ಬಜೆಟ್ ಹೊಸ ಸಂಪ್ರದಾಯ ಆರಂಭಿಸಿದ ಎಚ್ಡಿಕೆ!

.Kumaraswamy
ಬೆಂಗಳೂರು, ಜು.3 : ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುವ ತಯಾರಿಯಲ್ಲಿದ್ದರೆ, ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಲಹಾ ರೂಪದ ವರದಿ ನೀಡಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಇಂತಹ ಪ್ರಯತ್ನ ಮಾಡುವ ಮೂಲಕ ಹೊಸ ಸಂಪ್ರದಾಯವೊಂದನ್ನು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಾರಂಭಿಸಿದ್ದಾರೆ. ಸಲಹಾ ರೂಪದ ವರದಿ ನೀಡಲು ಕುಮಾರಸ್ವಾಮಿ ಮಂಗಳವಾರ ಬಜೆಟ್ ಪೂರ್ವ ಸಭೆಯನ್ನು ನಡೆಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕುಮಾರಸ್ವಾಮಿ ನಡೆಸಿದ ಸಭೆಯಲ್ಲಿ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್ ಮುಂತಾದವರು ಪಾಲ್ಗೊಂಡಿದ್ದರು. ಕೃಷಿ ಕ್ಷೇತ್ರದ ಸವಾಲುಗಳು, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯ ಬಗ್ಗೆ ಚರ್ಚೆ ನಡೆಸಲಾಯಿತು.

ನಂತರ ಎಫ್ ಕೆಸಿಸಿಐ ಅಧ್ಯಕ್ಷ ಶಿವಕುಮಾರ್‌, ಕಾಸಿಯಾ ಅಧ್ಯಕ್ಷ ಶಶಿಧರ್‌, ಕರ್ನಾಟಕ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜತೆ ಕೈಗಾರಿಕೆ, ಲೋಕೋಪಯೋಗಿ, ವಿದ್ಯುತ್‌ ಇಲಾಖೆಗಳ ಬಗ್ಗೆ ಕುಮಾರಸ್ವಾಮಿ ಚರ್ಚೆ ನಡೆಸಿ ಅವರ ಮನವಿ ಸ್ವೀಕರಿಸಿದರು.

ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರದ ತಜ್ಞರು, ದಲಿತ ಹಾಗೂ ಕಾರ್ಮಿಕ ಮುಖಂಡರು, ಸಮುದಾಯದ ಸಂಘಟನೆಗಳ ಜೊತೆ ಕುಮಾರಸ್ವಾಮಿ ಒಂದು ವಾರಗಳ ಕಾಲ ಮಾತುಕತೆ ನಡೆಸಲಿದ್ದು, ಎಲ್ಲಾ ಕ್ಷೇತ್ರದ ಜನರ ಮನವಿಯನ್ನು ಆಲಿಸಲಿದ್ದಾರೆ.(ಚೊಚ್ಚಲ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಸಜ್ಜು)

ಸಮಗ್ರ ವರದಿ : ಬಜೆಟ್ ಪೂರ್ವಭಾವಿಯಾಗಿ ಮುಖ್ಯಮಂತ್ರಿ ರೈತ ಮುಖಂಡರು, ಕೈಗಾರಿಕಾ ಸಂಘಟನೆಗಳ ಜೊತೆ ಸಭೆ ನಡೆಸುವುದು ಸಂಪ್ರದಾಯ. ಆದರೆ, ತಾವು ಸಭೆ ನಡೆಸುವ ಮೂಲಕ ಕುಮಾರಸ್ವಾಮಿ ಹೊಸ ಸಂಪ್ರದಾಯ ಪ್ರಾರಂಭಿಸಿದ್ದಾರೆ.

ವಿವಿಧ ಕ್ಷೇತ್ರದ ತಜ್ಞರ ಜೊತೆ ಚರ್ಚಿಸಿದ ನಂತರ, ಕುಮಾರಸ್ವಾಮಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಎಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹಾ ರೂಪದ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಯವರಿಗೆ ಸಲ್ಲಿಲಿದ್ದಾರೆ.

ಜು.12 ರಂದು ಬಜೆಟ್ : ವಿಧಾನಮಂಡಲದ ಬಜೆಟ್‌ ಅಧಿವೇಶನ ಜು.12ರಿಂದ 30ರ ವರೆಗೆ ನಡೆಯಲಿದೆ. ಮೊದಲ ದಿನವೇ ಬಜೆಟ್‌ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೊದಲು ಜು.10ರಿಂದ ಬಜೆಟ್ ಅಧಿವೇಶನ ನಡೆಯಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದನ್ನು ತಳ್ಳಿ ಹಾಕಿರುವ ಸಿಎಂ, ಜು.12ರಿಂದ ಅಧಿವೇಶನ ಮೊದಲ ದಿನವೇ ಬಜೆಟ್ ಮಂಡಿಸಲಿದ್ದೇನೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+