ಸ್ನೇಹಿತನ ಕತ್ತುಕೊಯ್ದ ಕೊಂದ ರೂಂಮೇಟ್ಸ್

ಮುನೆ ಕೊಳಲಿನಲ್ಲಿ ರೂಂ ಮಾಡಿಕೊಂಡು ಮಣಿಪುರ ಮೂಲಕ ಶಂಷೀರ್ (30), ಸಜೀರ್ ಮತ್ತು ಇತರ ಇಬ್ಬರು ವಾಸಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ನಾಲ್ವರು ಕ್ಷುಲ್ಲಕ ಕಾರಣಗಳಿಗೆ ಜಗಳ ಪ್ರಾರಂಭಿಸಿದ್ದಾರೆ. ಜಗಳ ವಿಕೋಪಕ್ಕೆ ಹೋದಾಗ ಅಪ್ಪು ಮತ್ತು ತುಂಕಿ ಎನ್ನುವ ಇಬ್ಬರು ಶಂಷೀರ್ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
ಘಟನೆಯನ್ನು ತಡೆಯಲು ಹೋದ ಸಜೀರ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಕೊಲೆ ಮಾಡಿರುವ ಅಪ್ಪು, ತುಂಕಿ ಪರಾರಿಯಾಗಿದ್ದಾರೆ. ಎಚ್ಎಎಲ್ ಪೊಲೀಸರು ಸ್ಥಳಕ್ಕೆ ಆಗಮಿನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
20 ದಿನಗಳ ಹಿಂದೆ ಆಗಮಿಸಿದ್ದರು : ಮೃತ ಶಂಷೀರ್ ಮತ್ತು ಗಾಯಗೊಂಡಿರುವ ಸಜೀರ್ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ರೂಮಿಗೆ ಅಪ್ಪು ಮತ್ತು ತುಂಕಿ ಕೇವಲ 20 ದಿನಗಳ ಹಿಂದೆ ಆಗಮಿಸಿದ್ದರು. ನಗರದಲ್ಲಿ ಕೆಲಸ ಹುಡುಕಲು ಬಂದಿದ್ದ ಇವರು ಶಂಷೀರ್ ರೂಂನಲ್ಲಿ ವಾಸಿಸುತ್ತಿದ್ದರು.












Click it and Unblock the Notifications