ಕಾರ್ಮೋಡದ ಕೆಳಗೆ ಪ್ರೇಮ ಸೌಧ

ಆಗ್ರಾ, ಜು.7: ವಿಶ್ವಖ್ಯಾತ ಪ್ರೇಮ ಸೌಧ ತಾಜ್ ಮಹಲ್ ನೆತ್ತಿ ಮೇಲೆ ಕರಿ ಮೋಡಗಳು ಆವರಿಸಿದ ದೃಶ್ಯ ಬಣ್ಣನೆಗೆ ನಿಲುಕದ್ದಾಗಿದೆ. ಮೋಡದ ನಡುವೆ ಶ್ವೇತ ಶುಭ್ರ ಮಹಲ್ ನೋಡುವುದೇ ಆನಂದ. ದೇಶ, ವಿದೇಶ ಪ್ರವಾಸಿಗರು, ಛಾಯಾಗ್ರಾಹಕರಿಗೆ ತಾಜ್ ಮಹಲ್ ನೆಚ್ಚಿನ ತಾಣ.

ಮೊಘಲ್ ದೊರೆ ಷಹಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ಅವರ ನೆನಪಿಗಾಗಿ ಕಟ್ಟಿದ ತಾಜ್ ಮಹಲ್ ನೋಡಲು ವಾರ್ಷಿಕವಾಗಿ ಎರಡು ಮೂರು ಮಿಲಿಯನ್ ಪ್ರವಾಸಿಗರು ಬರುತ್ತಾರೆ. [ದಕ್ಷಿಣ ಭಾರತದ ತಾಜ್ ಮಹಲ್ ನೋಡಿ]

ಸುಮಾರು 358 ವರ್ಷಗಳ ಇತಿಹಾಸ ಹೊಂದಿರುವ ತಾಜ್ ಮಹಲ್ ನ ಶ್ವೇತ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಪರಿಸರ ಮಾಲಿನ್ಯದಿಂದ ತಾಜ್ ಮಹಲ್ ಕಳೆಗುಂದುವುದನ್ನು ತಪ್ಪಿಸಲು ಹಿಂದೂಗಳ ಪಾಲಿನ ಪವಿತ್ರ ಗಿಡ ತುಳಸಿಯನ್ನು ತಾಜ್ ಸುತ್ತಲೂ ನೆಡುವ ಮೂಲಕ ಪರಿಸರ ಶುದ್ಧಿಯಾಗಿರಿಸಲು ಸರ್ಕಾರ ಕೈಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಳಿದಂತೆ, ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾಗಿರುವ ಗುವಾಹಟಿ, ಪುಣೆಯ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಚಿತ್ರಗಳು, ಅಹಮದಾಬಾದ್, ಬೈಲುಕುಪ್ಪೆ, ನವದೆಹಲಿ, ಕೋಲ್ಕತ್ತಾ, ಭೋಪಾಲ್, ಉತ್ತರಕಾಶಿ ಮುಂತಾದೆಡೆಗಳಿಂದ ಬಂದ ಚಿತ್ರಗಳು ಇಲ್ಲಿವೆ.

ಆಗ್ರಾದ ಪ್ರೇಮಸೌಧ

ಆಗ್ರಾದ ಪ್ರೇಮಸೌಧ

ಆಗ್ರಾದ ಪ್ರೇಮಸೌಧ ಮುಂಗಾರು ಮೋಡಗಳ ನಡುವೆ ಪ್ರೇಮ ಸೌಧ ತಾಜ್ ಮಹಲ್

ಪ್ರೇಮ ಸೌಧ -ಭದ್ರತೆ

ಪ್ರೇಮ ಸೌಧ -ಭದ್ರತೆ

ಬಿಹಾರದ ಬಾಂಬ್ ಸ್ಫೋಟ ಪ್ರಕರಣ ನಂತರ ಆಗ್ರಾದ ಪ್ರೇಮ ಸೌಧದ ಸುತ್ತಾ ಭದ್ರತೆ ಹೆಚ್ಚಿಸಲಾಗಿದೆ.

