಿಕನ್ನರು ಈಗ ಜಗತ್ತಿಗೆ ಹೇಳತೊಡಗಿದ್ದಾರೆ.

ಇಷ್ಟಕ್ಕೇ ಉಸ್ಸಪ್ಪಾ ಅನ್ನುತ್ತಿಲ್ಲ.
ಇನ್ನು ಅಮೆರಿಕ ಇಷ್ಟಕ್ಕೇ ಉಸ್ಸಪ್ಪಾ ಅನ್ನುತ್ತಿಲ್ಲ. ಇನ್ನು ಒಂದೆರಡು ದಶಕಗಳಲ್ಲಿ ಮತ್ತಷ್ಟು ಸದೃಢವಾಗಿ ಇಂಧನ ಕ್ಷೇತ್ರ, ಉತ್ಪಾದನಾ ವಲಯಗಳಲ್ಲಿ ಸ್ವಂತಿಕೆ ಸಾಧಿಸುವ ಲಕ್ಷಣಗಳು ಗೋಚರಿಸುತ್ತಿವೆ.

ದೌರ್ಭಾಗ್ಯದ ಸಂಗತಿಯೆಂದರೆ ಭಾರತ ಭ್ರಷ್ಟಾಚಾರದಿಂದ
ಇದೇ ವೇಳೆ ದೌರ್ಭಾಗ್ಯದ ಸಂಗತಿಯೆಂದರೆ ಭಾರತ ಭ್ರಷ್ಟಾಚಾರದಿಂದ ನರಳುತ್ತಿದ್ದರೆ, ಚೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳು ಆಂತರಿಕ ಕ್ಷೋಭೆಯಿಂದ ನರಳುತ್ತಿವೆ. ಚೀನಾ ಸದ್ಯದಲ್ಲೇ ಅಮೆರಿಕದಲ್ಲಿ ಕಂಡಂತಹ ಆರ್ಥಿಕ ಸಂಕಷ್ಟ ಎದುರಿಸಲಿದೆ ಎಂಬ ಲೆಕ್ಕಾಚಾರವೂ ಇದೆ. ಇನ್ನು ರಷ್ಯಾದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಮೆರಿಕ ಬಯಸುವುದೂ ಇದನ್ನೇ. ಒಟ್ಟಿನಲ್ಲಿ ಎಲ್ಲವೂ ಅಮೆರಿಕಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ.












Click it and Unblock the Notifications