ಮೈಸೂರು : ರಜೆ ನೀಡಲಿಲ್ಲ ಎಂದು ಪೇದೆ ಆತ್ಮಹತ್ಯೆ

ಕ್ರೇಂದ್ರಿಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಪೇದೆ ನರೇಶ್ ಕುಮಾರ್ (35) ಮೃತಪಟ್ಟ ದುರ್ದೈವಿ. ಮೈಸೂರಿನ ಇಲವಾಲ ಬಳಿ ತನ್ನ ಸರ್ವೀಸ್ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ನರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಹರಿಯಾಣದವರಾದ ನರೇಶ್ ಗೆ ಮೇಲಾಧಿಕಾರಿಗಳು ರಜೆ ನೀಡರಲಿಲ್ಲ.
ಮನೆಯವರು ಊರಿಗೆ ಬರುವಂತೆ ಹೆಚ್ಚಿನ ಒತ್ತಡ ಹಾಕುತ್ತಿದ್ದರು ಇದರಿಂದ ಬೇಸತ್ತ ನರೇಶ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2008ರಲ್ಲಿ ನರೇಶ್ ಕೇಂದ್ರಿಯ ಭದ್ರತಾ ಪಡೆಗೆ ಸೇರ್ಪಡೆಗೊಂಡಿದ್ದರು. ಆರ್ ಎಂಪಿಯ ಭದ್ರತೆಗಾಗಿ ನರೇಶ್ ರನ್ನು ನಿಯೋಜಿಸಲಾಗಿತ್ತು.
ಇವರ ಪತ್ನಿ ಮತ್ತು ಮಕ್ಕಳು ಹರಿಯಾಣದಲ್ಲಿದ್ದರು. ಆದರೆ, ಅವರನ್ನು ನೋಡಲು ತೆರಳುವುದಕ್ಕೂ ಅಧಿಕಾರಿಗಳು ರಜೆ ನೀಡಿರಲಿಲ್ಲ. ಊರಿಗೆ ಬರುವಂತೆ ಮನೆಯವರು ಪದೇ ಪದೇ ಒತ್ತಡ ಹಾಕುತ್ತಿದ್ದರು. ಇದರಿಂದ ಬೇಸತ್ತ ನರೇಶ್ ಶುಕ್ರವಾರ ಮುಂಜಾನೆ ತನ್ನ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಹಾವೇರಿಯಲ್ಲಿ ಪೇದೆ ಆತ್ಮಹತ್ಯೆ)
ಶುಕ್ರವಾರ ಬೆಳಗ್ಗೆ ನರೇಶ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಬಿಳಿಕೆರೆ ಪೊಳೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಸಹ ರಾಜ್ಯ ಪೊಲೀಸ್ ಇಲಾಖೆಯ ಪೇದೆಗಳಿಬ್ಬರು ರಜೆಯ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಒಬ್ಬರು ಬದುಕಿದರೆ, ಮತ್ತೊಬ್ಬ ಪೇದೆ ಮೃತಪಟ್ಟಿದ್ದರು.












Click it and Unblock the Notifications