ಮಳೆ ನಡುವೆ ಸುಂದರ ಸೌಧ

ಮಳೆ ನಡುವೆ ಸುಂದರ ಸೌಧ

ಬದಲಾಗುವ ಋತುಮಾನದ ಜೊತೆಗೆ ಸೆಣಸಾಟ ನಡೆಸುತ್ತಾ ತನ್ನ ಸೌಂದರ್ಯ ಉಳಿಸಿಕೊಂಡಿರುವ ಮಾನವ ನಿರ್ಮಿತ ಅದ್ಭುತ ಕಟ್ಟಡ ತಾಜ್ ಮಹಲ್

ಕ್ಷಮಿಸಿ.. ಟೆರೆರಿಸ್ಟ್ ಆಲ್ಲ

ಕ್ಷಮಿಸಿ.. ಟೆರೆರಿಸ್ಟ್ ಆಲ್ಲ

ಜಮ್ಮು: ಹಿಂದೂ ಸ್ವಯಂ ರಕ್ಷಣೆ ಪಡೆಯಾಗಿ ಬೆಳೆಯುತ್ತಿರುವ ದುರ್ಗಾ ವಾಹಿನಿ ತಂಡದ ಯುವತಿಯರು ತರಬೇತಿ ಶಿಬಿರದಲ್ಲಿ ಗುರಿಯಿಟ್ಟಿದ್ದು ಹೀಗೆ

ಹಾರುವ ಚೀನಿ

ಹಾರುವ ಚೀನಿ

ಪುಣೆ: ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚೀನಾದ ಲಿ ಲಿಂಗ್ ಅವರು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 4.54 ಮೀ ಎತ್ತರ ಜಿಗಿದು ಚಿನ್ನ ಗೆದ್ದಿದ್ದಲ್ಲದೆ ಹೊಸ ದಾಖಲೆ ಬರೆದರು. PTI Photo by Shirish Shete

ಕಾಶ್ಮೀರದ ಕಮಾಲ್

ಕಾಶ್ಮೀರದ ಕಮಾಲ್

ಹಿಂದೊಮ್ಮೆ ಬೆಂಗಳೂರಿನಲ್ಲಿ ಶಂಕಿತ ಉಗ್ರ ಎಂದು ವಿಚಾರಣೆಗೆ ಒಳಪಟ್ಟಿದ್ದ ಕಾಶ್ಮೀರದ ಯುವ ಆಫ ಸ್ಪಿನ್ನರ್ ಪರ್ವೇಜ್ ರಸೂಲ್ ಅವರು ಜಿಂಬಾಬ್ವೆ ಪ್ರವಾಸ ಕೈಗೊಳ್ಳುವ ಭಾರತ ತಂಡಕ್ಕೆ ಆಯ್ಕೆಯಾದ ಸಂಭ್ರಮದಲ್ಲಿದ್ದಾರೆ. ವಿವರ ನೋಡಿ

ಶಾಲುಗೆ ಸೋಲಾರ್ ಬಿಸಿ

ಶಾಲುಗೆ ಸೋಲಾರ್ ಬಿಸಿ

ಕೊಟ್ಟಾಯಂ: ಜನಪ್ರಿಯ ನಟಿ, ನೃತ್ಯಗಾರ್ತಿ ಶಾಲು ಮೆನನ್ ಅವರು ಸೋಲಾರ್ ಪ್ಯಾನಲ್ ಹಗರಣದಲ್ಲಿ ಆರೋಪಿಯಾಗಿ ಪೊಲೀಸ್ ಬಂಧನಕ್ಕೆ ಒಳಪಟ್ಟಿದ್ದು, ವಿಚಾರಣೆಗೆ ಒಳಪಟ್ಟಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ ಓದಿ

