ಜೈಪುರದಲ್ಲೊಬ್ಬ ಕೋಟ್ಯಾಧಿಪತಿ ಕಾಂಪೌಂಡರ್!

compounder
ಜೈಪುರ, ಜು.2 : ಸರ್ಕಾರಿ ಆಸ್ಪತ್ರೆಯ ಕಾಂಪೌಂಡರ್ ಒಬ್ಬ ತನ್ನ ಆಸ್ತಿಯ ಮೂಲಕ ದೇಶದ ಜನರನ್ನು ನಿಬ್ಬೆರಗಾಗುವಂತೆ ಮಾಡಿದ್ದಾನೆ. ಜೀವಮಾನ ಫೂರ್ತಿ ಉಳಿತಾಯ ಮಾಡಿದರೂ, ಐವತ್ತು ಲಕ್ಷ ಉಳಿಸಲು ಸಾಧ್ಯವಾಗದ ಕಾಂಪೌಂಡರ್, 200 ಕೋಟಿ ರೂ.ಗಿಂತ ಹೆಚ್ಚು ಆಸ್ತಿಯ ಒಡೆಯನಾಗಿರುವುದು ಅಚ್ಚರಿ ಮೂಡಿಸಿದೆ.

ಕೋಟ್ಯಾಧಿಪತಿ ಕಾಂಪೌಂಡರ್ ಹೆಸರು ಮಹೇಶ್‌ಚಾಂದ್‌ ಶರ್ಮಾ. 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಭಾನುವಾರ ಜೈಪುರದಲ್ಲಿ ಈತನನ್ನು ಬಂಧಿಸಲಾಗಿದೆ. ಶರ್ಮಾ ಮನೆಯನ್ನು ಶೋಧಿಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅವನ ಆಸ್ತಿ ಕಂಡು ದಂದಾಗಿ ಹೋಗಿದ್ದಾರೆ.

ಪ್ರಾಥಮಿಕ ಹಂತದ ತನಿಖೆಯಲ್ಲಿ ಶರ್ಮಾ ಬಳಿ 200 ಕೋಟಿ ರೂ. ಆಸ್ತಿ ಇದೆ ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ಪೂರ್ಣ ತನಿಖೆ ಮುಗಿದ ಮೇಲೆ, ಈ ಮೌಲ್ಯ ಹೆಚ್ಚಾಗಬಹುದು ಎಂಬುದು ಅಧಿಕಾರಿಗಳ ಹೇಳಿಕೆ.

ಮೊದಲು ಸಾಮಾನ್ಯ ಕಾಪೌಂಡರ್ : 1983ರಲ್ಲಿ ಕೆಲಸಕ್ಕೆ ಸೇರುವಾಗ ಶರ್ಮಾ ಸಾಮಾನ್ಯ ಕಾಂಪೌಂಡರ್ ಆಗಿದ್ದ. ಈತನ ಬಳಿ ಪಿತ್ರಾರ್ಜಿತವಾಗಿ ಬಂದ ಕೋಟಿ ರೂ.ಆಸ್ತಿಗಳೇನು ಇರಲಿಲ್ಲ. ಈಗ ಇವನ ಬಳಿ ಇರುವ ಆಸ್ತಿ ಇವನು ಸ್ವತಃ ಸಂಪಾದಿಸಿರುವುದು.

ಕಾಂಪೌಂಡರ್ ಆಗಿ ಸೇವೆಗೆ ಸೇರಿದ್ದ ಶರ್ಮಾ 2007ರಲ್ಲಿ ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ (ಐಎನ್‌ಸಿ)ನ ಸದಸ್ಯನಾಗಿ ನೇಮಕಗೊಂಡಿದ್ದ. ಜೊತೆಗೆ ಕಳೆದ ಮೇ ತಿಂಗಳಲ್ಲಿ ಐಎನ್‌ಸಿಯ ಸಲಹೆಗಾರನಾಗಿಯೂ ನೇಮಕಗೊಂಡಿದ್ದ.

