4 ವರ್ಷ ನಾಪತ್ತೆ; 2 ಮಕ್ಕಳೊಂದಿಗೆ ವಿವಾಹಿತೆ ಪತ್ತೆ

ಏನಾಯ್ತು!?: ಈಗ 28 ವರ್ಷದವರಾಗಿರುವ ಸುಗಂಧಿ, ಅನ್ನು ಲಿಂಗಾಯತ್ ಎಂಬುವವರ ಪುತ್ರಿ. ಈಕೆ ಸವಣಳು ಗ್ರಾಮದಿಂದ ಈ ಹಿಂದೆ ನಾಪತ್ತೆಯಾಗಿದ್ದಳು. 2008ರಲ್ಲಿ ಶಿಕಾರಿಪುರದ ನಾಗರಾಜ ಎಂಬುವವರ ಜತೆ ಈಕೆಯ ವಿವಾಹ ನೆರವೇರಿತ್ತು. ಆದರೆ ಮದುವೆಯಾದ ಹೊಸದರಲ್ಲಿಯೇ ಆಕೆಗೆ ಅಕ್ರಮ ಸಂಬಂಧವಿದೆ ಎಂಬುದು ನಾಗರಾಜ ಅವರ ಗಮನಕ್ಕೆ ಬಂದಿತು.
ಇದರಿಂದ ಮುಜುಗುರಕ್ಕೊಳಗಾದ ಸುಗಂಧಿ ಮನೆ ಬಿಟ್ಟುಹೋಗಿದ್ದಳು. ಬೆಳ್ತಂಗಡಿ ಠಾಣೆಯಲ್ಲಿ ಸುಗಂಧಿ ನಾಪತ್ತೆ ಪ್ರಕರಣದ ದಾಖಲಾಗಿತ್ತು.
ಆದರೆ ಬಂಟ್ವಾಳ ತಾಲೂಕಿನಲ್ಲಿ ಬಾಡಿಗೆ ಮನೆಯಲ್ಲಿ ಸುಗಂಧಿ ವಾಸವಾಗಿರುವುದಾಗಿ ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಎಸ್ಸೈ ಯೋಗೇಶ್ ಕುಮಾರ್ ಸ್ಥಳಕ್ಕೆ ತೆರಳಿ, ಆಕೆಯನ್ನು ಊರಿಗೆ ಕರೆತಂದು ಪೋಷಕರ ಕೈಗೆ ಒಪ್ಪಿಸಿದ್ದಾರೆ.
ಮನೆ ಬಿಟ್ಟು ಹೋಗಿದ್ದ ಸುಗಂಧಿ, ಸದಾಶಿವ ಶೆಟ್ಟಿ ಎಂಬ 45 ವರ್ಷದ ವ್ಯಕ್ತಿಯ ಜತೆ ವಾಸವಾಗಿದ್ದಳು ಎಂದು ತಿಳಿದುಬಂದಿದೆ. ಇವರಿಬ್ಬರೂ ಮೂಡಿಗೆರೆಯಲ್ಲಿ 2 ವರ್ಷ ವಾಸವಾಗಿದ್ದರು. ಇತ್ತೀಚೆಗೆ 2 ತಿಂಗಳ ಹಿಂದೆ ಬಂಟ್ವಾಳ ತಾಲೂಕಿನ ಕಾರಿಂಜಾಗೆ ಬಂದಿ ಅಲ್ಲಿ ವಾಸವಾಗಿದ್ದರು.
ಸದಾಶಿವ ಶೆಟ್ಟಿಯ ಸಂಬಂಧಿಯೊಬ್ಬರು ಸುಗಂಧಿ ಸಂಬಂಧಿಯೊಬ್ಬರನ್ನು ವಿವಾಹವಾಗಿದ್ದರು. ಅದಾದನಂತರ ಸದಾಶಿವ-ಸುಗಂಧಿ ಪರಸ್ಪರ ಭೇಟಿಯಾಗುತ್ತಿದ್ದರು. ಆ ವೇಳೆ ಇಬ್ಬರ ಮಧ್ಯೆ ಪ್ರೇಮ ಮೊಳಕೆಯೊಡೆದಿದೆ. ಇದೀಗ ಸದಾಶಿವ-ಸುಗಂಧಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.












Click it and Unblock the Notifications