ಕಟ್ಟಡ ಕುಸಿತ

ಕಟ್ಟಡ ಕುಸಿತ

ನವದೆಹಲಿ: ಜಫರಾ ಬಾದ್ ಪ್ರದೇಶದಲ್ಲಿ ಕುಸಿದ ಕಟ್ಟಡದ ಆವಶೇಷಗಳನ್ನು ತೆರವುಗೊಳಿಸುತ್ತಿರುವ ಜೆಸಿಬಿ

ಸಂಘ ಮುಖಂಡ ಸ್ಮರಣೆ

ಸಂಘ ಮುಖಂಡ ಸ್ಮರಣೆ

ಭೋಪಾಲ್: ಬಿಜೆಪಿ ಕಾರ್ಯಕರ್ತರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆ ಆಚರಿಸಿದರು.

ಬೈಲುಕುಪ್ಪೆಯಲ್ಲಿ ದಲೈಲಾಮಾ

ಬೈಲುಕುಪ್ಪೆಯಲ್ಲಿ ದಲೈಲಾಮಾ

ಬೈಲುಕುಪ್ಪೆ: ಟಿಬೇಟ್ ಧರ್ಮಗುರು ದಲೈಲಾಮಾ ಅವರು ಮುಸ್ಲಿಂ ಮೌಲ್ವಿಗಳಿಂದ ಸ್ಮರಣಿಕೆ ಪಡೆಯುತ್ತಿದ್ದಾರೆ. ದಲೈಲಾಮಾ ಅವರು 78ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಬೈಲುಕುಪ್ಪೆಯಲ್ಲಿ ದಲೈಲಾಮಾ

ಬೈಲುಕುಪ್ಪೆಯಲ್ಲಿ ದಲೈಲಾಮಾ

ಶನಿವಾರ 78ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಟಿಬೇಟ್ ಧರ್ಮಗುರು ದಲೈಲಾಮಾ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ, ಸುತ್ತೂರು ಶ್ರ್ರೀಗಳು

ಪೇಟಧಾರಿ ದಲೈಲಾಮಾ

ಪೇಟಧಾರಿ ದಲೈಲಾಮಾ

ಶನಿವಾರ 78ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಟಿಬೇಟ್ ಧರ್ಮಗುರು ದಲೈಲಾಮಾ

ಗುವಾಹಟಿಯಲ್ಲಿ ಮಳೆ

ಗುವಾಹಟಿಯಲ್ಲಿ ಮಳೆ

ಗುವಾಹಟಿಯ ರಸ್ತೆಗಳಲ್ಲಿ ಮಳೆ ನೀರು ತುಂಬಿದ್ದು,ಸಂಚಾರ ಕಷ್ಟವಾಗಿದೆ.

ಗುವಾಹಟಿ ಮಳೆ

ಗುವಾಹಟಿ ಮಳೆ

ಗುವಾಹಟಿಯ ರಸ್ತೆಗಳಲ್ಲಿ ಮಳೆ ನೀರು

ಲಾಂಗ್ ಜಪ್ ನಲ್ಲಿ ಬೆಳ್ಳಿ

ಲಾಂಗ್ ಜಪ್ ನಲ್ಲಿ ಬೆಳ್ಳಿ

ಪುಣೆ: ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಭಾರತದ ಪ್ರೇಮ್ ಕುಮಾರ್

ದಾಂಡಿಯಾ

ದಾಂಡಿಯಾ

ಕೋಲ್ಕತ್ತಾ: ಪ್ರವಾಸೋದ್ಯಮ ಉತ್ಸವದಲ್ಲಿ ಗುಜರಾತ್ ಪೆವಿಲಿಯನ್ ನಲ್ಲಿ ದಾಂಡಿಯಾ ನೃತ್ಯ

ಪರಿಹಾರ ಕಾರ್ಯ

ಪರಿಹಾರ ಕಾರ್ಯ

ಅಹಮದಾಬಾದ್ : ಉತ್ತರಾಖಂಡ್ ಪ್ರವಾಹ ಪರಿಹಾರದ ಅಂಗವಾಗಿ ಇಲ್ಲಿನ ಸರ್ಕಾರೇತರ ಸಂಸ್ಥೆಗಳು ಸಂತ್ರಸ್ತರಿಗೆ ಕಳಿಸಲು ಇಟ್ಟಿರುವ ಸಾಮಾಗ್ರಿಗಳು