ನಂತರ ನರ್ಸಿಂಗ್ ಕಾಲೇಜುಗಳಿಗೆ ಪರವಾನಿಗೆ ನೀಡುವುದರಲ್ಲಿ ಲಂಚ ಪಡೆಯಲು ಪ್ರಾರಂಭಿಸಿದ ಈತ ಕೋಟಿ ಕೋಟಿ ಹಣ ಸಂಪಾದಿಸಿದ್ದಾನೆ. ಐಎನ್‌ಸಿಯ ಸಲಹೆಗಾರನಾಗಿ ನೇಮಕವಾದ ಬಳಿಕ ತನ್ನ ಕಾಂಪೌಂಡರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾನೆ.

ಶರ್ಮಾ ಕೆಲವೇ ವರ್ಷಗಳಲ್ಲಿ 25ಕ್ಕೂ ಹೆಚ್ಚು ನರ್ಸಿಂಗ್‌ ಕಾಲೇಜುಗಳಲ್ಲಿ ಪಾಲುದಾರಿಕೆ ಪಡೆದುಕೊಂಡಿದ್ದಾನೆ. ಅಲ್ಲದೆ ಇಲ್ಲಿನ ಜೈಪುರದ ವಿದ್ಯುತ್‌ ನಗರದಲ್ಲಿ 800 ಚದರ ಅಡಿ ವಿಸ್ತೀರ್ಣದ ನಿವಾಸ, ಜೈಪುರದ ಹಲವೆಡೆ ಮನೆಗಳು, ರೆಸಾರ್ಟ್‌, ಕೆಲವು ಕಂಪನಿಗಳು ಮತ್ತು ಫಾರ್ಮ್ ಹೌಸ್ ಗಳನ್ನು ಹೊಂದಿದ್ದಾನೆ.

ಶರ್ಮಾ ಮತ್ತು ಆತನ ಪತ್ನಿಯ ಹೆಸರಿನಲ್ಲಿ ನೋಂದಣಿಯಾಗಿರುವ ಒಟ್ಟಾರೆ ಆಸ್ತಿಯ ಮೌಲ್ಯ 200 ಕೋಟಿ ರೂ.ಗೂ ಅಧಿಕ. ಈತನ ಬಳಿ ಇರುವ ಬ್ಯಾಂಕ್‌ ಲಾಕರ್ ಗಳು ಮತ್ತು ಬೇನಾಮಿ ಹೆಸರಿನಲ್ಲಿರುವ ಆಸ್ತಿಯ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

ಇಷ್ಟೊಂದು ಹಣ ಹೇಗೆ : ರಾಜ್ಯದ ನರ್ಸಿಂಗ್‌ ಕಾಲೇಜುಗಳು ಹೊಸ ಕೋರ್ಸ್‌ ಆರಂಭ ಸೇರಿದಂತೆ ಪ್ರತಿಯೊಂದಕ್ಕೂ ಐಎನ್‌ಸಿ ಅನುಮತಿ ಪಡೆಯುವುದು ಅಗತ್ಯ. ಇದನ್ನೇ ಬಂಡವಾಳ ಮಾಡಿಕೊಂಡ ಶರ್ಮಾ ನರ್ಸಿಂಗ್ ಕಾಲೇಜುಗಳಿಂದ ಲಂಚ ಪಡೆದಿದ್ದಾನೆ.

ಅಲ್ಲದೆ ಪ್ರತಿಯೊಂದು ಕಾಲೇಜಿನ ತಪಾಸಣೆಗೆ ಹೋದಾಗಲೂ ಏನಾದರೂ ಹುಳುಕು ಹುಡುಕಿ, ಅವರಿಂದ ಲಂಚ ಪಡೆದಿದ್ದಾನೆ. ಭಾನುವಾರವೂ ಹೀಗೆ 5 ಲಕ್ಷ ಲಂಚ ಸ್ಚೀಕರಿಸುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+