ಮಣಿಪಾಲ್ ರೇಪ್: ವಿದ್ಯಾರ್ಥಿನಿ ಶಿಕ್ಷಣದ ಕಥೆ ಏನಾಯ್ತು?

manipal-student-gang-rape-do-victim-come-back-to-study
ಉಡುಪಿ, ಜುಲೈ8: ಮೇ 20ರ ರಾತ್ರಿ ಪೈಶಾಚಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕಳೆದ ವಾರ ತವರಿಗೆ ಮರಳಿದ್ದಾಳೆ. ಆಕೆ ತಮ್ಮ ಹೆತ್ತವರೊಂದಿಗೆ ಕೇರಳಕ್ಕೆ ವಾಪಸಾಗಿದ್ದಾರೆ. ಅದಾದ ನಂತರ, ಬಾಧಿತ ವಿದ್ಯಾರ್ಥಿನಿ ಶಿಕ್ಷಣದ ಕಥೆ ಏನಾಯ್ತು? ಆಕೆ ಮಣಿಪಾಲಕ್ಕೆ ಮರಳಿ ತಮ್ಮ ಅಮೂಲ್ಯವಾದ ಶಿಕ್ಷಣವನ್ನು ಮುಂದುವರಿಸುವಳೇ? ಎಂಬ ಪ್ರಶ್ನೆಗಳು ದೇಗುಲನಗರಿಯಲ್ಲಿ ಕೇಳಿಬಂದಿದೆ.

ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ 4ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯ ಶಿಕ್ಷಣ ಇಲ್ಲಿಗೇ ಕೊನೆಗೊಳ್ಳುತ್ತದಾ? ಜೀವಮಾನದ ಪೆಟ್ಟು ತಿಂದಿರುವ ವಿದ್ಯಾರ್ಥಿನಿ ಆ ಕಹಿ ಘಟನೆಯನ್ನು ಮರೆತು ಮತ್ತೆ ಮಣಿಪಾಲಕ್ಕೆ ಬದು ಓದು ಮುಂದುವರಿಸುವಳೇ? ಬಾಕಿ ಇರುವ ಇನ್ನೂ ಒಂದು ವರ್ಷ ವೈದ್ಯ ಕೋರ್ಸ್ ಮುಗಿಸಲು ಸಾಧ್ಯವೇ?

ಬೆನ್ನು ಹತ್ತಿ ಕಾಡುವ ಆ ಕಹಿ ಘಟನೆಯ ನೆನಪನ್ನು ಹೊತ್ತು ಮತ್ತದೇ ಕ್ಯಾಂಪಸಿಗೆ ವಾಪಸಾಗುವುದು, ತನಗೇನೂ ಆಗಿಲ್ಲ ಎಂಬಂತೆ ವರ್ತಿಸುವುದು, ಪ್ರಶ್ನಾರ್ಥಕವಾಗಿ ನೋಡುವ ಸಹಪಾಠಿಗಳನ್ನು ಎದುರಿಸುವುದು ಆಕೆಯ ಜಾಗದಲ್ಲಿರುವ ಯಾರಿಗೇ ಆಗಲಿ ಸಾಧ್ಯವಾ?

ಆಪ್ತ ಮೂಲಗಳ ಪ್ರಕಾರ ಬಾಧಿತ ವಿದ್ಯಾರ್ಥಿನಿ ಮಣಿಪಾಲದ ಸಹವಾಸವೇ ಸಾಕು ಎನ್ನುತ್ತಿದ್ದಾಳಂತೆ. ಕಲಿಕೆಯಲ್ಲಿ ಚುರುಕಾಗಿರುವ ಆಕೆ ತನ್ನ ಕೊನೆಯ ವರ್ಷದ ಎಂಬಿಬಿಎಸ್ ಶಿಕ್ಷಣವನ್ನು ಬೇರೆ ಯಾವುದಾದರೂ ಮೆಡಿಕಲ್ ಕಾಲೇಜಿನಲ್ಲಿ ಮುಂದುವರಿಸಲು ಬಯಸಿದ್ದಾಳಂತೆ.

ಸಹಪಾಠಿಗಳ ಅಚಲ ಬೆಂಬಲ: ಸಹಪಾಠಿ ವಿದ್ಯಾರ್ಥಿನಿಗಳ ಪ್ರಕಾರ, ಆಕೆಗೆ ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ಅತ್ಯಂತ ಭೀಭತ್ಸ ಘಟನೆ ನಡೆದ ಮಣಿಪಾಲದಲ್ಲಿ ಮತ್ತೆ ಶಿಕ್ಷಣ ಮುಂದುವರಿಸುವ ಇಚ್ಛೆ ಇಲ್ಲ ಸುತರಾಂ ಇಲ್ವಂತೆ.

ಆದರೆ ಆಕೆಯ ಸಹಪಾಠಿಗಳು ಮಾತ್ರ ಆಕೆಗೆ ಅಚಲ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೆ ಮಣಿಪಾಲಕ್ಕೆ ಬಂದು ಶಿಕ್ಷಣ ಮುಂದುವರಿಸಬೇಕು ಎಂದು ಆಕೆಯನ್ನು ಒತ್ತಾಯಿಸಿದ್ದಾರೆ. ಅತ್ಯಾಚಾರಕ್ಕೊಳಗಾಗಿರುವ ವಿದ್ಯಾರ್ಥಿನಿ ಯಾರು ಎಂಬುದು ಹೊರಪ್ರಪಂಚಕ್ಕೆ ಗೊತ್ತಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ತಾವು ಜತೆಗಿದ್ದೇವೆ ಎಂದು ಸಹಪಾಠಿಗಳು ಆಕೆಗೆ ಧೈರ್ಯ ತುಂಬಿದ್ದಾರೆ. ಆದರೆ ಆಕೆ ಮುಂದೇನು ಮಾಡುತ್ತಾಳೆಂದು ಕಾದು ನೋಡಬೇಕಾಗಿದೆ.

ಜೂ. 20 ರಂದು ರಾತ್ರಿ ಮೂವರು ಆಟೋ ಚಾಲಕರು ಸದರಿ ವಿದ್ಯಾರ್ಥಿನಿಯನ್ನು KMC ಆವರಣದಲ್ಲಿ ಅಪಹರಣ ಮಾಡಿ, ಸಾಮೂಹಿಕ ಅತ್ಯಾಚಾರಕ್ಕೀಡುಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+