ಉತ್ತರಾಖಂಡ್ ಪ್ರವಾಹ ಪರಿಹಾರ

ಉತ್ತರಾಖಂಡ್ ಪ್ರವಾಹ ಪರಿಹಾರ

ಉತ್ತರಾಖಂಡ್ ಪ್ರವಾಹ ಪರಿಹಾರದ ಅಂಗವಾಗಿ ಇಲ್ಲಿನ ಸರ್ಕಾರೇತರ ಸಂಸ್ಥೆಗಳು ಸಂತ್ರಸ್ತರಿಗೆ ಕಳಿಸಲು ಇಟ್ಟಿರುವ ಸಾಮಾಗ್ರಿಗಳು

ಇಶ್ರತ್ ಗೆ ನ್ಯಾಯಕೊಡಿ

ಇಶ್ರತ್ ಗೆ ನ್ಯಾಯಕೊಡಿ

ನವದೆಹಲಿ: ನಕಲಿ ಎನ್ ಕೌಂಟರ್ ಗೆ ಬಲಿಯಾದ ಇಶ್ರತ್ ಜಹಾನ್ ಅವರ ತಾಯಿ ಶಮಿಮಾ ಕೌಸರ್ ಹಾಗೂ ಸೋದರಿ ನುಸ್ರತ್ ಅವರು ದೀಪ ಬೆಳಗಿಸಿ ಇಶ್ರತ್ ನ್ಯಾಯಕ್ಕಾಗಿ ಆಗ್ರಹಿಸಿದರು. PTI Photo Photo by Shahbaz Khan

ಗುಪ್ತಕಾಶಿಯಲ್ಲಿ

ಗುಪ್ತಕಾಶಿಯಲ್ಲಿ

ಕೆಮೆರಾ ಸಹಿತ ಡ್ರೊನ್ ಸಾಧಕವೊಂದನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಕಳಿಸಿ ಅಳಿದುಳಿದಿರುವವರ ಹುಡುಕಾಟಕ್ಕೆ ಯತ್ನಿಸಲಾಗುತ್ತಿದೆ.

ಮಿಸ್ ಇಂಡಿಯಾ 2013

ಮಿಸ್ ಇಂಡಿಯಾ 2013

ಮುಂಬೈ : ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2013 ನವನೀತ್ ಕೌರ್ ದಿಲ್ಲೋನ್ (ಮಧ್ಯ) ರನ್ನತ್ ಅಪ್ ಶೋಭಿತಾ ಧುಲಿಪಾಲ(ಬಲ) ಮೂರನೇ ಸ್ಥಾನ ಪಡೆದ ಜೋಯಾ ಅಫ್ರೋಜ್ (ಎಡ) ಆರ್ಯ ಉತ್ಪನ್ನ ಬಿಡುಗಡೆ ಸಂದರ್ಭದಲ್ಲಿ

ಪ್ರೇಮ ಸೌಧಕ್ಕೆ ರಕ್ಷಣೆ

ಪ್ರೇಮ ಸೌಧಕ್ಕೆ ರಕ್ಷಣೆ

ಬಿಹಾರದ ಬೋಧ್ ಗಯಾ ದೇಗುಲ ಬಳಿ ಬಾಂಬ್ ಸ್ಫೋಟ ಪ್ರಕರಣ ನಂತರ ಆಗ್ರಾದ ಪ್ರೇಮ ಸೌಧದ ಸುತ್ತಾ ಭದ್ರತೆ ಹೆಚ್ಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+