ಬೆಂಗ್ಳೂರು ಹೈಗ್ರೌಂಡ್ಸ್ ಪಿಎಸ್ಐ ರಾಘವೇಂದ್ರ ಸಸ್ಪೆಂಡ್

High Grounds station PSI Raghavendra Suspended
ಬೆಂಗಳೂರು, ಜು.4: ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಘವೇಂದ್ರ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ಅವರು ಆದೇಶ ಹೊರಡಿಸಿದ್ದಾರೆ.

ದೈನಂದಿನ ಚಟುವಟಿಕೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಿಎಸ್ ಐ ಅಮಾನತುಗೊಳಿಸಿ, ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಅವರು ಹೇಳಿದ್ದಾರೆ.

ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಾಜಿ ಯೋಧರ ಪತ್ನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಪಿಎಸ್ ಐ ರಾಘವೇಂದ್ರ ಅವರ ಮೇಲಿದೆ. ಪ್ರಾಥಮಿಕ ತನಿಖೆಯಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಏನಿದು ಪ್ರಕರಣ?: ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಎಸ್ಐ ರಾಘವೇಂದ್ರ ಅವರ ಜೊತೆ ಸ್ನೇಹವಾಗಿದೆ. ಸ್ಣೇಹವನ್ನು ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ಎಸಗಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಮಾಜಿ ಯೋಧನ ಪತ್ನಿ ಅವರು ಕೇಂದ್ರ ವಲಯ ಡಿಸಿಪಿ ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದರು. ರಾಘವೇಂದ್ರ ಜತೆಗಿನ ಸ್ನೇಹ ಸಲುಗೆಗೆ ದೂರವಾಣಿ ಕರೆ ದಾಖಲೆಯನ್ನು ಒದಗಿಸಿದರು.

ಈ ಬಗ್ಗೆ ಉನ್ನತ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಕಾನೂನು ಮತ್ತು ಸುವವ್ಯಸ್ಥೆ ಹೆಚ್ಚುವರಿ ಆಯುಕ್ತ ಕಮಲ್ ಪಂಥ್ ಜೊತೆ ಸಾಮಾಲೋಚನೆ ನಡೆಸಿದ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ಅವರು ಪಿಎಸ್ ಐ ಅವರ ಅಮಾನತು ಆದೇಶ ಹೊರಡಿಸಿದ್ದಾರೆ.

ಸಬ್ ಇನ್ಸ್ ಪೆಕ್ಟರ್ ಏನು ಹೇಳ್ತಾರೆ?: ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.ಈ ಸಂದರ್ಭದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನಾನು ಯಾವುದೇ ಉತ್ತರ ನೀಡಲು ಇಷ್ಟವಿಲ್ಲ. ಇಲಾಖಾ ಮಟ್ಟದಲ್ಲಿ ತನಿಖೆ ನಡೆಯಲಿದೆ. ಇದರಿಂದ ನನಗೆ ನ್ಯಾಯ ಸಿಗಲಿದೆ. ಸತ್ಯಾಂಶ ಹೊರ ಬೀಳುತ್ತದೆ ಎಂದು ಅಮಾನತುಗೊಂಡಿರುವ ಪಿಎಸ್ ಐ ರಾಘವೇಂದ್ರ ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಅನೈತಿಕ ಸಂಬಂಧ ನಿಜವೇ? : 30ರ ಆಸುಪಾಸಿನಲ್ಲಿರುವ ರಾಘವೇಂದ್ರ ಅವರು 40 ವರ್ಷ ವಯಸ್ಸಿನ ಮಾಜಿ ಯೋಧನ ಪತ್ನಿ ಮಹಿಳೆ ಇಬ್ಬರ ನಡುವೆ ಸ್ನೇಹಕ್ಕೆ ಮೀರಿದ ಸಂಬಧವಿತ್ತೇ ಎಂಬುದು ದೃಢಪಟ್ಟಿಲ್ಲ. ಆದರೆ, ಇಬ್ಬರು ಸ್ಟಾರ್ ಹೋಟೆಲ್ ಗಳಲ್ಲಿ ಅನೇಕ ಖಾಸಗಿ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ರಾಘವೇಂದ್ರ ಅವರಿಗೆ ಆಕೆ ಲ್ಯಾಪ್ ಟಾಪ್ ಉಡುಗೊರೆಯಾಗಿ ನೀಡಿದ್ದರು. ಅದರೆ, ಇತ್ತೀಚೆಗೆ ರಾಘವೇಂದ್ರ ಅವರು ಮದುವೆಯಾದ ಮೇಲೆ ಯೋಧನ ಪತ್ನಿ ಜೊತೆ ಸಲುಗೆ ಕಡಿಮೆ ಮಾಡಿದ್ದರು. ಆಕೆ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ದರು.

ಪಾವಗಡ ಮೂಲದ ಗೃಹಿಣಿ ತನ್ನ ಪತಿ ಹಾಗೂ ಮಗುವಿನೊಂದಿಗೆ ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. Indian Peace Keeping Force ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತಿ ಗಾಯಗೊಂಡ ನಿಷ್ಕ್ರಿಯನಾಗಿ ಮನೆ ಸೇರಿದ ಮೇಲೆ ಆತನ ಆರೈಕೆ ಜವಾಬ್ದಾರಿಯನ್ನು ಈಕೆ ಹೊತ್ತಿದ್ದಾರೆ. ವೈಟ್ ಫೀಲ್ಡ್ ನಲ್ಲಿ ಖಾಸಗಿ ಕಂಪನಿಯೊಂದರ ಒಡತಿಯಾಗಿರುವ ಈಕೆ ಪಿಎಸ್ ಐ ಅಮಾನತಿನ ಬಗ್ಗೆ ಪ್ರತಿಕ್ರಿಯಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+