ಇಶ್ರತ್ ನಕಲಿ ಎನ್ ಕೌಂಟರ್: ಪೂರ್ಣ ವರದಿ

2004ರಲ್ಲಿ ಅಹಮದಾಬಾದಿನ ಹೊರವಲಯದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಶ್ರತ್ ಜತೆ ಮೂವರನ್ನು ಪೊಲೀಸರು ಹತ್ಯೆಗೈದಿದ್ದರು. ಆದರೆ ಮುಂಬೈ ಮೂಲದ 19ರ ಹರೆಯದ ಇಶ್ರತ್ ಯಾವುದೇ ಉಗ್ರ ಸಂಘಟನೆಗಳಿಗೆ ಸೇರಿಲ್ಲ, ಈ ಎನ್ ಕೌಂಟರ್ ನಕಲಿ ಎಂದು ಸಿಬಿಐ ಹೇಳಿದೆ.
ಲಭ್ಯ ಮಾಹಿತಿ ಪ್ರಕಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಸಚಿವ ಅಮಿತ್ ಶಾ ಅವರ ಹೆಸರು ಮೊದಲನೇ ದೋಷಾರೋಪಣ ಪಟ್ಟಿಯಲ್ಲಿಲ್ಲ ಎನ್ನಲಾಗಿದೆ. ಪ್ರಸ್ತುತ ಪ್ರಕರಣದ ಬಗ್ಗೆ ಸಿಬಿಐ ಗುಜರಾತ್ ಹೈಕೋರ್ಟಿಗೆ ಸಲ್ಲಿಸಿರುವ ಮೊದಲ ಆರೋಪಪಟ್ಟಿಯಾಗಿದ್ದು, ಪೂರಕ ಚಾರ್ಚ್ ಶೀಟ್ ಸಲ್ಲಿಸುವ ಸಾಧ್ಯತೆಯಿದೆ.
ಆದರೆ, ಇಶ್ರತ್ ಹೊರತು ಪಡಿಸಿ ಹತ್ಯೆಯಾಗಿರುವ ಮೂವರು ವ್ಯಕ್ತಿಗಳಿಗೆ ಉಗ್ರ ಸಂಘಟನೆಯ ಜತೆ ನಂಟು ಇದೆ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾಣೇಶ್ ಪಿಳ್ಳೈ ಅಲಿಯಾಸ್ ಜಾವೇದ್ ಶೇಖ್, ಅಮ್ಜದ್ ಅಲಿ ರಾಣಾ ಮತ್ತು ಜೀಶನ್ ಜೋಹರ್ ಅಹಮದಾಬಾದಿನನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಆದರೆ ಅವರು ಮೋದಿಯವರನ್ನು ಹತ್ಯೆಗೈಯ್ಯಲು ಸಂಚು ಹೂಡಿಲ್ಲ ಎಂದು ಸಿಬಿಐ ಹೇಳಿದೆ. ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳುವುದಕ್ಕಾಗಿ ಇಶ್ರತ್ ಳನ್ನು ಪ್ರಾಣೇಶ್ ಬಳಸಿಕೊಂಡಿದ್ದ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಇಶ್ರತ್ ಲಷ್ಕರೆ ತೊಯ್ಬಾ ಅಥವಾ ಇನ್ಯಾವುದೇ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ ಇನ್ನಿತರ ಆರೋಪಿಗಳು ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ.
ಇಶ್ರತ್ ಜಹಾನ್ ಪ್ರಕರಣದಲ್ಲಿ ಸಿಬಿಐ ಚಾರ್ಚ್ ಶೀಟ್ ಸಲ್ಲಿಕೆಯಾಗಿದೆ. ಅದರೆ, ಇಶ್ರತ್ ಅವರ ಪ್ರಕರಣದಂತೆ ಹಲವಾರು ನಕಲಿ ಎನ್ ಕೌಂಟರ್ ಪ್ರಕರಣಗಳು ರಾಜಕೀಯ ಮುಖಂಡರಿಂದ ದುರ್ಬಳಕೆಗೊಳಗಾಗಿ ಅಮಾಯಕರ ಹತ್ಯೆಯಲ್ಲಿ ಕೊನೆಗೊಳ್ಳುತ್ತಿದೆ. ಇದರ ಬಗ್ಗೆ ವಿಶ್ಲೇಷಣೆ, ಮಾನವ ಹಕ್ಕುಗಳ ಆಯೋಗ ಏನು ಹೇಳುತ್ತದೆ ಮುಂತಾದ ವಿವರಗಳು ನಿತಿ ಸೆಂಟ್ರಲ್ ನ ಈ ಲೇಖನದಲ್ಲಿದೆ ತಪ್ಪದೇ ಓದಿ...












Click it and Unblock the Notifications